Astro Tips: ಮಂಗಳವಾರ-ಶನಿವಾರ ರಾತ್ರಿ ಈ ಕೆಲಸ ಮಾಡಿದ್ರೆ ಹನುಮಂತನ ಕೃಪೆಯಿಂದ ನಿಮ್ಮ ಆಸೆ ಈಡೇರುತ್ತದೆ

ಹನುಮ ದೇವರ ಆಶೀರ್ವಾದ ಪಡೆಯಲು ಮತ್ತು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಜ್ಯೋತಿಷ್ಯದಲ್ಲಿ ಹಲವಾರು ಪರಿಹಾರ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ದಿನ ಭಕ್ತಿಯಿಂದ ಪೂಜಿಸಿದರೆ ಯಾವುದೇ ಒಬ್ಬ ವ್ಯಕ್ತಿಯು ಶನಿ ದೋಷದಿಂದ ಮುಕ್ತನಾಗುತ್ತಾನೆ. ಆತನ ಜಾತಕದ ಮೇಲೆ ಅಶುಭ ಗ್ರಹಗಳ ಪ್ರಭಾವವು ಕೊನೆಗೊಳ್ಳುತ್ತದೆ.

Written by - Puttaraj K Alur | Last Updated : Jan 17, 2023, 12:08 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಾಯುಪುತ್ರನ ಕೃಪೆಯಿಂದ ಜೀವನದಲ್ಲಿ ಸುಖ-ಸಂತೋಷ ಸಿಗುತ್ತದೆ
  • ಮಂಗಳವಾರ ಮತ್ತು ಶನಿವಾರದಂದು ಭಕ್ತಿಯಿಂದ ಪೂಜಿಸಿದರೆ ಹನುಮಂತನ ಆಶೀರ್ವಾದ ದೊರೆಯುತ್ತದೆ
  • ಆಂಜನೇಯನನ್ನು ಭಕ್ತಿಯಿಂದ ಪೂಜಿಸುವ ವ್ಯಕ್ತಿಗೆ ಶನಿಯ ಯಾವುದೇ ಅಶುಭ ಪರಿಣಾಮ ಉಂಟಾಗುವುದಿಲ್ಲ
Astro Tips: ಮಂಗಳವಾರ-ಶನಿವಾರ ರಾತ್ರಿ ಈ ಕೆಲಸ ಮಾಡಿದ್ರೆ ಹನುಮಂತನ ಕೃಪೆಯಿಂದ ನಿಮ್ಮ ಆಸೆ ಈಡೇರುತ್ತದೆ title=
ಹನುಮ ದೇವರ ಆಶೀರ್ವಾದಕ್ಕೆ ಈ ಕೆಲಸ ಮಾಡಿ

ನವದೆಹಲಿ: ಧಾರ್ಮಿಕ ಗ್ರಂಥಗಳಲ್ಲಿ ರಾಮನ ಭಂಟ ಭಗವಾನ್ ಹನುಮಂತನು 8 ವರ ಮತ್ತು 9 ನಿಧಿಗಳನ್ನು ನೀಡುವವ ದೇವರು ಎಂದು ಹೇಳಲಾಗಿದೆ. ಹನುಮಂತನನ್ನು ಶಕ್ತಿ, ಶಾಂತಿ, ಬುದ್ಧಿವಂತಿಕೆ ಮತ್ತು ಭಕ್ತಿಯ ದೇವರು ಎಂದು ಪರಿಗಣಿಸಲಾಗುತ್ತದೆ. ನಿರಂತರವಾಗಿ ಆರಾಧಿಸುವ ವ್ಯಕ್ತಿಗೆ ಆಂಜನೇಯ ಆಶೀರ್ವದಿಸುತ್ತಾನೆಂದು ಹೇಳಲಾಗಿದೆ. ವಾಯುಪುತ್ರನನ್ನು ಭಕ್ತಿಯಿಂದ ಪೂಜಿಸುವ ವ್ಯಕ್ತಿಗೆ ಶನಿಯು ಯಾವುದೇ ಅಶುಭ ಪರಿಣಾಮ ಬೀರುವುದಿಲ್ಲವಂತೆ. ಆತನ ಜಾತಕದಲ್ಲಿರುವ ಎಲ್ಲಾ ಗ್ರಹ ದೋಷಗಳು ನಿವಾರಣೆಯಾಗುತ್ತವೆಂದು ಹೇಳಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾಯುಪುತ್ರನ ಕೃಪೆಯಿಂದ ಯಾವುದೇ ವ್ಯಕ್ತಿಯ ಜೀವನದಲ್ಲಿ ಸುಖ-ಸಂತೋಷ ಸಿಗುತ್ತದೆ. ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವಂತೆ. ಮಂಗಳವಾರ ಮತ್ತು ಶನಿವಾರದಂದು ಈ 5 ಪರಿಹಾರ ಕ್ರಮಗಳ ಮೂಲಕ ಭಕ್ತಿಯಿಂದ ಪೂಜಿಸಿದರೆ ಹನುಮಂತನ ಆಶೀರ್ವಾದ ದೊರೆಯುತ್ತದೆ.

