Rishabh Pant house: ರಿಷಬ್ ಪಂತ್ ಮನೆ ಮುಂದೆ ಹೂತು ಹಾಕಿದೆ ಹತ್ತಾರು ರೈಲ್ವೆ ಕಂಬಗಳು: ಇದರ ಹಿಂದಿದೆ ಆಘಾತಕಾರಿ ಕಾರಣ

Rishabh Pant house: ರೂರ್ಕಿಯಲ್ಲಿರುವ ರಿಷಬ್ ಪಂತ್ ಅವರ ಮನೆಯ ಮುಂದೆ ರೈಲ್ವೇ ಇಲಾಖೆಯಿಂದ ಹತ್ತಾರು ಕಂಬಗಳನ್ನು ಹೂಳಿದ್ದು, ಈ ಸಂದರ್ಭದಲ್ಲಿ ಜನರು ಅಲ್ಲಿದ್ದ ರೈಲ್ವೆ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದರ ಹೊರತಾಗಿಯೂ, ರೈಲ್ವೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಂಬಗಳನ್ನು ಹೂತುಹಾಕಿದರು. ರಿಷಬ್ ಪಂತ್ ಮನೆ ಮುಂದೆ ಪಿಲ್ಲರ್ ನೆಟ್ಟಿದ್ದಕ್ಕೆ ರೈಲ್ವೆ ಅಧಿಕಾರಿಗಳು ದೊಡ್ಡ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Written by - Bhavishya Shetty | Last Updated : Dec 19, 2022, 04:40 PM IST
    • ರಿಷಬ್ ಪಂತ್ ಮುಂದೆ ಈಗ ಹೊಸ ಸಮಸ್ಯೆಯೊಂದು ಉದ್ಭವಿಸಿದೆ
    • ರಿಷಬ್ ಪಂತ್ ಅವರ ಮನೆಯ ಮುಂದೆ ರೈಲ್ವೇಸ್ ಹತ್ತಾರು ಕಂಬಗಳನ್ನು ಹೂತು ಹಾಕಿದೆ
    • ಮುಂದೆ ರೈಲ್ವೇಸ್ ಹತ್ತಾರು ಕಂಬಗಳನ್ನು ಏಕೆ ಹಾಕಿತು ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ
Rishabh Pant house: ರಿಷಬ್ ಪಂತ್ ಮನೆ ಮುಂದೆ ಹೂತು ಹಾಕಿದೆ ಹತ್ತಾರು ರೈಲ್ವೆ ಕಂಬಗಳು: ಇದರ ಹಿಂದಿದೆ ಆಘಾತಕಾರಿ ಕಾರಣ title=
Rishabh Pant

Rishabh Pant house: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಮುಂದೆ ಈಗ ಹೊಸ ಸಮಸ್ಯೆಯೊಂದು ಉದ್ಭವಿಸಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಟೀಂ ಇಂಡಿಯಾದ ವಿಕೆಟ್‌ ಕೀಪರ್ ರಿಷಬ್ ಪಂತ್ ಅವರ ಮನೆಯ ಮುಂದೆ ರೈಲ್ವೇಸ್ ಹತ್ತಾರು ಕಂಬಗಳನ್ನು ಹೂತು ಹಾಕಿದೆ. ಟೀಂ ಇಂಡಿಯಾ ಪರ ಮೂರು ಮಾದರಿಯ ಕ್ರಿಕೆಟ್ ಆಡಿದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಮನೆ ಮುಂದೆ ರೈಲ್ವೇಸ್ ಹತ್ತಾರು ಕಂಬಗಳನ್ನು ಏಕೆ ಹಾಕಿತು ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: FIFA FINAL ಟ್ರೋಫಿ ಅನಾವರಣ ಮಾಡಿದ್ದು ಕರ್ನಾಟಕ ಮೂಲದ ಬಾಲಿವುಡ್ ನಟಿ: ಯಾರಾಕೆ ಗೊತ್ತಾ?

