ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪಾಕ್ ವಿರುದ್ಧ ಐದು ವಿಕೆಟ್ ಗಳ ಅಂತರದಿಂದ ಗೆಲ್ಲುವ ಮೂಲಕ ಎರಡನೇ ಬಾರಿ ವಿಶ್ವಕಪ್ ಟ್ರೋಪಿಯನ್ನು ಎತ್ತಿ ಹಿಡಿದಿದೆ.
ಟಾಸ್ ಗೆದ್ದು ಮೊದಲು ಮೊದಲ ಫಿಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ತನ್ನ ನಿರ್ಧಾರ ಸರಿ ಎನ್ನುವಂತೆ ಪಾಕ್ ತಂಡವನ್ನು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.ಪಾಕ್ ಪರವಾಗಿ ಮಸೂದ್ 38 ಹಾಗೂ ನಾಯಕ ಬಾಬರ್ ಅಜಂ 32 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾದರು.ಇದರಿಂದಾಗಿ ಪಾಕ್ ತಂಡವು ಕೇವಲ 137 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.
Stokes does it again!
Congratulations to England, #T20WorldCup Champions!
Iconic moments like this will be available as officially licensed ICC digital collectibles with @0xFanCraze.
Visit https://t.co/8TpUHbyGW2 today to see if this could be a Crictos of the Game. pic.twitter.com/Kt5TWuYO1L
— ICC (@ICC) November 13, 2022
ಇಂಗ್ಲೆಂಡ್ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಸ್ಯಾಮ್ ಕರನ್ ಮೂರು ಹಾಗೂ ಆದಿಲ್ ರಸಿದ್ ಮತ್ತು ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಾಕ್ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
WHAT A WIN! 🎉
England are the new #T20WorldCup champions! 🤩#PAKvENG | #T20WorldCupFinal | 📝 https://t.co/HdpneOINqo pic.twitter.com/qK3WPai1Ck
— ICC (@ICC) November 13, 2022
ಪಾಕ್ ತಂಡವು ನೀಡಿದ 138 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭದಲ್ಲಿ ತಂಡದ ಮೊತ್ತ 32 ರನ್ ಗಳಾಗುವಷ್ಟರಲ್ಲಿ ಅಲೆಕ್ಶ್ ಹೆಲ್ಸ್ ಮತ್ತು ಪಿಲಿಪ್ ಸಾಲ್ಟ್ ಅವರ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಎದುರಿಸಿತು. ಈ ಹಂತದಲ್ಲಿ ಬೆನ್ ಸ್ಟೋಕ್ ಹಾಗೂ ಹ್ಯಾರಿ ಬ್ರೂಕ್ ಅವರ ಭದ್ರವಾಗಿ ನೆಲೆಯೂರುವ ಮೂಲಕ ತಂಡಕ್ಕೆ ಆಸರೆಯಾದರು, ಬೆನ್ ಸ್ಟೋಕ್ 49 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಗೆ ಮೊಯಿನ್ ಅಲಿ ಕೇವಲ 13 ಎಸೆತಗಳಲ್ಲಿ 19 ರನ್ ಗಳಿಸುವುದರ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ತಂದರು.
ಅಂತಿಮವಾಗಿ ಇಂಗ್ಲೆಂಡ್ ತಂಡವು 19 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿತು.ಆ ಮೂಲಕ ಈಗ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಟಿ 20 ವಿಶ್ವಕಪ್ ನ್ನು ತನ್ನದಾಗಿಸಿಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.