ಇದನ್ನೂ ಓದಿ: Shani Gochar 2023: ನಾಳೆಯಿಂದ ಈ ರಾಶಿಗಳಿಗೆ ಸಾಡೇಸಾತಿಯಿಂದ ಮುಕ್ತಿ, ಒಳ್ಳೆಯ ದಿನಗಳು ಆರಂಭ!

ಮಂಗಳವಾರ ಈ ಪರಿಹಾರ ಮಾಡಿ

- ಮಂಗಳವಾರ ಮತ್ತು ಶನಿವಾರ ರಾತ್ರಿ ಹನುಮಂತನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ದೀಪವನ್ನು ಮಣ್ಣಿನಿಂದಲೇ ತಯಾರಿಸಿರಬೇಕು. ಇದರ ನಂತರ ನಿಮ್ಮ ಆಸೆಗಳನ್ನು ಹನುಮಂತನ ಮುಂದೆ ಹೇಳಿಕೊಳ್ಳಿರಿ. ಹನುಮಾನ್ ಚಾಲೀಸಾ ಮತ್ತು ರಾಮಚರಿತ ಮಾನಸದ ದ್ವಿಪದಿಗಳನ್ನು ಪಠಿಸಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ಮತ್ತು ಸಮಸ್ಯೆಗಳು ದೂರವಾಗುತ್ತವೆ.

- ನಿಮ್ಮ ವ್ಯಾಪಾರ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ಕಾರಣವಿಲ್ಲದೆ ನಿಮ್ಮ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮತ್ತು ದುಷ್ಟರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಇದಕ್ಕಾಗಿ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿರುವ ಹನುಮಂತನ ಚಿತ್ರವನ್ನು ಇರಿಸಿ. ಇದರೊಂದಿಗೆ ವಿಶೇಷ ಹಬ್ಬ ಅಥವಾ ದಿನಾಂಕದಂದು ಹನುಮಾನ್ ಜೀಯನ್ನು ಅಲಂಕರಿಸುವ ಮೂಲಕ ಕೆಲವೇ ದಿನಗಳಲ್ಲಿ ವಿರೋಧಿಗಳನ್ನು ಸಮಾಧಾನಪಡಿಸಲಾಗುತ್ತದೆ.

 - ಹನುಮಂತನ ಪೂಜೆಗೆ ಮಂಗಳವಾರ ಮತ್ತು ಶನಿವಾರ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹೀಗಾಗಿ ನಿಮ್ಮ ಯಾವುದೇ ಆಸೆಗಳು ದೀರ್ಘಕಾಲದವರೆಗೆ ಈಡೇರದಿದ್ದರೆ ಮಂಗಳವಾರ ಮತ್ತು ಶನಿವಾರದಂದು 11 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು ನೀರಿನಿಂದ ಸ್ವಚ್ಛಗೊಳಿಸಿ. ಇದರ ನಂತರ ಶ್ರೀರಾಮನ ಹೆಸರನ್ನು ಶ್ರೀಗಂಧ ಅಥವಾ ಕುಂಕುಮದಿಂದ ಎಲೆಗಳ ಮೇಲೆ ಬರೆದು ಹನುಮಂತನ ದೇವಸ್ಥಾನಕ್ಕೆ ಹೋಗಿ ಅರ್ಪಿಸಬೇಕು. ಇದರಿಂದ ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

ಇದನ್ನೂ ಓದಿ: Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ

- ಹನುಮಂತನ ದೇವಸ್ಥಾನದಲ್ಲಿ ಮಂಗಳವಾರ ಮತ್ತು ಶನಿವಾರದಂದು 11 ಕಪ್ಪು ಎಳ್ಳಿನ ಉಂಡೆಗಳು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂವುಗಳು, ಪ್ರಸಾದ ಇತ್ಯಾದಿಗಳನ್ನು ಅರ್ಪಿಸುವುದು ಒಳ್ಳೆಯದು. ಇದರೊಂದಿಗೆ ಈ ದಿನದಂದು ಸುಂದರಕಾಂಡ, ಹನುಮಾನ್ ಚಾಲೀಸಾ ಮತ್ತು ಸಂಕತ್ಮೋಚನವನ್ನು ಪಠಿಸಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

- ಜಾತಕದಲ್ಲಿನ ಗ್ರಹಗಳ ಅಶುಭ ಪರಿಣಾಮಗಳನ್ನು ತೊಡೆದುಹಾಕಲು, ಮಂಗಳವಾರ ಹಸಿ ಎಣ್ಣೆಯ ದೀಪದಲ್ಲಿ ಲವಂಗ ಹಾಕಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ಇದರೊಂದಿಗೆ ವ್ಯಕ್ತಿಯ ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ, ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಈ ಪರಿಹಾರವು ಜಾತಕದಲ್ಲಿ ಮಂಗಳ ಮತ್ತು ಶನಿಯ ಅಶುಭ ಪರಿಣಾಮಗಳನ್ನು ಸಹ ತೊಡೆದುಹಾಕುತ್ತದೆ. ಮತ್ತೊಂದೆಡೆ ನವಗ್ರಹದ ಅಶುಭ ಪರಿಣಾಮಗಳನ್ನು ಶಮನಗೊಳಿಸಲು ಅರಳಿ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಿಸುವುದು ತುಂಬಾ ಪ್ರಯೋಜನಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News