ನವದೆಹಲಿ: ಸಂತೋಷ, ನಗು ಮತ್ತು ದುಃಖದಂತೆ ಕೋಪವು ಸಹ ಒಂದು ಭಾವನೆಯಾಗಿದೆ. ಅನೇಕ ಬಾರಿ ನಾವು ಒಂದೇ ವ್ಯಕ್ತಿಯ ಮೇಲೆ ನಮ್ಮ ಕೋಪವನ್ನು ಹೊರಹಾಕುತ್ತೇವೆ. ಕೆಲವೊಮ್ಮೆ ಅತಿಯಾದ ಕೋಪವು ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು. ಹುಡುಗ ಅಥವಾ ಹುಡುಗಿ ಕೋಪಗೊಳ್ಳಬಹುದು, ಆದರೆ ಮಹಿಳೆಯರನ್ನು ಪುರುಷರಿಗಿಂತ ಹೆಚ್ಚು ಭಾವನಾತ್ಮಕವೆಂದು ಪರಿಗಣಿಸಲಾಗುತ್ತದೆ. ಅನೇಕ ಬಾರಿ ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಮತ್ತು ಸಂಗಾತಿಯೊಂದಿಗೆ ಕೋಪಗೊಳ್ಳುತ್ತಾರೆ. ನಿಮ್ಮ ಕೋಪವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯಿರಿ.
ಹುಡುಗಿಯರು ಹೇಗೆ ಕೋಪ ನಿಯಂತ್ರಿಸುವುದು?
1. ಆಳವಾದ ಉಸಿರು ತೆಗೆದುಕೊಳ್ಳಿ
ನಿಮ್ಮ ಸಂಗಾತಿಯ ಕೆಲಸ ಇಷ್ಟವಾಗದಿದ್ದಲ್ಲಿ ನೀವು ಅವರ ಮೇಲೆ ಉದ್ಧಟತನ ತೋರುತ್ತೀರಿ. ಈ ವೇಳೆ ಕೋಪಗೊಳ್ಳುವುದನ್ನು ನಿಲ್ಲಿಸಲು ಆಳ ಉಸಿರನ್ನು ತೆಗೆದುಕೊಳ್ಳಿ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಆದಷ್ಟು ಪ್ರಯತ್ನಿಸಿರಿ. ಇದನ್ನು ನಿರಂತರವಾಗಿ ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ ಮತ್ತು ಕೋಪ ತನ್ನಿಂದ ತಾನೇ ಕಡಿಮೆಯಾಗುತ್ತದೆ.
ಇದನ್ನೂ ಓದಿ: Anti Mosquito Plants: ಮನೆಯಲ್ಲಿ ಈ 5 ಗಿಡ ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯಲ್ಲ!
2. ಮನಸ್ಸನ್ನು ಶಾಂತಗೊಳಿಸಿ
ಕೋಪಗೊಳ್ಳುವುದು ನಿಮ್ಮ ಜೀವನ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ನೀವು ಉದ್ರೇಕಗೊಳ್ಳುತ್ತಿರುವ ವಿಷಯದ ಬಗ್ಗೆ ಯೋಚಿಸುವುದನ್ನು ಮೊದಲು ನಿಲ್ಲಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಮನಸ್ಸನ್ನು ಸಾಧ್ಯವಾದಷ್ಟು ಶಾಂತಗೊಳಿಸಲು ಪ್ರಯತ್ನಿಸಿ.
3. ಹೃದಯದ ಮಾತು ಕೇಳಿ
ನಿಮ್ಮ ಸಂಗಾತಿಯ ಯಾವುದೇ ಅಭ್ಯಾಸ ಅಥವಾ ಕೆಲಸ ನಿಮಗೆ ಇಷ್ಟವಾಗದಿದ್ದರೆ, ನನಗೆ ಈ ವಿಷಯದಲ್ಲಿ ಸಮಸ್ಯೆ ಇದೆ ಎಂದು ಹೇಳಿ. ವಾಸ್ತವವಾಗಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ವಿಷಯವನ್ನು ಇಟ್ಟುಕೊಂಡು 1 ದಿನವಷ್ಟೇ ಕೋಪಗೊಳ್ಳುತ್ತಾನೆ ನಂತರ ತಾನೇ ಅದರಿಂದ ಹೊರಬರುತ್ತಾನೆ.
ಇದನ್ನೂ ಓದಿ: Personality Test : ಈ ರೆಕ್ಕೆಗಳಲ್ಲಿ ಒಂದನ್ನು ಆರಿಸಿ.. ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ.!
4. ಸಂಗೀತ ಆಲಿಸಿ
ನಿಮ್ಮ ಮನಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಸಂಗೀತವು ವ್ಯಕ್ತಿಗೆ ಥೆರಪಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಕೋಪಗೊಂಡಾಗ ತಕ್ಷಣವೇ ಮೃದುವಾದ ಸಂಗೀತದ ಹಾಡು ಕೇಳಲು ಪ್ರಾರಂಭಿಸಿ. ಇದು ನಿಮ್ಮ ವಾತಾವರಣವನ್ನು ಸಂತೋಷಗೊಳಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.