Jupiter Transit 2022: ಕಳೆದ ನವೆಂಬರ್ 24 ರಂದು ದೇವಗುರು ಬೃಹಸ್ಪತಿ ಮತ್ತೆ ತನ್ನ ನೇರನಡೆಯನ್ನು ಅನುಸರಿಸಿದ್ದಾರೆ. ಗುರು ಗ್ರಹ ತನ್ನದೇ ಆದ ಮೀನ ರಾಶಿಯಲ್ಲಿ ಕಳೆದ ಕೆಲ ದಿನಗಳಿಂದ ವಕ್ರ ನಡೆ ಅಂದರೆ, ಹಿಮ್ಮುಖ ಚಲನೆಯಲ್ಲಿತ್ತು. ಆದರೆ, ಇದೀಗ ಪುನಃ ಗುರುಗ್ರಹ ತನ್ನ ನೇರನಡೆಯನ್ನು ಅನುಸರಿಸಿದ್ದು, ಇದು ಎಲ್ಲಾ 12 ಜಾತಕದವರ ಮೇಲೆ ಪ್ರಭಾವ ಬೀರಲಿದೆ.
Guru Rashi Parivartan 2022: ಕಳೆದ ನವೆಂಬರ್ 24 ರಂದು ದೇವಗುರು ಬೃಹಸ್ಪತಿ ಮತ್ತೆ ತನ್ನ ನೇರನಡೆಯನ್ನು ಅನುಸರಿಸಿದ್ದಾರೆ. ಗುರು ಗ್ರಹ ತನ್ನದೇ ಆದ ಮೀನ ರಾಶಿಯಲ್ಲಿ ಕಳೆದ ಕೆಲ ದಿನಗಳಿಂದ ವಕ್ರ ನಡೆ ಅಂದರೆ, ಹಿಮ್ಮುಖ ಚಲನೆಯಲ್ಲಿತ್ತು. ಆದರೆ, ಇದೀಗ ಪುನಃ ಗುರುಗ್ರಹ ತನ್ನ ನೇರನಡೆಯನ್ನು ಅನುಸರಿಸಿದ್ದು, ಇದು ಎಲ್ಲಾ 12 ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಹೀಗಿರುವಾಗ ಕೆಲ ಜಾತಕದವರ ಮೇಲೆ ದೇವಗುರು ಬೃಹಸ್ಪತಿಯ ವಿಶೇಷ ಕೃಪೆ ಇರಲಿದೆ. ಗುರಿವಿನ ಕೃಪಾಕಟಾಕ್ಷದಿಂದ ಈ ರಾಶಿಗಳ ಜನರು ಸಾಕಷ್ಟು ಪ್ರಗತಿಯನ್ನು ಹೊಂದಲಿದ್ದಾರೆ ಮತ್ತು ಈ ಅವಧಿಯಲ್ಲಿ ಅವರಿಗೆ ಸಾಕಷ್ಟು ಲಾಭ ಕೂಡ ಸಿಗಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಬುದ್ಧಿವಂತಿಕೆ ಮತ್ತು ಶಿಕ್ಷಣದ ಕಾರಕ ಗ್ರಹ ಎಂದು ಪರಿಗಣಿಸಲಾಗಿದೆ. 2023 ರಲ್ಲಿ, ದೇವಗುರು ಬೃಹಸ್ಪತಿ ಕೆಲ ರಾಶಿಗಳ ಮೇಲೆ ವಿಶೇಷ ಕೃಪೆ ತೋರಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಹೊಸ ವರ್ಷ ವರದಾನಕ್ಕಿಂತ ಕಡಿಮೆ ಇಲ್ಲ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ, ಈ ರಾಶಿಗಳ ಜಾತಕದವರ ಆರ್ಥಿಕ ಸ್ಥಿತಿಯು ತುಂಬಾ ಪ್ರಬಲವಾಗಿರಲಿದ್ದು, ಈ ರಾಶಿಯ ಉದ್ಯೋಗಸ್ಥರು ಮತ್ತು ವ್ಯಾಪಾರಸ್ಥರು ಸಾಕಷ್ಟು ಪ್ರಗತಿಯನ್ನು ಕಾಣಲಿದ್ದಾರೆ.