ರೂರ್ಕಿಯಲ್ಲಿರುವ ರಿಷಬ್ ಪಂತ್ ಅವರ ಮನೆಯ ಮುಂದೆ ರೈಲ್ವೇ ಇಲಾಖೆಯಿಂದ ಹತ್ತಾರು ಕಂಬಗಳನ್ನು ಹೂಳಿದ್ದು, ಈ ಸಂದರ್ಭದಲ್ಲಿ ಜನರು ಅಲ್ಲಿದ್ದ ರೈಲ್ವೆ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದರ ಹೊರತಾಗಿಯೂ, ರೈಲ್ವೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಂಬಗಳನ್ನು ಹೂತುಹಾಕಿದರು. ರಿಷಬ್ ಪಂತ್ ಮನೆ ಮುಂದೆ ಪಿಲ್ಲರ್ ನೆಟ್ಟಿದ್ದಕ್ಕೆ ರೈಲ್ವೆ ಅಧಿಕಾರಿಗಳು ದೊಡ್ಡ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅತಿಕ್ರಮಣ ವಿರೋಧಿ ಅಭಿಯಾನದ ಅಡಿಯಲ್ಲಿ, ರೈಲ್ವೇಸ್ ರಿಷಬ್ ಪಂತ್ ಅವರ ಮನೆಯ ಮುಂದೆ ಕಂಬಗಳನ್ನು ಹೂತುಹಾಕಿದೆಯಂತೆ.

ರೈಲ್ವೇ ಅಧಿಕಾರಿಗಳು ರಿಷಬ್ ಪಂತ್ ಅವರ ಮನೆ ಮುಂದೆ ಪಿಲ್ಲರ್ ಇಟ್ಟು ಈ ಭೂಮಿ ರೈಲ್ವೇಗೆ ಸೇರಿದ್ದು, ಈ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಹೇಳಿದ್ದಾರೆ. ರಿಷಬ್ ಪಂತ್ ಮನೆ ಮುಂದೆ ಹತ್ತಾರು ಕಂಬಗಳನ್ನು ಇಟ್ಟು ಈ ಕಂಬಗಳನ್ನು ತೆಗೆಯಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದಲ್ಲದೆ, ರೈಲ್ವೆ ತನ್ನ ಉದ್ಯೋಗಿಗಳನ್ನು ಮೇಲ್ವಿಚಾರಣೆಗಾಗಿ ಇಲ್ಲಿ ನಿಯೋಜಿಸಿದೆ.

ಇದನ್ನೂ ಓದಿ:  Argentina Fan Topless: ಫಿಫಾ ಕಪ್ ಗೆಲ್ಲುತ್ತಿದ್ದಂತೆ ಬಟ್ಟೆ ಬಿಚ್ಚಿ ಲೈವ್ ಪಂದ್ಯದ ವೇಳೆಯೇ ಕುಣಿದಾಡಿದ ಅರ್ಜೆಂಟೀನಾ ಫ್ಯಾನ್!!

ರೈಲ್ವೇ ಭೂಮಿಯನ್ನು ಜನರು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ವಂತ ಪಾರ್ಕಿಂಗ್ ಮಾಡುವ ಮೂಲಕ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಹೇಳುತ್ತಿದೆ. ಇದನ್ನು ತಡೆಯಲು ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರೈಲ್ವೇಯ ಈ ಕ್ರಮದಿಂದ ರಿಷಬ್ ಪಂತ್ ಮನೆಯೂ ಸಿಕ್ಕಿಬಿದ್ದಿದೆ. ಹಲವು ಬಾರಿ ನೋಟಿಸ್ ನೀಡಿದರೂ ಜನರು ರೈಲ್ವೇ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ಮುಂದುವರೆಸಿದ್ದು, ಬಳಿಕ ಕ್ರಮ ಕೈಗೊಳ್ಳುವಂತೆ ರೈಲ್ವೆ ಇಲಾಖೆಗೆ ಒತ್ತಾಯಿಸಲಾಗಿದೆ ಎಂದು ರೈಲ್ವೇ ಹಿರಿಯ ವಿಭಾಗದ ಎಂಜಿನಿಯರ್ ಬ್ರಜ್ ಮೋಹನ್ ಸಿಂಗ್ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News