ನವದೆಹಲಿ: ರಾಮ ಮಂದಿರ ವಿಷಯದಲ್ಲಿ ಹಿಂದುಗಳು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಿಳಿಸಿದ್ದಾರೆ.
ರಾಮಮಂದಿರ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಪರ್ಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಂದಿನ ಜನೇವರಿಯಲ್ಲಿ ವಿಚಾರಣೆ ನಡೆಸಲಿದೆ ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರೀಸದಸ್ಯ ಪೀಠ ತಿಳಿಸಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ " ಶ್ರೀರಾಮನು ಹಿಂದುಗಳ ನಂಬಿಕೆಯ ಮೂಲಾಧಾರ,ಕಾಂಗ್ರೆಸ್ ರಾಮಮಂದಿರ ವಿಷಯವನ್ನು ಹಿಂದು-ಮುಸ್ಲಿಂ ಸಮಸ್ಯೆಯಾಗಿ ಬಿಂಬಿಸುತ್ತಿದೆ.ಇದರಿಂದ ಹಿಂದುಗಳು ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ.ಒಂದು ವೇಳೆ ಹಿಂದುಗಳು ತಾಳ್ಮೆಯನ್ನು ಕಳೆದುಕೊಂಡರೆ ಏನಾಗುತ್ತೆ ಎನ್ನುವ ಭಯವಿದೆ ಎಂದು ಅವರು ತಿಳಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪರ್ಶ್ನಿಸಿ ಒಟ್ಟು ೧೪ ಮನವಿಗಳನ್ನು ಸಲ್ಲಿಸಲಾಗಿದೆ.ಹೈಕೋರ್ಟ್ ನೀಡಿರುವ ತೀರ್ಪಿನನ್ವಯ 2.77 ಎಕರೆ ಭೂಮಿಯನ್ನು ಸುಜಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್ ಲಾಲ್ಲಾ ಗಳಿಗೆ ಮೂರು ಭಾಗಗಳಾಗಿ ಹಂಚಲಾಗಿದೆ.