ಬೆಂಗಳೂರಿನಲ್ಲಿ ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್- ವಿಡಿಯೋ ವೈರಲ್

ಎಲೆಕ್ಟ್ರಾನಿಕ್ ಸಿಟಿ ಒನ್ ವೇಯಲ್ಲಿ ಬೈಕ್ ಸವಾರನೊಬ್ಬ ತುಂಬಾ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಈತನ ಡೇಂಜರಸ್ ಡ್ರೈವಿಂಗ್ ಕಂಡು ವಾಹನ ಸವಾರರು ಕೂಡ ಕಂಗಾಲಾಗಿದ್ದಾರೆ.

Written by - Yashaswini V | Last Updated : Feb 7, 2023, 01:13 PM IST
  • ಬೆಂಗಳೂರಿನಲ್ಲಿ ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್
  • ಎಲೆಕ್ಟ್ರಾನಿಕ್ ಸಿಟಿ ಒನ್ ವೇಯಲ್ಲಿ ಸ್ಪೀಡ್‌ ಬೈಕ್‌ ಡ್ರೈವ್
  • ಡೇಂಜರಸ್ ಡ್ರೈವಿಂಗ್ ಕಂಡು ಕಂಗಲಾದ ವಾಹನ ಸವಾರರು
ಬೆಂಗಳೂರಿನಲ್ಲಿ ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್- ವಿಡಿಯೋ ವೈರಲ್  title=
Bike Wheeling Viral Video

ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಸವಾರನ ಡೇಂಜರಸ್ ಡ್ರೈವಿಂಗ್ ದೃಶ್ಯ ಸಖತ್ ಸದ್ದು ಮಾಡುತ್ತಿದೆ. ಒನ್ ವೇಯಲ್ಲಿ ಬೈಕ್ ವಿಲ್ಹಿಂಗ್‌ ಮಾಡಿ ದುಸ್ಸಾಹಸ ಮೆರೆದಿರುವ ಬೈಕ್ ಸವಾರನ ಹುಚ್ಚಾಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡೆಡ್ಲಿ ಬೈಕ್ ವಿಲ್ಹಿಂಗ್‌ ವಿಡಿಯೋ ವೈರಲ್ ಆಗಿದೆ. 

ಎಲೆಕ್ಟ್ರಾನಿಕ್ ಸಿಟಿ ಒನ್ ವೇಯಲ್ಲಿ ಬೈಕ್ ಸವಾರನೊಬ್ಬ ತುಂಬಾ ವೇಗವಾಗಿ ಬೈಕ್ ಚಲಾಯಿಸುತ್ತಿದ್ದು, ಈತನ ಡೇಂಜರಸ್ ಡ್ರೈವಿಂಗ್ ಕಂಡು ವಾಹನ ಸವಾರರು ಕೂಡ ಕಂಗಾಲಾಗಿದ್ದಾರೆ.

ಇದನ್ನೂ ಓದಿ- Viral Video : ಹೀಗೆ ತಯಾರಾಗುತ್ತಾ ನೂಡಲ್ಸ್‌? ಈ ವಿಡಿಯೋ ನೋಡಿದ್ರೆ ಜನ್ಮದಲ್ಲೇ ತಿನ್ನಲ್ಲ.!

ಸದ್ಯ ಈ ಬೈಕ್ ಸವಾರನ ಹುಚ್ಚಾಟವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಫ್ಲೋಡ್ ಮಾಡಲಾಗಿದ್ದು, ಈ ಬೈಕ್ ಸವಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದೊಂದು ಕ್ರಿಮಿನಲ್ ಅಪರಾಧ, ಕೂಡಲೇ ಬೈಕ್ ಸವಾರನ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಇದನ್ನೂ ಓದಿ- ದೈತ್ಯ ಮೊಸಳೆಯನ್ನು ಬೈಕ್ ಮೇಲೆ ಮಲಗಿಸಿ, ಬೈಕ್ ಸವಾರಿ! ಈ ವೈರಲ್ ವಿಡಿಯೋ ನೀವು ನೋಡಲೇಬೇಕು

ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬೈಕ್ ಸವಾರನ ಡೆಡ್ಲಿ ಡ್ರೈವಿಂಗ್, ದಾರಿಯಲ್ಲಿ ಬೈಕ್ ಸವಾರನಿಗೆ  ಕಿವಿ ಮಾತು ಹೇಳುತ್ತಿರುವ ಸವಾರರು, ಯಾವುದನ್ನು ಲೆಕ್ಕಿಸದೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವ ಸವಾರನನ್ನು ಕಾಣಬಹುದು.<

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News