ರೈತರು 'ಕಿಸಾನ್ ಮುಕ್ತಿ ಮಾರ್ಚ್' ಹಮ್ಮಿಕೊಳ್ಳಲು ಕಾರಣವೇನು ಗೊತ್ತೇ?

ಲಕ್ಷಾಂತರ ರೈತರು ದೇಶದ ವಿವಿಧ ಭಾಗಗಳಿಂದ ದೆಹಲಿ ರಾಮಲೀಲಾ ಮೈದಾನದಿಂದ ಸಂಸದ ಮಾರ್ಗವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.ಈ ಎರಡು ದಿನದ ದಿಲ್ಲಿ ಚಲೋದಲ್ಲಿ ರೈತರು ಎರಡು ಪ್ರಮುಖ ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದ್ದಾರೆ. 

Last Updated : Nov 30, 2018, 01:30 PM IST
ರೈತರು 'ಕಿಸಾನ್ ಮುಕ್ತಿ ಮಾರ್ಚ್' ಹಮ್ಮಿಕೊಳ್ಳಲು ಕಾರಣವೇನು ಗೊತ್ತೇ? title=

ನವದೆಹಲಿ: ಲಕ್ಷಾಂತರ ರೈತರು ದೇಶದ ವಿವಿಧ ಭಾಗಗಳಿಂದ ದೆಹಲಿ ರಾಮಲೀಲಾ ಮೈದಾನದಿಂದ ಸಂಸದ ಮಾರ್ಗವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದಾರೆ.ಈ ಎರಡು ದಿನದ ದಿಲ್ಲಿ ಚಲೋದಲ್ಲಿ ರೈತರು ಎರಡು ಪ್ರಮುಖ ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದ್ದಾರೆ. 
 
ಒಂದು: ದೇಶದ ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು 21ದಿನಗಳ ಕಾಲ ವಿಶೇಷ ಸಂಸತ್ ಜಂಟಿ ಅಧಿವೇಶನವನ್ನು ಕರೆಯಬೇಕು

ಎರಡನೆಯದು: ನವಂಬರ್ 2017ರಲ್ಲಿ ನಡೆದ ಕಿಸಾನ್ ಸಂಸದ್ ನಲ್ಲಿ ಸಿದ್ದಪಡಿಸಲಾದ ಎರಡು ಕಿಸಾನ್ ಮುಕ್ತಿ ಮಸೂದೆಗಳನ್ನು ಸಂಸತ್ ನಲ್ಲಿ ಜಾರಿಗೆ ತರಬೇಕು. ಆ ಮೂಲಕ ,ಸಾಲ,ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು. ಅಲ್ಲದೆ ಎಂಎಸ್ ಸ್ವಾಮಿನಾಥನ್ ವರದಿಯನ್ನು ಸಹ ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ. 

ಕಿಸಾನ್ ಸಂಸದ್ ಸಿದ್ದಪಡಿಸಿದ ಎರಡು ಮಸೂದೆಗಳು:

*ರೈತರ ಋಣಭಾರ ಮುಕ್ತ ಸ್ವಾತಂತ್ರ್ಯ ಮಸೂದೆ-2018
*ರೈತರ ಕೃಷಿ ಸರಕುಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾತಂತ್ರ್ಯ ಮಸೂದೆ-2018

ಈ ಚಳುವಳಿ ರೂಪುಗೊಂಡಿದ್ದು ಹೇಗೆ?

*ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು ಈ ಕಿಸಾನ್ ಮುಕ್ತಿ ಮಾರ್ಚ್ ಮೂಲಕ ದಿಲ್ಲಿ ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ.ಈ ಸಮಿತಿ ಅಡಿಯಲ್ಲಿ ಸುಮಾರು 180ಕ್ಕೂ ಅಧಿಕ ರೈತ ಸಂಘಟನೆಗಳು ಒಳಗೊಂಡಿವೆ.

*ಈಗಾಗಲೇ ಕಿಸಾನ್ ಮುಕ್ತಿ ಮಸೂದೆಗಳಿಗೆ 21 ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.

*ಕೇವಲ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಭಾಗದ ರೈತರು ಚಳುವಳಿಗಾಗಿ ದೆಹಲಿ ಬಂದಿಳಿದಿದ್ದಾರೆ.

*ಈ ಕೃಷಿ ಬಿಕ್ಕಟ್ಟು ಕಾಲ್ಪನಿಕವಲ್ಲ, ಇದು ನಾವು ಸೇವಿಸುವ ಆಹಾರದಷ್ಟೇ ಸತ್ಯ,ಈ ಬಿಕ್ಕಟ್ಟು ಕೇವಲ ಒಂದು ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ ಇದು ಎಲ್ಲ ವಲಯಕ್ಕೋ ವಿಸ್ತರಿಸಿದೆ ಎನ್ನುತ್ತಿವೆ ರೈತ ಸಂಘಟನೆಗಳು.

*ವಾರಾಂತ್ಯದಲ್ಲಿ ಪರ್ಯಾಯ ಆಹಾರದ ನೆಟ್ ವರ್ಕ್ ಗಳೆಲ್ಲವೂ ಸಹಿತ ಉತ್ತಮವಾಗಿವೆ. ಆದರೆ ಅವೆಲ್ಲವೂ ಕೂಡ ಕೇವಲ ಫ್ಯಾಶನ್ ಗೆ ಸೀಮಿತ. ಅವುಗಳೆಂದಿಗೂ ಕೂಡ ಈ ಬೃಹತ್ ರಾಷ್ಟ್ರದ ಜನರ ಹೊಟ್ಟೆಯನ್ನು ತುಂಬಿಸುವುದಿಲ್ಲ. 

*ರೈತರು ಹೇಳುವಂತೆ ತಮಗೆ ನೀಡಿರುವ ಭರವಸೆಗಳೆಲ್ಲವು ಸಹಿತ ಈಡೇರದೆ ಹೋಗಿವೆ. ಕೃಷಿ ಕ್ಷೇತ್ರವನ್ನು ಬೃಹತ್ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ. ಈ ಬಿಕ್ಕಟ್ಟು ಬಹಳ ವರ್ಷಗಳಿಂದಲೂ ನಡೆದು ಬಂದಿದೆ. ಕಳೆದ ಎರಡು ದಶಕಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಗಮನ ವಹಿಸುತ್ತಿಲ್ಲ ಎನ್ನುತ್ತಿವೆ ರೈತ ಸಂಘಟನೆಗಳು.

*ಈ ಕಾರಣಕ್ಕಾಗಿ ರೈತರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದರ ಮೂಲಕ ರೈತರು ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. 

Trending News