Football Legend Pele Passed Away: 1200ಕ್ಕೂ ಹೆಚ್ಚು ಗೋಲು ಬಾರಿಸಿದ ಫುಟ್ಬಾಲ್ ದಂತಕತೆ ‘PELE’ ನಿಧನ

Brazilian Football Legend Pele dies aged 82: ಪೀಲೆ 1200 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಅದರಲ್ಲೂ FIFA ವಿಶ್ವಕಪ್ ನಲ್ಲಿ 784 ಗೋಲುಗಳು ಮಾರ್ಕ್ಡ್ ಲಿಸ್ಟ್ ಸೇರಿದೆ.  ಕ್ರೀಡಾ ಪ್ರಪಂಚದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಪೀಲೆ ಅವರ ಜನಪ್ರಿಯತೆಯು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ.

Written by - Bhavishya Shetty | Last Updated : Dec 30, 2022, 07:53 AM IST
    • ಶ್ರೇಷ್ಠ ಫುಟ್ಬಾಲ್ ಆಟಗಾರ ಪೀಲೆ 82 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ
    • ಗುರುವಾರ ಸಾವೊ ಪಾಲೊದಲ್ಲಿನ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ
    • ಪೀಲೆ 1200 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ
Football Legend Pele Passed Away: 1200ಕ್ಕೂ ಹೆಚ್ಚು ಗೋಲು ಬಾರಿಸಿದ ಫುಟ್ಬಾಲ್ ದಂತಕತೆ ‘PELE’ ನಿಧನ title=
pele

Brazilian Football Legend Pele dies aged 82: ಬ್ರೆಜಿಲ್ ಶ್ರೇಷ್ಠ ಫುಟ್ಬಾಲ್ ಆಟಗಾರ ಪೀಲೆ 82 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಫುಟ್ಬಾಲ್ ಆಡುವುದು ಒಂದು ಕಲೆಯಾಗಿದ್ದರೆ, ಬಹುಶಃ ಜಗತ್ತಿನಲ್ಲಿ ಅವರಿಗಿಂತ ದೊಡ್ಡ ಕಲಾವಿದರು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಮೂರು ವಿಶ್ವಕಪ್ ಪ್ರಶಸ್ತಿಗಳು, 784 ಗುರುತಿಸಲ್ಪಟ್ಟ ಗೋಲುಗಳು ಮತ್ತು ಪ್ರಪಂಚದಾದ್ಯಂತದ ಫುಟ್ಬಾಲ್ ಅಭಿಮಾನಿಗಳ ಸ್ಫೂರ್ತಿಯಾಗಿದ್ದ ಪೀಲೆ ಇಹಲೋಕ ತ್ಯಜಿಸಿದ್ದಾರೆ.

ದೀರ್ಘಕಾಲದವರೆಗೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು, ಗುರುವಾರ ಸಾವೊ ಪಾಲೊದಲ್ಲಿನ ಐನ್‌ಸ್ಟೈನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Team India Cricketers: ಟೀಂ ಇಂಡಿಯಾ ರಾಜಕೀಯಕ್ಕೆ ಬಲಿಯಾದ ಈ 3 ಆಟಗಾರರು: ‘ಪಂದ್ಯ ಶ್ರೇಷ್ಠ’ವಾದರೂ ಸಹ ಸಿಗದ ಅವಕಾಶ!!

ಪೀಲೆ 1200 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಅದರಲ್ಲೂ FIFA ವಿಶ್ವಕಪ್ ನಲ್ಲಿ 784 ಗೋಲುಗಳು ಮಾರ್ಕ್ಡ್ ಲಿಸ್ಟ್ ಸೇರಿದೆ.  ಕ್ರೀಡಾ ಪ್ರಪಂಚದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಪೀಲೆ ಅವರ ಜನಪ್ರಿಯತೆಯು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ.

ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಅಂದರೆ ಪೀಲೆ 1940 ರಲ್ಲಿ ಜನಿಸಿದರು. ಫುಟ್ಬಾಲ್ ಜನಪ್ರಿಯತೆಯನ್ನು ಉತ್ತುಂಗಕ್ಕೆ ಕೊಂಡೊಯ್ದು ಅದಕ್ಕೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿದ ಆಟಗಾರರಲ್ಲಿ ಒಬ್ಬರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ 1977ರಲ್ಲಿ ಕೋಲ್ಕತ್ತಾಗೆ ಬಂದಾಗ ಇಡೀ ನಗರವೇ ಹುಚ್ಚೆದ್ದು ಕುಣಿದಿತ್ತು. ಅವರು 2015 ಮತ್ತು 2018 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.

