ಸ್ಮಾರ್ಟ್ ಸಿಟಿ ಸಮೀಕ್ಷೆಯಲ್ಲಿ ನೀವು ಪಾಲ್ಗೊಳ್ಳಿ...ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಿದೆ.

Written by - Zee Kannada News Desk | Last Updated : Dec 17, 2022, 05:13 PM IST
  • ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಿದೆ
  • ನೀತಿಗಳನ್ನು ರೂಪಿಸಿ ಸಾರ್ವಜನಿಕರ ನಗರದ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
  • ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಪ್ರಾರಂಭಿಸಿದೆ
ಸ್ಮಾರ್ಟ್ ಸಿಟಿ ಸಮೀಕ್ಷೆಯಲ್ಲಿ ನೀವು ಪಾಲ್ಗೊಳ್ಳಿ...ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ನಾಗರಿಕರ ಜೀವನದ ಗುಣಮಟ್ಟವನ್ನು ನಿರ್ಣಯಿಸುವ ಸಲುವಾಗಿ ನಾಗರಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನವೆಂಬರ್ 9 ರಿಂದ ಡಿಸೆಂಬರ್ 23, 2022 ರವರೆಗೆ ಬೆಂಗಳೂರಿನ ನಾಗರಿಕ ಗ್ರಹಿಕೆ ಸಮೀಕ್ಷೆ(Citizen perception survey)ಯನ್ನು ನಡೆಸುತ್ತಿದ್ದು,ನಾಗರಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರಿದೆ.

ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟ : ಶಾರೀಕ್‌ಗೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಚಿಕಿತ್ಸೆ

ಭಾರತ ಸರ್ಕಾರವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿಒಂದಾದ ಸ್ಮಾರ್ಟ್ ಸಿಟಿ ಮಿಷನ್, ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: ಸರ್ಕಾರಿ ಕಚೇರಿಗೇ ಕನ್ನ ಹಾಕಿದ ಖದೀಮರು: ದಾಖಲೆಗಳು ಸೇರಿ ಕಂಪ್ಯೂಟರ್ ಕಳ್ಳತನ!

ಸಾರ್ವಜನಿಕರು ಲಿಂಕ್ಗೆ(https://eol2022.org/CitizenFeedback) ಭೇಟಿ ನೀಡುವ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಾಗರಿಕ ಗ್ರಹಿಕೆ ಸಮೀಕ್ಷೆಯಲ್ಲಿ ಭಾಗವಹಿಸಿ ಪ್ರಶ್ನಾವಳಿಗಳಿಗೆ ಉತ್ತರಿಸಬಹುದು. ನಾಗರಿಕರಿಂದ ವ್ಯಕ್ತವಾಗುವ ಅಭಿಪ್ರಾಯವನ್ನಾಧರಿಸಿ ಆಡಳಿತ ಸುಧಾರಣೆ, ನೀತಿಗಳನ್ನು ರೂಪಿಸಿ ಸಾರ್ವಜನಿಕರ ನಗರದ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News