ಇರಾನಿನ ಚಾಬಾರ್ ಬಂದರು ಅಭಿವೃದ್ದಿಯಲ್ಲಿ ಭಾರತಕ್ಕೆ ನಿರ್ಭಂದಿಂದ ವಿನಾಯಿತಿ ನೀಡಿದ ಅಮೇರಿಕಾ

ಅಫ್ಘಾನಿಸ್ತಾನದೊಂದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ಜೊತೆಗೆ ಇರಾನ್ ನಲ್ಲಿ ಆಯಕಟ್ಟಿನ ಜಾಗದಲ್ಲಿರುವ ಚಬಹಾರ್ ಬಂದರಿನ ಅಭಿವೃದ್ಧಿಗಾಗಿ ಹೇರಿದ್ದ ಕೆಲವು ನಿರ್ಬಂಧಗಳಿಂದ ಭಾರತಕ್ಕೆ ಅಮೇರಿಕಾ ವಿನಾಯಿತಿ ನೀಡಿದೆ.

Last Updated : Nov 7, 2018, 10:30 AM IST
ಇರಾನಿನ ಚಾಬಾರ್ ಬಂದರು ಅಭಿವೃದ್ದಿಯಲ್ಲಿ ಭಾರತಕ್ಕೆ ನಿರ್ಭಂದಿಂದ ವಿನಾಯಿತಿ ನೀಡಿದ ಅಮೇರಿಕಾ   title=
file photo

ನವದೆಹಲಿ: ಅಫ್ಘಾನಿಸ್ತಾನದೊಂದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ಜೊತೆಗೆ ಇರಾನ್ ನಲ್ಲಿ ಆಯಕಟ್ಟಿನ ಜಾಗದಲ್ಲಿರುವ ಚಬಹಾರ್ ಬಂದರಿನ ಅಭಿವೃದ್ಧಿಗಾಗಿ ಹೇರಿದ್ದ ಕೆಲವು ನಿರ್ಬಂಧಗಳಿಂದ ಭಾರತಕ್ಕೆ ಅಮೇರಿಕಾ ವಿನಾಯಿತಿ ನೀಡಿದೆ.

ಇದಕ್ಕೂ ಮೊದಲು ಅಮೇರಿಕಾವು ಅತಿ ಕಠಿಣವಾದ ನಿರ್ಭಂದಗಳನ್ನು ಇರಾನ್ ಮೇಲೆ ಹೇರಿತ್ತು ಈಗ ಒಮಾನ್ ಕೊಲ್ಲಿಯ ಬಂದರಿನ ಅಭಿವೃದ್ದಿಯಲ್ಲಿ ಅಮೆರಿಕಾವು  ಭಾರತದ ಪಾತ್ರವನ್ನು ಗುರುತಿಸಿದೆ.ಈ ಹಿನ್ನಲೆಯಲ್ಲಿ ಈಗ ಅದು  ನಿರ್ಭಂದದಿಂದ ಹಲವು ವಿನಾಯಿತಿಗಳನ್ನು ನೀಡಿದೆ.

"ಹಲವು ರೀತಿಯಲ್ಲಿ ಪರಿಶೀಲನೆಯ ನಂತರ, ರಾಜ್ಯ ಕಾರ್ಯದರ್ಶಿ ಇಲಾಖೆಯು 2012 ರ ಇರಾನ್ ಸ್ವಾತಂತ್ರ್ಯ ಮತ್ತು ಕೌಂಟರ್-ಪ್ರಸರಣ ಕಾಯಿದೆ ಅಡಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸದಂತೆ ವಿನಾಯಿತಿ ನೀಡಿದೆ, ಚಾಬಹರ್ ಬಂದರಿನ ಅಭಿವೃದ್ಧಿಗೆ ಸಂಬಂಧಿಸಿದ ಹಾಗೂ ರೈಲ್ವೆ ನಿರ್ಮಾಣ ಮತ್ತು ಸರಕು ಸಾಗಣೆಗಾಗಿ ಅಫ್ಘಾನಿಸ್ತಾನದ ಬಳಕೆಗಾಗಿ ಅಭಿವೃದ್ದಿ ಪಡಿಸಲಾಗುತ್ತಿದೆ. ಅಲ್ಲದೆ ಈ ಬಂದರಿನ ಮೂಲಕ ಪರವಾನಿಗೆ ಇರುವ ಸರಕುಗಳು ಮತ್ತು  ಇರಾನಿನ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ" ಎಂದು ರಾಜ್ಯ ಇಲಾಖೆಯ ವಕ್ತಾರ ಪಿಟಿಐಗೆ ತಿಳಿಸಿದ್ದಾರೆ.

ಭಾರತಕ್ಕೆ ಈ ನೆರೆಯ ಪಾಕ್ ಮತ್ತು ಚೀನಾದ ಭದ್ರತೆಯ ದೃಷ್ಟಿಯಿಂದ ಈ ಬಂದರನ್ನು ಭಾರತ ನಿರ್ಮಿಸುತ್ತಿದೆ.ಅಲ್ಲದೆ ಈ ಬಂದರನ್ನು  ಅಫಘಾನಿಸ್ತಾನವು ಕೂಡ ಬಳಸಲು ಅನುಮತಿ ನೀಡಲಾಗಿದೆ.  

 

Trending News