ಇದನ್ನೂ ಓದಿ-Vastu Tips 2023: ಹೊಸ ವರ್ಷಕ್ಕಾಗಿ ಕ್ಯಾಲೆಂಡರ್ ಖರೀದಿಸಬೇಕೆ? ಈ ಸಲಹೆಗಳನ್ನು ಅನುಸರಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಮೀನ ರಾಶಿ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗುರುವಿನ ಈ ರಾಶಿ ಬದಲಾವಣೆಯು ಈ ಮೀನ ಜಾತಕದ ಸ್ಥಳೀಯರಿಗೆ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ, ಈ ರಾಶಿಯ ಜನರಿಗೆ ಆಕಸ್ಮಿಕ ಧನಲಾಭವಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ ಮತ್ತು ಆದಾಯದಲ್ಲಿ ಹೆಚ್ಚಳ ಗೋಚರಿಸಲಿದೆ. ಈ ಅವಧಿ ಉದ್ಯಮಿಗಳಿಗೆ ಅನುಕೂಲಕರವಾಗಿರುತ್ತದೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳು ತಮ್ಮ ತಮ್ಮ ಅಧ್ಯಯನದ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
2. ಕನ್ಯಾ ರಾಶಿ: ಗುರುವಿನ ಅನುಗ್ರಹದಿಂದ ಹೊಸ ವರ್ಷವು ಕನ್ಯಾ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ಹೊತ್ತು ತರಲಿದೆ. ಈ ರಾಶಿಯ ಜನರು ತಮ್ಮ ವಿವೇಚನೆ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿದ್ದಾರೆ. ಅದೃಷ್ಟವು ನಿಮ್ಮೊಂದಿಗೆ ಇರಲಿದೆ ಮತ್ತು ಯಾವುದಾದರೊಂದು ವಿವಾದದಲ್ಲಿ ನೀವು ಸಿಲುಕಿದ್ದರೆ, ಅದರಿಂದ ನಿಮಗೆ ಮುಕ್ತಿ ಸಿಗಲಿದೆ.
3. ಕರ್ಕ ರಾಶಿ: 2023 ರ ವರ್ಷವು ಕರ್ಕ ರಾಶಿಯ ಜನರ ಪಾಲಿಗೆ ತುಂಬಾ ಅದೃಷ್ಟ ತರಲಿದೆ. ಈ ಅವಧಿಯಲ್ಲಿ ಮುಚ್ಚಿರುವ ನಿಮ್ಮ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ ಮತ್ತು ನಿಮ್ಮ ಪ್ರತಿಯೊಂದು ಕಾರ್ಯವೂ ಅದೃಷ್ಟದ ಸಹಾಯದಿಂದ ಪೂರ್ಣಗೊಳ್ಳಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಸಾಮರಸ್ಯದ ವಾತಾವರಣ ಇರಲಿದೆ. ಆಸ್ತಿಪಾಸ್ತಿಗಳಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.
4. ಮಿಥುನ ರಾಶಿ: ಈ ಅವಧಿಯಲ್ಲಿ ಮಿಥುನ ರಾಶಿಯ ಜಾತಕದವರ ಪಾಲಿಗೂ ಕೂಡ ಸಮಯ ಉತ್ತಮವಾಗಿರಲಿದೆ. ಆದಾಯದಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು. ಲಾಭದ ಜೊತೆಗೆ ಬಡ್ತಿಯ ಎಲ್ಲಾ ಅವಕಾಶಗಳಿವೆ. ನೌಕರಿ ಅಥವಾ ಕೆಲಸದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಬರಲಿವೆ. ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಉತ್ತಮವಾಗಿರಲಿದೆ.
5. ಮೇಷ ರಾಶಿ: ಹೊಸ ವರ್ಷವು ಮೇಷ ರಾಶಿಯವರಿಗೆ ಸಾಕಷ್ಟು ಪ್ರಗತಿಯನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ, ಗುರು ಈ ರಾಶಿಯ ಜಾತಕದವರ ಮೇಲೆ ತನ್ನ ವಿಶೇಷ ಅನುಗ್ರಹವನ್ನು ಹೊಂದಿರಲಿದೆ. ಈ ಅವಧಿಯಲ್ಲಿ ನಿಮಗೆ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಮತ್ತು ನೀವು ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಇರುವಿರಿ. ಹೊಸ ಜವಾಬ್ದಾರಿ ಸಿಗುವ ಕಾರಣ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದೇಶಕ್ಕೆ ಹೋಗಲು ಬಯಸುವ ಯುವಕರು. ಈ ಅವಧಿಯಲ್ಲಿ ತಮ್ಮ ಆಸೆಯನ್ನು ಪೂರೈಸಿಕೊಳ್ಳಬಹುದು.