ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ

Earthquake In Turkey: ಟರ್ಕಿಯಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 04:17ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Feb 6, 2023, 08:53 AM IST
  • ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಗಾಜಿಯಾಂಟೆಪ್ ಬಳಿ 17.9 ಕಿಲೋಮೀಟರ್ ಆಳದಲ್ಲಿದೆ ಎಂದು ಹೇಳಲಾಗಿದೆ. ಗಾ
  • ಜಿಯಾಂಟೆಪ್‌ನ ದಕ್ಷಿಣ ಪ್ರದೇಶ -- ಟರ್ಕಿಯ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ.
  • ಎಎಫ್‌ಪಿ ವರದಿಗಾರರ ಪ್ರಕಾರ ಲೆಬನಾನ್, ಸಿರಿಯಾ ಮತ್ತು ಸೈಪ್ರಸ್‌ನಲ್ಲಿ ಕಂಪನದ ಅನುಭವವಾಗಿದೆ.
ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ  title=
Earthquake in Turkey

Earthquake In Turkey: ಟರ್ಕಿಯಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 04:17ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಭೂಕಂಪದ ಕೇಂದ್ರ ಬಿಂದು ಗಾಜಿಯಾಂಟೆಪ್ ಬಳಿ 17.9 ಕಿಲೋಮೀಟರ್  ಆಳದಲ್ಲಿದೆ ಎಂದು ಹೇಳಲಾಗಿದೆ. ಗಾಜಿಯಾಂಟೆಪ್‌ನ ದಕ್ಷಿಣ ಪ್ರದೇಶ -- ಟರ್ಕಿಯ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ಸಿರಿಯಾದ ಗಡಿಯಾಗಿದೆ. ಎಎಫ್‌ಪಿ ವರದಿಗಾರರ ಪ್ರಕಾರ ಲೆಬನಾನ್, ಸಿರಿಯಾ ಮತ್ತು ಸೈಪ್ರಸ್‌ನಲ್ಲಿ ಕಂಪನದ ಅನುಭವವಾಗಿದೆ.

ಇದನ್ನೂ ಓದಿ- Chinese Balloon: ಚೀನಾದ ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ..!

ಮಾಧ್ಯಮ ವರದಿಗಳ ಪ್ರಕಾರ, ಈ ತೀವ್ರ ಭೂಕಂಪದಿಂದಾಗಿ ಅನೇಕ ಕಟ್ಟಡಗಳು ನೆಲಕ್ಕುರುಳಿವೆ. ಇದರೊಂದಿಗೆ ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Viral News: ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನು ಅದರ ದೇಹದಿಂದ ಬೇರ್ಪಡಿಸಿದ ವ್ಯಕ್ತಿ ..ಮುಂದೇನಾಯ್ತು ಗೊತ್ತಾ?

ಆದಾಗ್ಯೂ, ಟರ್ಕಿಯ ಆಡಳಿತವು ಈ ಭೂಕಂಪದ ಬಗ್ಗೆ ಮತ್ತು ಯಾವುದೇ ಹಾನಿಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಕಾಣಬಹುದಾಗಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News