ಬೆಂಗಳೂರಲ್ಲಿ ಸೈಕೋ ಮನಸ್ಥಿತಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತಮ್ ಕುಮಾರ್ ಬಂಧಿತ ಆರೋಪಿ. ಈತ ಅನಾಥನಾಗಿದ್ದು ಆಶ್ರಯ ನೀಡಿ ಸಾಕಿ ಸಲಹಿದ ತಾಯಿಯನ್ನು ಬೆಂಕಿ ಇಟ್ಟು ಕೊಂದಿದ್ದ. ಈಗ ಸಾಕು ತಂದೆಯೊಂದಿಗೂ ಜಗಳ ತೆಗೆದು ಆಸ್ತಿಗಾಗಿ ಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.