Parrot Arrested in liquor mafia case : ಲಿಕ್ಕರ್ ಮಾಫಿಯಾ ಪ್ರಕರಣದಲ್ಲಿ ಪೊಲೀಸರು ಗಿಳಿಯೊಂದನ್ನು ಬಂಧಿಸಿದ್ದಾರೆ. ಆರೋಪಿಯ ಮುದ್ದಿನ ಗಿಳಿಯನ್ನು ವಿಚಾರಣೆಗೊಳಪಡಿಸಿ ಪ್ರಕರಣವನ್ನು ಭೇದಿಸಲು ಗಯಾ ಪೊಲೀಸರು ಇದನ್ನು ಬಂಧಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.
ಬಿಹಾರದ ಗುರುವಾ ಪೊಲೀಸ್ ಠಾಣೆಯ ಪಾಟ್ನಾದ ಸಬ್ ಇನ್ಸ್ಪೆಕ್ಟರ್ ಕನ್ಹಯ್ಯಾ ಕುಮಾರ್ ಅವರಿಗೆ ಅಕ್ರಮ ಮದ್ಯ ಮಾರಾಟದ ಸುಳಿವು ಸಿಕ್ಕಿತ್ತು. ಇದರಿಂದ ಮಂಗಳವಾರ ರಾತ್ರಿ ಅಮೃತ್ ಮಲ್ಲಾಹ್ ಮನೆ ಮೇಲೆ ಪೊಲೀಸ್ ತಂಡ ದಾಳಿ ನಡೆಸಿದೆ. ಆದರೆ ಪೊಲೀಸರು ಆರೋಪಿಯ ಮನೆಗೆ ತಲುಪುವ ಮೊದಲೇ ಆತನ ಕುಟುಂಬಸ್ಥರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಆದರೆ ಅವರು ಮಾತನಾಡುವ ಗಿಳಿಯನ್ನು ಅಲ್ಲಿಯೇ ಪಂಜರದಲ್ಲಿ ಬಿಟ್ಟಿದ್ದಾರೆ. ಪೊಲೀಸರ ಇರುವಿಕೆಯನ್ನು ಗಿಳಿ ಗ್ರಹಿಸಿ ಸೂಚನೆ ನೀಡುತ್ತಿದ್ದರಿಂದ ಅಮೃತ್ ಮಲ್ಲಾಹ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ಭಾವಿಸಿದ್ದರು.
ಮಧ್ಯ ಮಾರಾಟದಲ್ಲಿ ಗಿನಿರಾಮ ಅರೆಸ್ಟ್..
‘ಏ ತೋತ್ವಾ, ಕಹಾ ಗಯಾ ತುಮ್ಹಾರ ಮಲಿಕ್’: ಬಿಹಾರ ಪೊಲೀಸರು ಮದ್ಯದ ಮಾಫಿಯಾವನ್ನು ಹಿಡಿಯಲು ಹಿಡಿಯಲು ಹೋದಾಗ ಮಾಲೀಕನ ಬದಲಿಗೆ ಗಿಣಿಯನ್ನು ಸೆರೆ ಹಿಡಿದಿರುವ ಘಟನೆ ನಡೆದಿದೆ pic.twitter.com/i0XfwIckEA— ಸು.ಶಿ.ಲ (@sunilslamani4) January 27, 2023
ಇದನ್ನೂ ಓದಿ : Aero India Show: ಬೆಂಗಳೂರಿನಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟ ನಿಷೇಧ
ಇದರೊಂದಿಗೆ ಎಸ್ಐ ಕನ್ಹಯ್ಯ ಕುಮಾರ್ ಪಂಜರದ ಸಮೇತ ಗಿಳಿಯನ್ನು ಹಿಡಿದು ಠಾಣೆಗೆ ತಂದರು. ನಂತರ ಗಿಳಿಗೆ ಮಾಲೀಕನ ಬಗ್ಗೆ ಕೇಳಿದ್ದಾರೆ. ಹೇ ಗಿಳಿ, ಅಮೃತ್ ಮಲ್ಲಾಹ್ ಎಲ್ಲಿ ಹೋದ? ನಿಮ್ಮ ಯಜಮಾನ ಎಲ್ಲಿದ್ದಾರೆ ಅವರು ನಿನ್ನನ್ನು ಮನೆಗೆ ಏಕೆ ಒಂಟಿಯಾಗಿ ಬಿಟ್ಟರು? ಎಂದು ಎಸ್ಐ ಕನ್ಹಯ್ಯಾ ಕುಮಾರ್ ಪ್ರಶ್ನಿಸಿದರು. ತಕ್ಷಣ ಗಿಳಿ ‘ಕಟೋರೆ-ಕಟೋರೆ’ ಎಂದು ಕೂಗಿತು. ಮಾಲೀಕನ ಬಗ್ಗೆ ಕೇಳಿದರೆ, ಗಿಳಿ ಮೌನವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧವಿರುವುದು ಗೊತ್ತೇ ಇದೆ. ಅಕ್ರಮ ಮದ್ಯ ಸಾಗಾಟ ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ. ಕಳೆದ ಎರಡು ವರ್ಷಗಳಲ್ಲಿ 2.54 ಲಕ್ಷಕ್ಕೂ ಹೆಚ್ಚು ಜನರನ್ನು ಮದ್ಯದ ಕಾನೂನು ಉಲ್ಲಂಘನೆಗಾಗಿ ಬಂಧಿಸಲಾಗಿದೆ.
ಇದನ್ನೂ ಓದಿ : ಇಂಡೋ-ಕೀವೀಸ್ ಪಂದ್ಯ ವೀಕ್ಷಿಸಲು ಬಂದ MS Dhoni-Sakshi: ವಿಶೇಷ ಪ್ರೀತಿ ತೋರಿಸಿದ ಅಭಿಮಾನಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.