/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಚಾಮರಾಜನಗರ: ಕೇಂದ್ರ ಸರ್ಕಾರದ ಸಾಮಾಜಿಕ‌ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಕರ್ನಾಟಕದಲ್ಲಿ ಆಯ್ಕೆಯಾದ ಏಕೈಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಾವಿರಾರು ದಿವ್ಯಾಂಗರಿಗೆ ಇಂದು ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: ಪೆನ್ ಡ್ರೈವ್ ನಲ್ಲಿ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಳ್ಳುತ್ತೀರಾ: ಹಾಗಾದ್ರೆ ಜೋಕೆ..! 

ಸಾಮಾಜಿಕ‌ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಅಲ್ಕಿಮೊ ಸಂಸ್ಥೆ, ಜಿಲ್ಲಾಡಳಿತ ಸಂಯುಕ್ತವಾಗಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ  1693 ವಿಶೇಷ ಚೇತನರಿಗೆ ಡಿ.24 ರಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಸ್ಥಳೀಯ ಶಾಸಕರುಗಳು ವಿತರಣೆ ಮಾಡಿದರು.

ಸರ್ಕಾರದ ವತಿಯಿಂದ ವಿಶೇಷ ಚೇತನರಿಗೆ ನಡೆದ ದಕ್ಷಿಣ ಭಾರತದ ಬೃಹತ್ ಕಾರ್ಯಕ್ರಮ ಇದಾಗಿದ್ದು ಟ್ರೈಸಿಕಲ್, ಶ್ರವಣ ಸಾಧನ, ವಿಶೇಷ ಚೇತನ ಮಕ್ಕಳಿಗೆ ಕಿಟ್ ಸೇರಿದಂತೆ 16 ಬಗೆಯ 2755 ಸಾಧನಗಳನ್ನು ವಿತರಿಸಲಾಗಿದ್ದು ಇವುಗಳ‌ ಒಟ್ಟು ಮೌಲ್ಯ ಬರೋಬ್ಬರಿ 1.20 ಕೋಟಿ ರೂ.ಗಳಾಗಿದೆ. 

ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದರ ವಿಶೇಷ ಕಾಳಜಿ ಹಾಗೂ ಮುತುವರ್ಜಿಯಿಂದ ಜಿಲ್ಲೆಯು ರಾಜ್ಯದಲ್ಲಿ ಆಯ್ಕೆಯಾಗಿದ್ದು ಪ್ರತಿ ಊರುಗಳಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಿ ಸಾಧನಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: Covid-19 New Wave: ನಾಳೆಯಿಂದ ಬದಲಾಗಲಿದೆ ವಿಮಾನ ಪ್ರಯಾಣದ ನಿಯಮ

ವಿಕಲತೆ ಶಾಪವಲ್ಲ: ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಿ ಸಚಿವ ನಾರಾಯಣಸ್ವಾಮಿ ಮಾತನಾಡಿ, ವಿಕಲತೆ ಎನ್ನುವುದು ಶಾಪವಲ್ಲ, ಯಾರ ಕರ್ಮದಿಂದಲೂ ಬಂದಿದ್ದಲ್ಲ ಎಂಬುದನ್ನು ಜನರು ಅರಿಯಬೇಕಿದೆ.‌ವಿಟಮಿನ್ ಕೊರತೆ, ಔಷಧಿಗಳ ಪರಿಣಾಮದಿಂದ ವಿಕಲತೆ ಉಂಟಾಗಲಿದ್ದು ದಿವ್ಯಾಂಗರ ಬಾಳಿಗೆ ಅಗತ್ಯ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. 

ಹುಟ್ಟುವಾಗಲೇ ಮೂಕ ಮಕ್ಕಳಾದರೇ ಹಿಂಜರಿಕೆ ಇಲ್ಲದೇ ವೈದ್ಯರನ್ನು ಸಂಪರ್ಕಿಸಬೇಕು, ಒಂದೆರೆಡು ವರ್ಷಗಳಲ್ಲಿ ಮಕ್ಕಳು ಮಾತನಾಡಲಿದ್ದು ಈ ಚಿಕಿತ್ಸೆಗೆ 7  ಲಕ್ಷ ರೂ. ವೆಚ್ಚ ಆಗಲಿದ್ದು ಕೇಂದ್ರ ಸರ್ಕಾರ ಕೊಡಲಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಡಿ ಬಹಳಷ್ಟು ಕಾರ್ಯಕ್ರಮಗಳಿದ್ದು ಪ್ರಚಾರದ ಕೊರತೆಯಿಂದಾಗಿ ಜನರಿಗೆ ತಲುಪುತ್ತಿಲ್ಲ, ಜನಪ್ರತಿನಿಧಿಗಳಷ್ಟೇ ಅಧಿಕಾರಿಗಳದ್ದು ಜವಬ್ದಾರಿ ಇದೆ ಎಂಬುದನ್ನು ಅಧಿಕಾರಿಗಳು ಅರಿತರೇ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ 4 ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಇಂದು ವಿತರಣೆ ಮಾಡಿದ್ದು ಇನ್ನುಳಿದ ನಾಲ್ಕು ಕ್ಷೇತ್ರಗಳಿಗೆ ನಂಜನಗೂಡಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
1 crore distribution of equipment to the disabled, Chamarajanagar selected in the state
News Source: 
Home Title: 

 

ದಿವ್ಯಾಂಗರಿಗೆ 1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ, ರಾಜ್ಯದಿಂದ ಚಾಮರಾಜನಗರ ಆಯ್ಕೆ
Yes
Is Blog?: 
No
Tags: 
Facebook Instant Article: 
Yes
Highlights: 

ವಿಕಲತೆ ಎನ್ನುವುದು ಶಾಪವಲ್ಲ,

ಯಾರ ಕರ್ಮದಿಂದಲೂ ಬಂದಿದ್ದಲ್ಲ ಎಂಬುದನ್ನು ಜನರು ಅರಿಯಬೇಕಿದೆ.‌

ದಿವ್ಯಾಂಗರ ಬಾಳಿಗೆ ಅಗತ್ಯ ನೆರವು ಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. 

Mobile Title: 
ದಿವ್ಯಾಂಗರಿಗೆ 1 ಕೋಟಿ ವೆಚ್ಚದ ಸಾಧನ ಸಲಕರಣೆ ವಿತರಣೆ, ರಾಜ್ಯದಿಂದ ಚಾಮರಾಜನಗರ ಆಯ್ಕೆ
Zee Kannada News Desk
Publish Later: 
No
Publish At: 
Saturday, December 24, 2022 - 17:01
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
2
Is Breaking News: 
No