Yuvraj Singh : ಸ್ಫೋಟಕ ಬ್ಯಾಟಿಂಗ್ನಿಂದ ಯಾವಾಗಲೂ ಸದ್ದು ಮಾಡುತ್ತಿದ್ದ ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಈಗ ಬೇರೆಯೇ ವಿಷಯದಿಂದ ಸುದ್ದಿಯಾಗಿದ್ದಾರೆ. ಹೌದು, ಯುವರಾಜ್ ಸಿಂಗ್ ಗೆ ಗೋವಾ ಸರ್ಕಾರವು ನೋಟಿಸ್ ನೀಡಿ ಜಾರಿ ಮಾಡಿ ವಿಚಾರಣೆಗೆ ಕರೆದಿದೆ.
ಸಂಕಷ್ಟದಲ್ಲಿ ಯುವರಾಜ್ ಸಿಂಗ್
ನೆಮೊರ್ಜಿಮ್ನಲ್ಲಿ ತಮ್ಮ ವಿಲ್ಲಾವನ್ನು ನೋಂದಾಯಿಸದೆ 'ಹೋಮ್ಸ್ಟೇ' ಆಗಿ ಪರಿವರ್ತಿಸಿದ್ದಕ್ಕೆ ಯುವರಾಜ್ ಸಿಂಗ್ ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್ ನೀಡಿದೆ. ಈ ನೋಟಿಸ್ನಲ್ಲಿ ಡಿಸೆಂಬರ್ 8 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಗೋವಾ ಪ್ರವಾಸೋದ್ಯಮ ವ್ಯವಹಾರ ಕಾಯಿದೆ 1982 ರ ಅಡಿಯಲ್ಲಿ, ನೋಂದಣಿ ನಂತರವೇ ರಾಜ್ಯದಲ್ಲಿ 'ಹೋಮ್ಸ್ಟೇ' ಅನ್ನು ನಿರ್ವಹಿಸಬಹುದು ಎಂಬ ನಿಯಮವಿದೆ.
ದಂಡ ಕಟ್ಟಬೇಕಾಗಬಹುದು ಯುವರಾಜ್
ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಶ್ ಕಾಳೆ ಅವರು ನವೆಂಬರ್ 18 ರಂದು ಉತ್ತರ ಗೋವಾದ ಮೊರ್ಜಿಮ್ನಲ್ಲಿರುವ ಯುವರಾಜ್ ಸಿಂಗ್ ಮಾಲೀಕತ್ವದ ವಿಲ್ಲಾ 'ಕಾಸಾ ಸಿಂಗ್' ವಿಳಾಸದಲ್ಲಿ ಯುವರಾಜ್ ಸಿಂಗ್ ಅವರಿಗೆ ಡಿಸೆಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರನ್ನು ಸಂಜೆ 5.00 ಗಂಟೆಗೆ ವೈಯಕ್ತಿಕ ವಿಚಾರಣೆಗಾಗಿ ಹಾಜರಾಗುವಂತೆ ತಿಳಿಸಲಾಗಿದೆ. ಪ್ರವಾಸೋದ್ಯಮ ವ್ಯಾಪಾರ ಕಾಯಿದೆಯಡಿ ಆಸ್ತಿಯನ್ನು ನೋಂದಾಯಿಸದಿದ್ದಕ್ಕಾಗಿ ಯುವರಾಜ್ ಸಿಂಗ್ ವಿರುದ್ಧ ದಂಡನಾತ್ಮಕ ಕ್ರಮವೆಂದು (ಒಂದು ಲಕ್ಷ ರೂಪಾಯಿಗಳವರೆಗೆ ದಂಡ) ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಯುವಿ ಮಾಡಿರುವ ಟ್ವೀಟ್ ಕೂಡ ನೋಟಿಸ್ನಲ್ಲಿ ಉಲ್ಲೇಖ
ಯುವರಾಜ್ ಸಿಂಗ್ ಅವರಿಗೆ ನೀಡಲಾದ ನೋಟಿಸ್ನಲ್ಲಿ, "ವರ್ಚೆವಾಡ, ಮೊರ್ಜಿಮ್, ಪೆರ್ನೆಮ್, ಗೋವಾದಲ್ಲಿ ನೆಲೆಗೊಂಡಿರುವ ನಿಮ್ಮ ವಸತಿ ಆವರಣವು ಹೋಮ್ಸ್ಟೇಗಳಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು 'Airbnb' ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಬುಕಿಂಗ್ಗೆ ಲಭ್ಯವಿರುವಂತೆ ಕಾರ್ಯನಿರ್ವಹಿಸುತ್ತಿರುವುದು ಕೆಳಗೆ ಸಹಿ ಮಾಡಿದವರ ಗಮನಕ್ಕೆ ಬಂದಿದೆ. ' ನಿಮ್ಮ ಗೋವಾ ಮನೆಯಲ್ಲಿ ಆರು ಜನರಿಗೆ ಆತಿಥ್ಯ ನೀಡುವುದಾಗಿ ಮತ್ತು ಅದರ ಬುಕಿಂಗ್ 'Airbnb' ನಲ್ಲಿ ಮಾತ್ರ ಎಂದು ಯುವರಾಜ್ ಮಾಡಿದ ಟ್ವೀಟ್ ಅನ್ನು ಇಲಾಖೆ ಉಲ್ಲೇಖಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.