ನವದೆಹಲಿ: ದೇಶದ 13 ಬ್ಯಾಂಕ್ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬ್ಯಾಂಕ್ಗಳಲ್ಲಿ ನೀವು ಸಹ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಓದಲೇಬೇಕು. ಇದು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ತಿಳಿಯಿರಿ. ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸಲು ಆರ್ಬಿಐ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆರ್ಬಿಐ ದೇಶದ 13 ಸಹಕಾರಿ ಬ್ಯಾಂಕ್ಗಳಿಗೆ ದಂಡ ವಿಧಿಸಿದೆ. ಇವುಗಳಲ್ಲಿ ಯಾವ ಬ್ಯಾಂಕ್ಗಳಿವೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬ್ಯಾಂಕ್ಗಳಿಗೆ ದಂಡ ಏಕೆ?
ವಿವಿಧ ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಈ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ಬಿಐ ತಿಳಿಸಿದೆ. ಈ ಬ್ಯಾಂಕ್ ಗಳಿಗೆ 50 ಸಾವಿರ ರೂ.ನಿಂದ 4 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿದೆ. ಮಹಾರಾಷ್ಟ್ರದ ಚಂದ್ರಾಪುರ ಶ್ರೀ ಕನ್ಯಕಾ ನಗರಿ ಸಹಕಾರಿ ಬ್ಯಾಂಕ್ಗೆ ಗರಿಷ್ಠ ದಂಡ ವಿಧಿಸಲಾಗಿದೆ. ಆರ್ಬಿಐ ಈ ಬ್ಯಾಂಕ್ಗೆ 4 ಲಕ್ಷ ರೂ. ದಂಡ ವಿಧಿಸಿದೆ.
ಇದನ್ನೂ ಓದಿ: LIC ಈ ಯೋಜನೆಯಲ್ಲಿ ನಿತ್ಯ ಕೇವಲ ರೂ.110 ಹೂಡಿಕೆ ಮಾಡಿ, ಮೂರು ಪಟ್ಟು ರಿಟರ್ನ್ ಪಡೆಯಿರಿ
ಈ ಬ್ಯಾಂಕಿಗೆ 2.50 ಲಕ್ಷ ರೂ. ದಂಡ
ಇದಲ್ಲದೇ ಮಹಾರಾಷ್ಟ್ರದ ಬೀಡ್ನ ವೈದ್ಯನಾಥ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಆರ್ಬಿಐ 2.50 ಲಕ್ಷ ರೂ. ದಂಡ ವಿಧಿಸಿದೆ.
ಈ ಬ್ಯಾಂಕ್ಗಳಿಗೆ 1.50 ಲಕ್ಷ ರೂ. ದಂಡ
ಇದಲ್ಲದೇ ಸತಾರಾದ ವೈ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಇಂದೋರ್ ಪ್ರೀಮಿಯರ್ ಕೋ-ಆಪರೇಟಿವ್ ಬ್ಯಾಂಕ್ಗೆ ತಲಾ 2 ಲಕ್ಷ ರೂ. ದಂಡವನ್ನು ಆರ್ಬಿಐ ವಿಧಿಸಿದೆ. ಅದೇ ರೀತಿ ಮೇಘಾಲಯದ ಪಟಾನ್ ನಗರ್ ಸಹಕಾರಿ ಬ್ಯಾಂಕ್, ಪಟಾನ್ ಮತ್ತು ತುರಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ಗೆ 1.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.
ಸಂಪೂರ್ಣ ಪಟ್ಟಿ ಪರಿಶೀಲಿಸಿ
ಈ ಬ್ಯಾಂಕ್ಗಳ ಹೊರತಾಗಿ ಜಗದಲ್ಪುರ್ನ ನಗ್ರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಅಮರಾವತಿಯ ಜಿಜೌ ವಾಣಿಜ್ಯ ಸಹಕಾರಿ ಬ್ಯಾಂಕ್, ಕೋಲ್ಕತ್ತಾದ ಪೂರ್ವ ಮತ್ತು ಈಶಾನ್ಯ ಫ್ರಾಂಟಿಯರ್ ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್, ಛತ್ತರ್ಪುರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್, ರಾಯ್ಗಢದ ನಾಗರಿಕ್ ಸಹಕಾರಿ ಬ್ಯಾಂಕ್ ಮರ್ಯಾದಿತ್, ಬಿಲಾಸ್ಪುರ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಮತ್ತು ಶಾಹದೋಲ್ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಭಾರೀ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: Affordable Cars: 2 ರಿಂದ 4 ಲಕ್ಷ ರೂ.ಗಳಲ್ಲಿ ಲಭ್ಯವಿರುವ ಕಾರುಗಳಿವು
ದಂಡಕ್ಕೆ ಪ್ರಮುಖ ಕಾರಣವೇನು?
ವಿವಿಧ ನಿಯಂತ್ರಕ ಅನುಸರಣೆಗಳ ಕೊರತೆಯೇ ಈ ಎಲ್ಲಾ ಬ್ಯಾಂಕ್ಗಳ ವಿರುದ್ಧ ಕ್ರಮಕ್ಕೆ ಪ್ರಮುಖ ಕಾರಣ. ಈ ಕಾರಣದಿಂದ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.ಇದಲ್ಲದೇ ಗ್ರಾಹಕರೊಂದಿಗೆ ನಡೆಸಿದ ವಹಿವಾಟಿಗೂ ಈ ದಂಡಕ್ಕೂ ಯಾವುದೇ ಸಂಬಂಧವಿಲ್ಲವೆಂದು ಆರ್ಬಿಐ ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
RBI: ಈ 13 ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರ ಗಮನಕ್ಕೆ, ಆರ್ಬಿಐನಿಂದ ಮಹತ್ವದ ನಿರ್ಧಾರ!
ದೇಶದ 13 ಬ್ಯಾಂಕ್ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಠಿಣ ಕ್ರಮ
ನಿಯಮ ಪಾಲಿಸದ ದೇಶದ 13 ಸಹಕಾರಿ ಬ್ಯಾಂಕ್ಗಳಿಗೆ ದಂಡ ವಿಧಿಸಿದ ಆರ್ಬಿಐ
ಬ್ಯಾಂಕುಗಳಿಗೆ 50 ಸಾವಿರ ರೂ.ನಿಂದ 4 ಲಕ್ಷ ರೂ.ವರೆಗೆ ದಂಡ ವಿಧಿಸಿರುವ ಆರ್ಬಿಐ