ನವದೆಹಲಿ: ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ T20 ವಿಶ್ವಕಪ್ ಸೆಮಿಫೈನಲ್ ಪಂದ್ಯವು ನವೆಂಬರ್ 10ರಂದು ಅಡಿಲೇಡ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇತ್ತೀಚೆಗೆ ಆಟಗಾರನೊಬ್ಬ ಗಾಯಗೊಂಡಿದ್ದರಿಂದ ತಂಡದಲ್ಲಿ ಈ ದೊಡ್ಡ ಬದಲಾವಣೆ ಮಾಡಲಾಗಿದೆ.
ಈ ಆಟಗಾರನ ಎಂಟ್ರಿ..!
T20 ವಿಶ್ವಕಪ್ನ ಈ ದೊಡ್ಡ ಪಂದ್ಯಕ್ಕೂ ಮೊದಲು ಇಂಗ್ಲೆಂಡ್ ತಂಡದ ಪಾಳೆಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಡೇವಿಡ್ ಮಲಾನ್ ಗಾಯಗೊಂಡಿದ್ದರು. ತೊಡೆಸಂದು ಗಾಯದಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದ ಮಲಾನ್ ಬದಲಿಗೆ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಲಾನ್ ಅವರು ಫೀಲ್ಡಿಂಗ್ ಸಮಯದಲ್ಲಿ ಗಾಯಗೊಂಡಿದ್ದರು, ಹೀಗಾಗಿ ತಂಡದಿಂದ ಹೊರಗುಳಿಯಬೇಕಾಯಿತು.
ಇದನ್ನೂ ಓದಿ: “ಭಾರತೀಯರು ವಿದೇಶಿ ಕ್ರಿಕೆಟ್ ಲೀಗ್ ಗಳಲ್ಲಿ ಆಡುವುದಿಲ್ಲ”: BCCI ಮಹತ್ವದ ಹೇಳಿಕೆ
ಸ್ಫೋಟಕ ಬ್ಯಾಟ್ಸ್ಮನ್ ಸಾಲ್ಟ್!
ಫಿಲ್ ಸಾಲ್ಟ್ ನಂಬರ್-3ರ ಕ್ರಮಾಂಕದಲ್ಲಿ ಆಡಲಿದ್ದಾರೆ. ಅವರು ಇದುವರೆಗೆ ಇಂಗ್ಲೆಂಡ್ ತಂಡದ ಪರವಾಗಿ 11 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಸಾಲ್ಟ್ 164.3 ಸ್ಟ್ರೈಕ್ ರೇಟ್ನಲ್ಲಿ 235 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 2 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ.
ಮೊಯಿನ್ ಅಲಿ ಹೇಳಿದ್ದೇನು?
ಡೇವಿಡ್ ಮಲಾನ್ ಗಾಯದ ಬಗ್ಗೆ ತಂಡದ ಸಹ ಆಟಗಾರ ಮೊಯಿನ್ ಅಲಿ ಮಾತನಾಡಿದ್ದಾರೆ. ‘ಹಲವು ವರ್ಷಗಳಿಂದ ಮಲಾನ್ ನಮ್ಮ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಅವರು ತಂಡದಿಂದ ಹೊರಗುಳಿದಿರುವುದು ಬೇಸರ ತರಿಸಿದೆ. ತಂಡದ ಬ್ಯಾಟಿಂಗ್ ಮಲಾನ್ ಉತ್ತಮ ಕೊಡುಗೆ ನೀಡುತ್ತಿದ್ದರು. ಒಳ್ಳೆಯ ಬ್ಯಾಟ್ಸ್ಮನ್ ತಂಡದಲ್ಲಿ ಇಲ್ಲದಿರುವುದು ತುಸು ಬೇಸರ ತರಿಸಿದೆ. ಸಾಲ್ಟ್ ಕೂಡ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದು, ಮಲಾನ್ ಸ್ಥಾನ ತುಂಬಲಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: SuryaKumar Yadav ಆಟವನ್ನು ನಿಲ್ಲಿಸಬೇಕಿದೆ: ಇಂಗ್ಲೆಂಡ್ ಆಲ್ ರೌಂಡರ್ ಹೀಗಂದಿದ್ದೇಕೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.