ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಳವಾಗಿದ್ದು ಈಗ ಹೊಂಜು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.
ಪಕ್ಕದ ರಾಜ್ಯಗಳಲ್ಲಿ ಬೆಳೆಗಳನ್ನು ಸುಡುವುದರಿಂದಾಗಿ ಈ ಸಿಸನ್ ನಲ್ಲಿ ಹೊಂಜು ಮೀತಿ ಮೀರಿದ್ದು ಇದರಿಂದಾಗಿ ಈಗ ದೆಹಲಿಯಲ್ಲಿ ವಾಯುಗುಣಮಟ್ಟ ಸಂಪೂರ್ಣ ಕುಸಿದಿದೆ.ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಲೋದಿ ರಸ್ತೆಯಲ್ಲಿ ಅತಿ ಕನಿಷ್ಠ 283 ರಷ್ಟು ಮಾಲಿನ್ಯ ಇಂದು ಬೆಳಗ್ಗೆ ದಾಖಲಾಗಿದೆ.
#Visuals of smog seen at #Delhi's India Gate in early morning hours. pic.twitter.com/c2IOErahL6
— ANI (@ANI) October 31, 2018
ನವಂಬರ್ 1 ರಿಂದ ಎಲ್ಲ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ನಿಬಂಧ:
ಹೊಂಜು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈಗ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಈಗ ಹಲವು ಪ್ರಮುಖ ಕ್ರಮಗಳನ್ನು ತಗೆದುಕೊಂಡಿದ್ದು, ಅದರಲ್ಲಿ ಮಾಲಿನ್ಯ ಮೀತಿಮೀರಿದರೆ ಖಾಸಗಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಲಾಗುವುದು ಮತ್ತು ನವಂಬರ್ 1 ರಿಂದ 10 ರ ವರೆಗೆ ಎಲ್ಲ ನಿರ್ಮಾಣದ ಕಾರ್ಯಗಳಿಗೆ ನಿಷೇದಿಸಲಾಗುವುದು ಎಂದು ತಿಳಿದುಬಂದಿದೆ. ಕಲ್ಲಿದ್ದಲನ್ನು ಇಂಧನವಾಗಿ ಬಳಸಲು ಕೂಡ ನವಂಬರ್ 4-10 ರವರೆಗೆ ನಿಷೇಧಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಲಿನ್ಯವುಂಟು ಮಾಡುವ ವಾಹನಗಳಿಗೆಗೂ ಕೂಡ ನಿರ್ಬಂಧ ಹಾಕುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸೂಚಿಸಿದೆ.