Post Office Scheme Update: ಅಂಚೆ ಕಚೇರಿಯ ವತಿಯಿಂದ ಹಲವು ವಿಶೇಷ ಯೋಜನೆಗಳನ್ನು ನಡೆಸಲಾಗುತ್ತಿದ್ದು, ಯೋಜನೆಗಳ ಅಡಿ ನೀವು ದೊಡ್ಡ ಲಾಭವನ್ನೇ ಪಡೆಯಬಹುದು. ಇಂದು ನಾವು ನಿಮಗೆ ಹೇಳಲು ಹೊರಟಿರುವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವ ಮೂಲಕ ನೀವು ಹಣವನ್ನು ಡಬಲ್ ಮಾಡಬಹುದು.
Post Office Scheme Update: ಅಂಚೆ ಕಚೇರಿಯ ವತಿಯಿಂದ ಹಲವು ವಿಶೇಷ ಯೋಜನೆಗಳನ್ನು ನಡೆಸಲಾಗುತ್ತಿದ್ದು, ಯೋಜನೆಗಳ ಅಡಿ ನೀವು ದೊಡ್ಡ ಲಾಭವನ್ನೇ ಪಡೆಯಬಹುದು. ಇಂದು ನಾವು ನಿಮಗೆ ಹೇಳಲು ಹೊರಟಿರುವ ಸರ್ಕಾರಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವ ಮೂಲಕ ನೀವು ಹಣವನ್ನು ಡಬಲ್ ಮಾಡಬಹುದು. ಹೌದು, ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಂದು ವೇಳೆ ನೀವು 5 ಲಕ್ಷ ಹೂಡಿಕೆಯನ್ನು ಮಾಡಿದರೆ, ನಿಮಗೆ ಸಂಪೂರ್ಣ 10 ಲಕ್ಷ ರೂ.ಗಳು ಸಿಗಲಿವೆ.
ಇದನ್ನೂ ಓದಿ-Car Buying Tips: ಹೊಸ ಕಾರು ಖರೀದಿಸುವಾಗ ಈ 3 ಟ್ರಿಕ್ ಅನುಸರಿಸಿ, ಲಕ್ಷಾಂತರ ರೂ.ಗಳ ಲಾಭ ನಿಮ್ಮದಾಗಿಸಿಕೊಳ್ಳಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆಗಳನ್ನು ನೀಡುವುದಿಲ್ಲ. )
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಕಿಸಾನ್ ವಿಕಾಸ್ ಪತ್ರ- ಅಂಚೆ ಕಚೇರಿಯ ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ. ಈ ಯೋಜನೆಯಲ್ಲಿ ನೀವು ದುಪ್ಪಟ್ಟು ಹಣವನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ದೊಡ್ಡ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ, ನಿಮ್ಮ ಮೊತ್ತವು ಕೇವಲ 123 ತಿಂಗಳುಗಳ ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ.
2. ಜಂಟಿ ಖಾತೆ ತೆರೆಯಿರಿ- ನೀವು ಅಂಚೆ ಕಚೇರಿಗೆ ಭೇಟಿ ನೀಡುವ ಮೂಲಕ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಇದಲ್ಲದೆ, ನೀವು ಜಂಟಿ ಖಾತೆಯನ್ನು ಸಹ ತೆರೆಯಬಹುದು. ಪ್ರಸ್ತುತ, ಹೂಡಿಕೆದಾರರಿಗೆ ಈ ಯೋಜನೆಯಲ್ಲಿ ಶೇಕಡಾ 6.9 ರ ದರದಲ್ಲಿ ಬಡ್ಡಿಯ ಲಾಭ ಸಿಗುತ್ತಿದೆ.
3. ಪರಿಪಕ್ವತೆಯ ಅವಧಿ- ನೀವು ಈ ಯೋಜನೆಯಲ್ಲಿ 123 ತಿಂಗಳವರೆಗೆ ರೂ 5 ಲಕ್ಷವನ್ನು ಹೂಡಿಕೆ ಮಾಡಿದರೆ, ಈ ಯೋಜನೆಯಲ್ಲಿ ನೀವು ಶೇಕಡಾ 6.9 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಅಂದರೆ, ಮೆಚ್ಯೂರಿಟಿಯ ಮೇಲಿನ ಅಸಲು ಮೊತ್ತದ ಜೊತೆಗೆ ನೀವು ಬಡ್ಡಿಯ ಲಾಭವನ್ನೂ ಸಹ ಪಡೆಯಬಹುದು.
4. ಮೂರು ತಿಂಗಳಿಗೊಮ್ಮೆ ಬಡ್ಡಿ ಸಿಗುತ್ತದೆ- ಕೇಂದ್ರ ಸರ್ಕಾರದ ಪರವಾಗಿ, ಈ ಯೋಜನೆಯಲ್ಲಿ, ಬಡ್ಡಿಯ ಲಾಭವನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತದೆ. ಮತ್ತೊಂದೆಡೆ, ಹೂಡಿಕೆಯ ಸಮಯದಲ್ಲಿ ಬಡ್ಡಿದರಗಳಲ್ಲಿ ಬದಲಾವಣೆಯಾಗಿದ್ದರೆ, ನೀವು ಕಡಿಮೆ ಅಥವಾ ಹೆಚ್ಚಿನ ಲಾಭವನ್ನು ಪಡೆಯಬಹುದು.
5. ಎಸ್ಬಿಐ ಎಫ್ ಡಿ- ನೀವು ಸ್ಟೇಟ್ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದರೆ, ನಿಮಗೆ ಶೇಕಡಾ 6.25 ರ ದರದಲ್ಲಿ ಬಡ್ಡಿಯ ಲಾಭ ಸಿಗುತ್ತದೆ. ಮತ್ತೊಂದೆಡೆ, ನೀವು 5 ರಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿ ಮಾಡಿದರೆ, ನೀವು ಶೇ. 6.90 ರ ದರದಲ್ಲಿ ಬಡ್ಡಿಯ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಕನಿಷ್ಟ ರೂ 1,000 ಹೂಡಿಕೆಯೊಂದಿಗೆ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಬಹುದು. ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ ಎಂಬುದು ಇಲ್ಲಿ ಗಮನಾರ್ಹ.