ನವದೆಹಲಿ: ಕರ್ತಾರ್ಪುರ್ ಕಾರಿಡಾರ್ನಿಂದ ಉಂಟಾಗುವ ಅಪಾಯಗಳ ಕುರಿತಾಗಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ತಾರ್ಪುರ್ ಕಾರಿಡಾರ್ ಅಪಾಯಕಾರಿ ಕ್ರಮ ಎಂದ ಸುಬ್ರಮಣ್ಯ ಸ್ವಾಮಿ ಸರಿಯಾದ ಚೆಕ್ ಇಲ್ಲದಿದ್ದರೆ ಅದನ್ನು ದುರ್ಬಳಕೆ ಮಾಡಬಹುದು.ಕೇವಲ ಒಂದು ಪಾಸ್ಪೋರ್ಟ್ ನ್ನು ತೋರಿಸಿದರೆ ಸಾಕಾಗುವುದಿಲ್ಲ. ನೀವು ಚಾಂದನಿ ಚೌಕ್ನಲ್ಲಿ 250 ರೂ.ಗೆ ಪಾಸ್ಪೋರ್ಟ್ ಪಡೆಯಬಹುದು.ಪಾಕಿಸ್ತಾನದ ಜನರನ್ನು ಇಲ್ಲಿಗೆ ಬರಲು ಅನುಮತಿ ನೀಡಬಾರದು ಎಂದು ಸ್ವಾಮಿ ಹೇಳಿದರು.
ಅಲ್ಲದೆ ಇದೇ ನವಂಬರ್ 28 ರಂದು ನಡೆಯುವ ಕರ್ತಾರ್ಪುರ ಕಾರಿಡಾರ್ ನ ಸಮಾರಂಭಕ್ಕೆ ಹೋಗಕೂಡದು ಮತ್ತು ಪಾಕಿಸ್ತಾನದಿಂದ ಯಾವುದೇ ಆಹ್ವಾನವನ್ನು ಸ್ವೀಕರಿಸಕೂಡದು ಎಂದು ಸುಬ್ರಮಣ್ಯನ್ ಸ್ವಾಮಿ ಎಚ್ಚರಿಸಿದ್ದಾರೆ.ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಸಮಾರಂಭದಲ್ಲಿ ಪಾಕ್ ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಷಿ ಆಹ್ವಾನ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಸುಬ್ರಮಣ್ಯ ಸ್ವಾಮಿಯವರ ಹೇಳಿಕೆ ಬಂದಿದೆ