Post Office Saving Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆಯಿಂದ ಉತ್ತಮ ಆದಾಯದ ಜೊತೆಗೆ ತೆರಿಗೆ ಕೂಡ ಉಳಿತಾಯ

Tax Saving Scheme: ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅಪಾಯ ಮುಕ್ತವಾಗಿವೆ. ಮಾತ್ರವಲ್ಲ, ಇದರಲ್ಲಿ ನೀವು ನಿಶ್ಚಿತ ಆದಾಯವನ್ನೂ ಗಳಿಸಬಹುದು. ನೀವು ಉಳಿತಾಯದ ಜೊತೆಗೆ ತೆರಿಗೆ ಉಳಿಸಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಕೆಲವು ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿವೆ. ಅಂತಹ ಯೋಜನೆಗಳ ಬಗ್ಗೆ ತಿಳಿಯೋಣ...

Written by - Yashaswini V | Last Updated : Jan 18, 2023, 03:01 PM IST
  • ಎನ್‌ಎಸ್‌ಸಿ ಯೋಜನೆಯು 5 ವರ್ಷಗಳ ಮೆಚ್ಯೂರಿಟಿ ಅವಧಿಯೊಂದಿಗೆ ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ.
  • ಎನ್‌ಎಸ್‌ಸಿಯನ್ನು ದೇಶದಾದ್ಯಂತ ಹರಡಿರುವ ಅಂಚೆ ಕಚೇರಿ ಶಾಖೆಗಳಲ್ಲಿ ಎಲ್ಲಿ ಬೇಕಾದರೂ ತೆರೆಯಬಹುದು.
  • ಈ ಯೋಜನೆಯು ಪ್ರಸ್ತುತ ಅರ್ಧ-ವಾರ್ಷಿಕವಾಗಿ 7 ಪ್ರತಿಶತದಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ.
Post Office Saving Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆಯಿಂದ ಉತ್ತಮ ಆದಾಯದ ಜೊತೆಗೆ ತೆರಿಗೆ ಕೂಡ ಉಳಿತಾಯ  title=
Tax Saving Scheme

Tax Saving Scheme: ಭವಿಷ್ಯದ ದೃಷ್ಟಿಯಿಂದ ಉಳಿತಾಯ ಬಹಳ ಮುಖ್ಯ. ಇದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕೆಲವರು ಉತ್ತಮ ಆದಾಯ ಗಳಿಸಲು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಇನ್ನೂ ಕೆಲವರು ತೆರಿಗೆ ಉಳಿಸುವ ಸಲುವಾಗಿ ಹಣವನ್ನು ಹೂಡಿಕೆ ಮಾಡುತ್ತಾರೆ. ಆದರೆ, ಅಂಚೆ ಕಚೇರಿಯಲ್ಲಿ ಅಂತಹ ಹಲವು ಯೋಜನೆಗಳು ಲಭ್ಯವಿದ್ದು, ಈ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯದ ಜೊತೆಗೆ ತೆರಿಗೆಯನ್ನೂ ಉಳಿಸಬಹುದು. 

ನೀವೂ ಕೂಡ ಅಂತಹ ಯೋಜನೆಗಳನ್ನು ಹುಡುಕುತ್ತಿದ್ದರೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ NSC ಅತ್ಯುತ್ತಮ ಆಯ್ಕೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಕಡಿಮೆ ಅಪಾಯದ ಹೂಡಿಕೆಯಾಗಿದ್ದು ಇದರಲ್ಲಿ ಹೂಡಿಕೆ ಮಾಡುವುದರಿಂದ ಹಲವು ಪ್ರಯೋಜನಗಳು ಲಭ್ಯವಿದೆ. ತೆರಿಗೆಯಲ್ಲಿ ಉಳಿಸುವಾಗ ಸ್ಥಿರವಾದ ಬಡ್ಡಿಯನ್ನು ಗಳಿಸಲು ಸುರಕ್ಷಿತ ಹೂಡಿಕೆ ಮಾರ್ಗವನ್ನು ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಯೋಜನೆ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ಮಾರ್ಚ್ 2023 ರಲ್ಲಿ ವೇತನದಲ್ಲಿ 90 ಸಾವಿರ ಹೆಚ್ಚಳ! ಇಲ್ಲಿದೆ ಲೆಕ್ಕಾಚಾರ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ NSC ಯೋಜನೆಯು ಭಾರತ ಸರ್ಕಾರದ ಉಪಕ್ರಮವಾಗಿದ್ದು, ನೀವು ಭಾರತದ ಯಾವುದೇ ಅಂಚೆ ಕಚೇರಿ ಶಾಖೆಯಲ್ಲಿ ಇದನ್ನು ತೆರೆಯಬಹುದಾಗಿದೆ. ಇದು ಉಳಿತಾಯ ಬಾಂಡ್ ಆಗಿದ್ದು, ಗ್ರಾಹಕರನ್ನು ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಆದಾಯದ ಹೂಡಿಕೆದಾರರು ಮತ್ತು ಆದಾಯ ತೆರಿಗೆ ವಿನಾಯಿತಿಗೆ ಅರ್ಹರಾಗಿರುವವರಿಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ- ಬಜೆಟ್ ಮಂಡನೆಗೂ ಮುನ್ನವೇ ನೌಕರ ವರ್ಗಕ್ಕೆ ಭಾರಿ ಸಂತಸದ ಸುದ್ದಿ! ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಗೊತ್ತಾ?

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾದುವುದರಿಂದ ಸಿಗುವ ಪ್ರಯೋಜನಗಳು:
* ಎನ್‌ಎಸ್‌ಸಿಯನ್ನು ದೇಶದಾದ್ಯಂತ ಹರಡಿರುವ ಅಂಚೆ ಕಚೇರಿ ಶಾಖೆಗಳಲ್ಲಿ ಎಲ್ಲಿ ಬೇಕಾದರೂ ತೆರೆಯಬಹುದು. 
* ಈ ಯೋಜನೆಯು ಪ್ರಸ್ತುತ ಅರ್ಧ-ವಾರ್ಷಿಕವಾಗಿ 7 ಪ್ರತಿಶತದಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. 
* ಪಿಪಿಎಫ್ ಗಿಂತ ಭಿನ್ನವಾಗಿರುವ ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. 
* ಈ ಯೋಜನೆಯಡಿ ತೆರೆಯಲಾದ ಖಾತೆಗಳು  ಠೇವಣಿ ಮೊತ್ತವು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ.
* ಎನ್‌ಎಸ್‌ಸಿ ಯೋಜನೆಯು 5 ವರ್ಷಗಳ ಮೆಚ್ಯೂರಿಟಿ ಅವಧಿಯೊಂದಿಗೆ ಮಧ್ಯಮ ಅವಧಿಯ ಉಳಿತಾಯ ಯೋಜನೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News