Affordable Electric Cars: ಅತ್ಯುತ್ತಮ ಮೈಲೇಜ್ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳಿವು

Affordable Electric Cars: ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಒಲವು ಹೆಚ್ಚಾಗಿದೆ. ಟಾಟಾ ಮೋಟಾರ್ಸ್ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ಮಾರಾಟಗಾರರಾಗಿದ್ದಾರೆ.

Affordable Electric Cars: ಪ್ರಸ್ತುತ ತೈಲ ದರಗಳು  ಗಗನಮುಖಿಯಾಗಿರುವುದರಿಂದ ಬಹುತೇಕ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಈ ಫೋಟೋ ಗ್ಯಾಲರಿಯಲ್ಲಿ ಅತ್ಯುತ್ತಮ ಮೈಲೇಜ್ ಜೊತೆಗೆ ಕೈಗೆಟುಕುವ ಬೆಲೆಯಲ್ಲಿ  ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ದಿನೇ ದಿನೇ ಪೆಟ್ರೋಲ್-ಡೀಸೆಲ್ ದರಗಳು ಆಗಸಕ್ಕೇರುತ್ತಿದೆ. ಇದರಿಂದ ಬೇಸತ್ತಿರುವ ಜನಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ಅಗ್ಗದ ಎಲೆಕ್ಟ್ರಿಕ್ ವಾಹನಗಳಿಗೆ ತುಂಬಾ ಬೇಡಿಕೆ ಇದೆ. ದೇಶದಲ್ಲಿ ಕಾರು ಮಾರುಕಟ್ಟೆಯಲ್ಲಿ ಇವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಟಾಟಾ ಮೋಟಾರ್ಸ್ ಮತ್ತು ಮಾರುತಿ ಹೊರತುಪಡಿಸಿ, ಇತರ ಕಂಪನಿಗಳು ಕೂಡ ಸ್ಪರ್ಧೆ ನೀಡಲು ಸಜ್ಜಾಗಿವೆ. ಈ ಫೋಟೋ ಗ್ಯಾಲರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮೈಲೇಜ್ ನೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ತಿಳಿಯೋಣ...

2 /5

ಭಾರತೀಯ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ಪ್ರಸ್ತುತ ಅತಿದೊಡ್ಡ ಇವಿ ಮಾರಾಟಗಾರರಾಗಿರುವ ಟಾಟಾ ಮೋಟಾರ್ಸ್ ಕಂಪನಿಯ ಟಿಯಾಗೋ ಇವಿ ಅಗ್ಗದ ದರದಲ್ಲಿ ಲಭ್ಯವಿರುವ ಅತ್ಯುತ್ತಮ ಕಾರುಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರ ಬೆಲೆ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂ.ಗಳವರೆಗೆ ಇದೆ. ಈ ಕಾರು 19.2kWh ಮತ್ತು 24kWh ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ.  ದೊಡ್ಡ ಬ್ಯಾಟರಿಯು ಫುಲ್ ಚಾರ್ಜ್‌ನಲ್ಲಿ 315 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.  

3 /5

ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋಗೆ ಕಠಿಣ ಸ್ಪರ್ಧೆಯೊಡ್ಡಲು ಸಿಟ್ರೊಯೆನ್ ಕಂಪನಿಯಿಂದ ಸಿಟ್ರೊಯೆನ್ ಇಸಿ3 ಇವಿ ಅನ್ನು ಬಿಡುಗಡೆ ಮಾಡಲಾಗಿದೆ. ಇದು 29.2kWh ಬ್ಯಾಟರಿ ಪ್ಯಾಕ್ ಮಾಡಲಿದ್ದು ಇದು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 57bhp ಪವರ್ ಮತ್ತು 143nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 320 ಕಿಮೀ ವ್ಯಾಪ್ತಿಯನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಕಾರ್ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದ್ದು, ಇದರ ಬೆಲೆ ಸುಮಾರು 10-12 ಲಕ್ಷ ರೂ.ಗಳಿರಬಹುದು ಎಂದು ಅಂದಾಜಿಸಲಾಗಿದೆ.

4 /5

ಪ್ರಸಿದ್ಧ ಎಂಜಿ ಕಂಪನಿಯು ತನ್ನ ತ್ರಿಬಲ್ ಡೋರ್ ನ ಎಂಜಿ ಏರ್ ಇವಿ ಅನ್ನು ಭಾರತದಲ್ಲಿ ಪರಿಚಯಿಸಲು ಸಜ್ಜಾಗಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಎಂಜಿ ಏರ್ ಇವಿಯ ಉದ್ದ ಸುಮಾರು  2.9 ಮೀಟರ್ ಆಗಿರುತ್ತದೆ. ಇದು ಸುಮಾರು 20-25kWh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರಲಿದೆ ಮತ್ತು ಪೂರ್ಣ ಚಾರ್ಜ್‌ನಲ್ಲಿ 200-300 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಆರಂಭಿಕ ಬೆಲೆ 10 ಲಕ್ಷ ರೂ.ಗಳು.

5 /5

ಕಾರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಕಾರುಗಳನ್ನು ಪರಿಚಯಿಸಿ ಖ್ಯಾತಿ ಪಡೆದಿರುವ ಮಾರುತಿ ಸುಜುಕಿ ಈ ಬಾರಿಯ ಆಟೋ ಎಕ್ಸ್ಪೋದಲ್ಲಿ ತನ್ನ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. 4.2 ಮೀಟರ್‌ಗಿಂತಲೂ ಉದ್ದವಾಗಿರುವ ಹೊಸ ಮಾರುತಿ ಎಲೆಕ್ಟ್ರಿಕ್ ಎಸ್‌ಯುವಿ  60kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಪೂರ್ಣ ಚಾರ್ಜ್‌ನಲ್ಲಿ 550 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಕಾರಿನ ಬೆಲೆ 13 ರಿಂದ 15 ಲಕ್ಷ ರೂ. ಎನ್ನಲಾಗಿದೆ.