ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಹಿನ್ನಲೆ ಇಂದು ಡಿಕೆ ಶಿವಕುಮಾರ್ ಸಮುದಾಯದ ಸ್ವಾಮೀಜಿ ಭೇಟಿ ಬಗ್ಗೆ ಜೋರು ಚರ್ಚೆ ಶುರುವಾಗಿದೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಣ್ಣು ಇಟ್ಟಿರುವುದು ಈಗಾಗಲೇ ಬಹಿರಂಗವಾಗಿದ್ದು ,ಸಮುದಾಯದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಬೆಂಬಲ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕಾರ ಹಲವು ಸಮುದಾಯಗಳ ನಾಯಕರು ತಮ್ಮ ಸ್ವಾಮೀಜಿಗಳ ಮೂಲಕ ಸಿಎಂ ಸ್ಥಾನಕ್ಕೆ ಏರುವ ಲೆಕ್ಕಾಚಾರ ಕನಕಪುರ ಬಂಡೆ ಅವರದ್ದು.
ಇದನ್ನೂ ಓದಿ : ಬಿಜೆಪಿಗೆ ಕುಸ್ತಿ ಮಾಡಲು ಜನರು ಬೇಕಾಗಿದ್ದಾರೆ-ಡಿ.ಕೆ.ಶಿವಕುಮಾರ್
ಒಕ್ಕಲಿಗ ಸಮುದಾಯದ ಬೆಂಬಲಕ್ಕಾಗಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ
ಒಕ್ಕಲಿಗ ಸಮುದಾಯದ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಬಗ್ಗೆ ಹಲವು ಚರ್ಚೆ ನಡೆಸಿದ್ದು ಮುಖ್ಯವಾಗಿ,ಒಕ್ಕಲಿಗ ಸಮುದಾಯದ ಬೆಂಬಲಕ್ಕಾಗಿ ಶಿವಕುಮಾರ್ ಯತ್ನ ನಡೆಸಿದ್ದಾರೆ.
ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಲ್ಲಿ ಚರ್ಚೆ ನಡೆಸಿದ ಸಂದರ್ಭದಲ್ಲಿ, ಕಾಂಗ್ರೆಸ್ ಪರವಾದ ಸರ್ವೇ ರಿಪೋರ್ಟ್ ಬಗ್ಗೆ ಶ್ರಿಗಳಿಗೆ ಮಾಹಿತಿ ನೀಡಿದ ಶಿವಕುಮಾರ್. ಹೀಗಾಗಿ ಸಮುದಾಯ ತಮ್ಮ ಪರ ನಿಲ್ಲುವ ಬಗ್ಗೆ ನಿರ್ಮಲಾನಂದನಾಥ ಸ್ವಾಮೀಜಿಗೆ ಬೇಡಿಕೆ ಸಲ್ಲಿಸಿದರು.
ತಮ್ಮ ಸಮುದಾಯದ ಬೆಂಬಲ ಸಿಕ್ರೆ, ಶಿವಕುಮಾರ್ ಉತ್ಸಾಹಕ್ಕೆ ಮತ್ತಷ್ಟು ಬಲ ಸಿಗುವುದು ನಿಶ್ಚಿತ.ಹೀಗಾಗಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಬೆಂಬಲವನ್ನ ತನ್ಮೂಲಕ ಪಕ್ಷಕ್ಕೆ ತರುವ ಲೆಕ್ಕಾಚಾರ ಇದೆ. ಇದರ ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ, ಸಿಎಂ ಸ್ಥಾನಕ್ಕೆ ಏರಲು ಸಿದ್ಧತೆ ನಡೆಸುತ್ತಿದ್ದಾರೆ.
ಇನ್ನು ಪ್ರತಿ ತಂತ್ರವಾಗಿ ಸಿದ್ದರಾಮಯ್ಯ ಯಾವ ರಾಜಕೀಯ ತಂತ್ರಗಾರಿಕೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ : ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ, ಅದರ ಅವಶ್ಯಕತೆಯೂ ನನಗಿಲ್ಲ: ಸಚಿವರ ಸ್ಪಷ್ಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.