ಟಿಆರೆಸ್ಸ್ ತೊರೆದು ಕಾಂಗ್ರೆಸ್ ನತ್ತ ಮುಖ ಮಾಡಿದ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ? 

ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯನ್ನು ತೊರೆದಿರುವ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇದೇ ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅವರು ಈಗ ಟಿಆರೆಸ್ಸ್ ತೊರೆದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Last Updated : Nov 21, 2018, 03:21 PM IST
ಟಿಆರೆಸ್ಸ್ ತೊರೆದು ಕಾಂಗ್ರೆಸ್ ನತ್ತ ಮುಖ ಮಾಡಿದ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ?  title=

ಹೈದರಾಬಾದ್: ಕೆಸಿಆರ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯನ್ನು ತೊರೆದಿರುವ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಈಗ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನು ಭೇಟಿಯಾಗಿರುವುದು ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಇದೇ ಡಿಸೆಂಬರ್ 7 ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅವರು ಈಗ ಟಿಆರೆಸ್ಸ್ ತೊರೆದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲದವರಾಗಿರುವ 55 ವರ್ಷದ ಕೊಂಡಾ ವಿಶ್ವೇಶ್ವರ ರೆಡ್ಡಿ ರಾಜ್ಯದಲ್ಲಿ ಅತ್ಯಂತ ಶ್ರೀಮಂತ ಸಂಸದರಾಗಿದ್ದಾರೆ.ಮಂಗಳವಾರವಷ್ಟೇ ಟಿಆರೆಸ್ಸ್ ಪಕ್ಷವನ್ನು ತೊರೆದಿದ್ದ ಅವರು ಈಗ ತಮ್ಮ ಲೋಕಸಭಾ ಹುದ್ದೆಗೂ ಕೂಡ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಕೆಸಿಆರ್ ಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ ವಿಶ್ವನಾಥ್ ರೆಡ್ಡಿಯವರು ವೈಯಕ್ತಿಕ, ತೆಲಂಗಾಣ, ಕ್ಷೇತ್ರ, ರಾಜ್ಯ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಕಕರ್ತರಿಗೆ ಅನ್ಯಾಯ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಪಕ್ಷಕ್ಕಾಗಿ ನಾನು ಅಗತ್ಯವಿದ್ದಾಗ 2014ರಲ್ಲಿ ಪಕ್ಷಕ್ಕೆ ಹೋರಾಡಿದ್ದೆ ಆದರೆ, ತೆಲಂಗಾಣಕ್ಕೆ ವಿರುದ್ಧ ಇರುವ ಜನರಿಗೆ ಸಂಪುಟದಲ್ಲಿ ಪ್ರಾಮುಖ್ಯತೆ ನೀಡಿ ಅವರಿಗೆ ಹುದ್ದೆ ನೀಡಲಾಗಿದೆ. ಇದನ್ನು ತೆಲಂಗಾಣಕ್ಕಾಗಿ ಹೋರಾಡುವ ಜನರು ಹಾಗೂ ನನ್ನೊಂದಿಗೆ ಸಿದ್ಧಾಂತವನ್ನು ಹಂಚಿಕೊಂಡವರಿಗೆ ಪಕ್ಷದಲ್ಲಿ ಅಗತ್ಯವಿರುವುದಿಲ್ಲ '' ಎಂದು ರೆಡ್ಡಿ ಪತ್ರದಲ್ಲಿ ಬರೆದಿದ್ದಾರೆ.

ಈಗ ಕೆಸಿಆರ್ ಅವರ ಟಿಆರೆಸ್ಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕಾರಣ ಟಿಆರೆಸ್ಸ್ ಪಕ್ಷಕ್ಕೆ ಈಗ ಭಾರಿ ಹಿನ್ನಡೆಯಾಗಿದೆ.ಈಗ ವಿಶ್ವನಾಥ್ ರೆಡ್ಡಿಯವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Trending News