ಅಂತೂ ಇಂತೂ ಬಂತು ದೀಪವೀರ್ ದಂಪತಿ ಮದುವೆ ಫೋಟೋ!

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇಬ್ಬರು ಕೊಂಕಣಿ ಸಂಪ್ರದಾಯದಂತೆ ನವೆಂಬರ್ 14 ರಂದು ವಿವಾಹವಾಗಿದ್ದರು ಇಂದು ಸಿಂಧಿ ಸಂಪ್ರದಾಯದಂತೆ ಮದುವೆಯಾದರು.

Last Updated : Nov 15, 2018, 08:40 PM IST
ಅಂತೂ ಇಂತೂ ಬಂತು ದೀಪವೀರ್ ದಂಪತಿ ಮದುವೆ ಫೋಟೋ!    title=
Photo:Instagram

ನವದೆಹಲಿ: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾದರು. ಇಬ್ಬರು ಕೊಂಕಣಿ ಸಂಪ್ರದಾಯದಂತೆ ನವೆಂಬರ್ 14 ರಂದು ವಿವಾಹವಾಗಿದ್ದರು ಇಂದು ಸಿಂಧಿ ಸಂಪ್ರದಾಯದಂತೆ ಮದುವೆಯಾದರು.

ಮದುವೆಯಾಗಿ ಒಂದು ದಿನ ಕಳೆದಿದ್ದರು ಸಹಿತ ಮದುವೆ ಪೋಟೋಗಳು ಇನ್ನು ಬಿಡುಗಡೆಯಾಗಿರಲಿಲ್ಲ ಇದಕ್ಕೆ ಕೇಂದ್ರ ಸಚಿವೆ  ಸ್ಮೃತಿ ಇರಾನಿಯಿಂದ  ಹಿಡಿದು ಎಲ್ಲರು ಕೂಡ ಫೋಟೋ ವಿಚಾರವಾಗಿ ಟ್ರೋಲ್ ಮಾಡಿದ್ದರು.ಈಗ ಕೊನೆಗೂ ಈ ನೂತನ ದಂಪತಿಗಳು ತಮ್ಮ ಮದುವೆಯ ಮೊದಲ ಫೋಟೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಅಭಿಮಾನಿಗಳಲ್ಲಿ ಈಗ ಸಂತಸಕ್ಕೆ ಪಾರವೇ ಇಲ್ಲ ಎನ್ನುವಂತಾಗಿದೆ.

 
 
 
 

 
 
 
 
 
 
 
 
 

❤️

A post shared by Deepika Padukone (@deepikapadukone) on

ದೀಪಿಕಾ ಅವರು ಸಬಸಾಚಿ ಉಡುಪಿನಲ್ಲಿ ಮಿಂಚಿದ್ದಾರೆ ಇನ್ನು ಮತ್ತು ರಣವೀರ್ ಕೂಡ  ಮದುಮಗನ ಬಟ್ಟೆಯಲ್ಲಿ ಕಂಗೊಳಿಸುತ್ತಿದ್ದಾರೆ. ಫೋಟೋದಲ್ಲಿ ಭಾರೀ ಆಭರಣಗಳನ್ನು ಧರಿಸಿದ್ದಾರೆ. ಇಲ್ಲಿಯವರೆಗೆ, ದೂರದ ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ಆದರೆ ಈಗ ಜೋಡಿಯು ತಮ್ಮ ಮದುವೆ ಚಿತ್ರವನ್ನು ಹಂಚಿಕೊಂಡಿದ್ದಾರೆ, ಆ ಮೂಲಕ ಈಗ ಕೊನೆಗೂ ಅಭಿಮಾನಿಗಳು ನಿಟ್ಟುಸಿರುವ ಬಿಡುವಂತಾಗಿದೆ.

 
 
 
 

 
 
 
 
 
 
 
 
 

❤️

A post shared by Ranveer Singh (@ranveersingh) on

ವಿಶೇಷವೆಂದರೆ ದೀಪವೀರ್  ಜೋಡಿಯು ಮದುವೆಗೂ ಮುನ್ನ  ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

 

Trending News