ಫೇಶಿಯಲ್ ಆದ ಮೇಲೆ ಯಾವುದೇ ಕಾರಣಕ್ಕೂ ಈ ತಪ್ಪು ಮಾಡ್ಬೇಡಿ, ಚರ್ಮ ಹಾಳಾಗೋದು ಗ್ಯಾರಂಟಿ !
ಫೇಶಿಯಲ್ ಮಾಡಿಸುವುದರಿಂದ ಚರ್ಮದ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಚರ್ಮವನ್ನು ನವೀಕರಿಸುತ್ತದೆ. ಮತ್ತೊಂದೆಡೆ, ನೀವು ಫೇಶಿಯಲ್ ಮಾಡಿದ ನಂತರ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಆಮ್ಲಜನಕದ ಹರಿವು ಹೆಚ್ಚಾಗುತ್ತದೆ. ಟಾಕ್ಸಿನ್ಗಳು ಸಹ ಬಿಡುಗಡೆಯಾಗುತ್ತವೆ. ಹಾಗಾಗಿ, ಚರ್ಮದ ಆರೋಗ್ಯಕ್ಕಾಗಿ, ತಿಂಗಳಿಗೊಮ್ಮೆ ಫೆಶಿಯಲ್ ಮಾಡಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ಕೆಲವು ಮಹಿಳೆಯರು ವಿಶೇಷ ಸಂದರ್ಭಗಳಲ್ಲಿ ಮಾತ್ರ ಫೇಶಿಯಲ್ ಮಾಡಿಕೊಳ್ಳುತ್ತಾರೆ. ಅದೇನೇ ಇರಲಿ, ಫೇಶಿಯಲ್ ನಂತರ, ಮುಖದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಫೇಶಿಯಲ್ ಮಾಡಿಸಿದ ಬಳಿಕ ನೀವು ನಿಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಫೇಶಿಯಲ್ ಮಾಡಿಸಿದ ಬಳಿಕ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ಚರ್ಮದ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು.