ನವದೆಹಲಿ: ಬುನೋಸ್ ಐರಿಸ್ ನಲ್ಲಿ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಈಗ ಜೈ(JAI) ಹೊಸ ಸಂಕ್ಷಿಪ್ತ ರೂಪವನ್ನು ಕಂಡು ಹಿಡಿದಿದ್ದಾರೆ.ಹಾಗಾದರೆ ಇದರರ್ಥವಿಷ್ಟೇ ಜಪಾನ್-ಅಮೇರಿಕಾ-ಭಾರತದ ನಡುವಿನ ತ್ರಿಪಕ್ಷಿಯ ಪಾಲುದಾರಿಕೆಯನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ.
ಇಂಡೋ ಫೆಸಿಪಿಕ್ ಪ್ರದೇಶದಲ್ಲಿ ಚೀನಾ ದೇಶದ ಪ್ರಾಬಲ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗ ಈ ಮೂರು ದೇಶಗಳು ತ್ರಿಪಕ್ಷಿಯ ಪಾಲುದಾರಿಕೆಗೆ ಮುಂದಾಗಿವೆ.ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ" JAI(ಜಪಾನ್,ಅಮೇರಿಕಾ,ಭಾರತ) ಸಭೆಯನ್ನು ನಾವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಮರ್ಪಿಸಬಹುದು. ಹಿಂದಿಯಲ್ಲಿ ಜೈ ಎಂದರೆ ಯಶಸ್ಸು ಎಂದರ್ಥ" ಎಂದು ಅದರ ಸಂಕ್ಷಿಪ್ತ ರೂಪದ ವಿವರಣೆ ನೀಡುವುದರ ಮೂಲಕ ಗಮನ ಸೆಳೆದರು.
JAI (Japan, America, India) trilateral marks the coming together of three friendly nations.
Today's historic JAI meeting was a great beginning. PM @AbeShinzo, @POTUS and I held fruitful talks aimed at furthering connectivity, maritime cooperation and a stable Indo-Pacific. pic.twitter.com/8Lw7kj9waN
— Narendra Modi (@narendramodi) November 30, 2018
ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜಪಾನ್ ಪ್ರಧಾನ ಮಂತ್ರಿ ಶಿಂಝೊ ಅಬೆ ಅವರೊಂದಿಗೆ ಪ್ರಧಾನಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಮೋದಿ JAI (ತ್ರಿಪಕ್ಷೀಯ ಭೇಟಿ) ಯಶಸ್ಸಿನ ಸಂದೇಶವಾಗಿದೆ ಮತ್ತು ನಾವು ಹೊಸ ಆರಂಭವನ್ನು ಕಾಣುತ್ತಿದ್ದೇವೆ, ವಿಶ್ವಸಂಸ್ಥೆಯ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ನಮ್ಮ ಪಾತ್ರ ದೊಡ್ಡದು ಎಂದು ಪ್ರಧಾನಿ ಮೋದಿ ಹೇಳಿದರು.