ಚಳಿಗಾದಲ್ಲಿ ಗರ್ಭಾವಸ್ಥೆಯ ಮಹಿಳೆಯರ ದೇಹದಲ್ಲಾಗುವ ಬದಲಾವಣೆ, ಆರೋಗ್ಯದಲ್ಲಿ ಏರುಪೇರುಗಳನ್ನು ನಿರ್ವಹಿಸಲು, ಪೌಷ್ಟಿಕಾಂಶ, ನಿದ್ರೆ ಮತ್ತು ವ್ಯಾಯಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಅದರ ಜೊತೆಗೆ ಸೇವಿಸುವ ಆಹಾರದ ಬಗ್ಗೆ ಕೂಡ ವಿಶೇಷ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಸಂಭಂದಿಸಿದಂತೆ ಕೆಲವು ಟಿಪ್ಸ್ ನಿಮಗಾಗಿ ಇಲ್ಲಿದೆ ನೋಡಿ..
Pregnant Women : ಇಂದು, ಮಹಿಳೆಯರು ವಿದೇಶಿ ಪ್ರವಾಸ, ವ್ಯಾಪಾರ, ಆರೋಗ್ಯ ಮತ್ತು ಕ್ರೀಡೆ ಸೇರಿದಂತೆ ಪ್ರತಿಯೊಂದು ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಳೆಯರು ತಾವು ಗರ್ಭಿಣಿಯಾದಾಗ ತಮ್ಮ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಚಳಿಗಾದಲ್ಲಿ ಗರ್ಭಾವಸ್ಥೆಯ ಮಹಿಳೆಯರ ದೇಹದಲ್ಲಾಗುವ ಬದಲಾವಣೆ, ಆರೋಗ್ಯದಲ್ಲಿ ಏರುಪೇರುಗಳನ್ನು ನಿರ್ವಹಿಸಲು, ಪೌಷ್ಟಿಕಾಂಶ, ನಿದ್ರೆ ಮತ್ತು ವ್ಯಾಯಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಅದರ ಜೊತೆಗೆ ಸೇವಿಸುವ ಆಹಾರದ ಬಗ್ಗೆ ಕೂಡ ವಿಶೇಷ ಗಮನ ಹರಿಸಬೇಕಾಗುತ್ತದೆ. ಇದಕ್ಕೆ ಸಂಭಂದಿಸಿದಂತೆ ಕೆಲವು ಟಿಪ್ಸ್ ನಿಮಗಾಗಿ ಇಲ್ಲಿದೆ ನೋಡಿ..
ಸ್ಟ್ರಾಬೆರಿ ಹಣ್ಣುಗಳು : ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಒಳಗೊಂಡಿದೆ, ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಚಳಿಗಾಲದಲ್ಲಿ ಆಗಾಗ್ಗೆ ಎದುರಾಗುವ ಉಸಿರಾಟದ ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ನಟ್ಸ್ : ಖರ್ಜೂರ, ಗೋಡಂಬಿ, ಬಾದಾಮಿ ಮತ್ತು ವಾಲ್ನಟ್ಗಳು ವಿಟಮಿನ್ಗಳು, ಖನಿಜಗಳು ಮತ್ತು ಸಸ್ಯ ನಾರಿನೊಂದಿಗೆ ತುಂಬಿರುತ್ತವೆ. ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ವಿಶಿಷ್ಟ ಹಣ್ಣುಗಳಿಗಿಂತ ಅವು ಉತ್ತಮವಾಗಿವೆ.
ಹಸಿರು ತರಕಾರಿಗಳನ್ನು : ಚಳಿಗಾಲದಲ್ಲಿ, ತಾಜಾ ಬ್ರೊಕೊಲಿ ಮತ್ತು ಪಾಲಕ್ ಮತ್ತು ಮೆಂತ್ಯದಂತಹ ಗಾಢ ಹಸಿರು ತರಕಾರಿಗಳು ಲಭ್ಯವಿವೆ. ಈ ಆಹಾರಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಹಸಿರು ತರಕಾರಿಗಳಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಸೇರಿವೆ.
ಮೊಟ್ಟೆ : ಮೊಟ್ಟೆಯಲ್ಲಿ ಪ್ರೋಟೀನ್ನ ಉತ್ತಮ ಮೂಲವಾಗಿದೆ, ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ಮೊಟ್ಟೆ ಸೇವಿಸಬೇಕು.
ಮೊಸರು : ಗರ್ಭಾಶಯದಲ್ಲಿ ಬೆಳೆಯುತ್ತಿರುವ ಭ್ರೂಣವು ಬೆಳೆಯಲು ಮತ್ತು ಅದರ ದೇಹ ರಚನೆಯನ್ನು ಅಭಿವೃದ್ಧಿಪಡಿಸಲು ಕ್ಯಾಲ್ಸಿಯಂ ಅಗತ್ಯವಿರುವ ಕಾರಣ, ಗರ್ಭಿಣಿ ಮಹಿಳೆಯರಿಗೆ ದೊಡ್ಡ ಕ್ಯಾಲ್ಸಿಯಂ ಮೀಸಲು ಅಗತ್ಯವಿರುತ್ತದೆ. ಇದಕ್ಕಾಗಿ ಗರ್ಭಿಣಿ ಮಹಿಳೆಯರು ಮೊಸರು ಸೇವಿಸಬೇಕು.