ಪೀಲೆ ಹುಟ್ಟಿದ್ದು ಭ್ರಷ್ಟಾಚಾರ, ಮಿಲಿಟರಿ ದಂಗೆಗಳು, ಸೆನ್ಸಾರ್ಶಿಪ್ ಮತ್ತು ದಮನಕಾರಿ ಸರ್ಕಾರಗಳಿಂದ ಪೀಡಿತ ದೇಶದಲ್ಲಿ. ಆದಾಗ್ಯೂ, 17 ವರ್ಷದ ಪೀಲೆ 1958 ರಲ್ಲಿ ತನ್ನ ಮೊದಲ ವಿಶ್ವಕಪ್‌ನಲ್ಲಿ ಬ್ರೆಜಿಲ್‌ನ ಚಿತ್ರಣವನ್ನು ಬದಲಾಯಿಸಿದರು. ಸ್ವೀಡನ್‌ನಲ್ಲಿ ಆಡಿದ ಪಂದ್ಯಾವಳಿಯಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿದರು. ಅವುಗಳಲ್ಲಿ ಎರಡು ಫೈನಲ್‌ನಲ್ಲಿ ಗಳಿಸಿದವು. ಅವರು ಬ್ರೆಜಿಲ್ ಅನ್ನು ಆತಿಥೇಯರ ವಿರುದ್ಧ 5-2 ಗೆಲ್ಲುವಂತೆ ಮಾಡಿದರು. ಅಲ್ಲಿಂದ ಯಶಸ್ಸಿನ ದೀರ್ಘಾವಧಿಯನ್ನು ಪ್ರಾರಂಭಿಸಿದರು.

ಫಿಫಾ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪಟ್ಟಿ ಮಾಡಿದೆ. ಪೀಲೆ ರಾಜಕಾರಣಿಗಳ ನೆಚ್ಚಿನವರಾಗಿದ್ದರು. ವಿಶ್ವಕಪ್ 1970 ರ ಮೊದಲು, ಅವರು ಬ್ರೆಜಿಲ್‌ನ ಅತ್ಯಂತ ನಿರಂಕುಶ ಸರ್ಕಾರದ ಅತ್ಯಂತ ನಿರ್ದಯ ಸದಸ್ಯರಲ್ಲಿ ಒಬ್ಬರಾದ ಅಧ್ಯಕ್ಷ ಎಮಿಲಿಯೊ ಗರಾಸ್ಟಾಜು ಮೆಡಿಸಿ ಅವರೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: IPL ಹರಾಜಿನಲ್ಲಿ 13.25 ಕೋಟಿ ಗಳಿಸಿದ ಆಟಗಾರನಿಗೆ ದೊಡ್ಡ ಶಾಕ್: ಈ ಲೀಗ್ನಲ್ಲಿ ಆಡದಂತೆ ಇಸಿಬಿ ಆದೇಶ!!

1960 ರ ದಶಕದಲ್ಲಿ ನೈಜೀರಿಯಾದ ಅಂತರ್ಯುದ್ಧದ ಸಮಯದಲ್ಲಿ, ಪೀಲೆಯ ಪಂದ್ಯವನ್ನು ವೀಕ್ಷಿಸಲು ಎದುರಾಳಿ ಬಣಗಳ ನಡುವೆ 48 ಗಂಟೆಗಳ ಕದನ ವಿರಾಮ ಇತ್ತು. ಅವರು 1977 ರಲ್ಲಿ ಕಾಸ್ಮಾಸ್‌ನ ಏಷ್ಯಾ ಪ್ರವಾಸದಲ್ಲಿ ಮೋಹನ್ ಬಗಾನ್‌ನ ಆಹ್ವಾನದ ಮೇರೆಗೆ ಕೋಲ್ಕತ್ತಾಗೆ ಆಗಮಿಸಿದರು. ಈಡನ್ ಗಾರ್ಡನ್ಸ್ ನಲ್ಲಿ ಸುಮಾರು ಅರ್ಧ ಗಂಟೆ ಕಾಲ ಫುಟ್ ಬಾಲ್ ಆಡಿದ್ದು, 80,000 ಪ್ರೇಕ್ಷಕರು ವೀಕ್ಷಿಸಿದ್ದಾರೆ. ಅದರ ನಂತರ ಅವರು 2018 ರಲ್ಲಿ ಕೊನೆಯ ಬಾರಿಗೆ ಕೋಲ್ಕತ್ತಾಗೆ ಆಗಮನಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News