ಕುಬೇರ ಯೋಗದಿಂದ ಭಾರೀ ಅದೃಷ್ಟ ಪಡೆಯಲಿವೆ ಈ ಮೂರು ರಾಶಿಗಳು.! ನಿಮ್ಮ ರಾಶಿ ಇದರಲ್ಲಿದೆಯೇ ನೋಡಿಕೊಳ್ಳಿ

ಶನಿಯು ಕುಂಭ ರಾಶಿಯ ಅಧಿಪತಿ. ಅದರಲ್ಲಿ ಶುಕ್ರನ ಪ್ರವೇಶವೇ ಒಂದು ದೊಡ್ಡ ಘಟನೆ. ಶುಕ್ರನ ಈ ಬದಲಾವಣೆಯ ಪರಿಣಾಮ ಎಲ್ಲಾ 12 ರಾಶಿಚಕ್ರ ಚಿಹ್ನೆಗಳಲ್ಲಿ ಕಾಣಬಹುದು. 

Last Updated : Apr 2, 2022, 02:37 PM IST
  • ಅನಿರೀಕ್ಷಿತ ಹಣದ ಹರಿವು ಉಂಟಾಗುತ್ತದೆ.
  • ಆರ್ಥಿಕ ಬೆಳವಣಿಗೆಗೆ ಅವಕಾಶವಿರುತ್ತದೆ .
  • ವ್ಯಾಪಾರದಲ್ಲಿ ಆದಾಯ ಹೆಚ್ಚಾಗುವುದು.
ಕುಬೇರ ಯೋಗದಿಂದ ಭಾರೀ ಅದೃಷ್ಟ ಪಡೆಯಲಿವೆ ಈ ಮೂರು ರಾಶಿಗಳು.! ನಿಮ್ಮ ರಾಶಿ  ಇದರಲ್ಲಿದೆಯೇ ನೋಡಿಕೊಳ್ಳಿ  title=
Venus transit (File photo)

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಪ್ರೀತಿ, ಸೌಂದರ್ಯ, ಸಂಪತ್ತು ಮತ್ತು ಸಂತೋಷವನ್ನು ತರುವ ಶುಕ್ರ ಗ್ರಹವು ಮಾರ್ಚ್ 31, 2022 ರಂದು ಗುರುವಾರ ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಿದೆ (Venus transit). ಶನಿಯು ಕುಂಭ ರಾಶಿಯ ಅಧಿಪತಿ. ಅದರಲ್ಲಿ ಶುಕ್ರನ ಪ್ರವೇಶವೇ ಒಂದು ದೊಡ್ಡ ಘಟನೆ. ಶುಕ್ರನ ಈ ಬದಲಾವಣೆಯ ಪರಿಣಾಮ ಎಲ್ಲಾ 12 ರಾಶಿಚಕ್ರ ಚಿಹ್ನೆಗಳಲ್ಲಿ ಕಾಣಬಹುದು (Venus transit effects). ಅತಿಯಾದ ಸಂತೋಷ, ಸಮೃದ್ಧಿ,  ಪ್ರೀತಿಯ ವಾತಾವರಣವು ಈ ಅವಧಿಯಲ್ಲಿ ಲಭ್ಯವಿರುತ್ತದೆ. ಅದರಂತೆ ಈ ಶುಕ್ರನ ಸ್ಥಾನ ಪಲ್ಲಟದಿಂದಾಗಿ ಈ ಮೂರು ರಾಶಿಯವರಿಗೆ ಕುಬೇರ ಯೋಗ ದೊರೆಯಲಿದೆ.

ಮೇಷ (Aries): ಆದಾಯ, ಲಾಭ ಮನೆಯಾಗಿರುವ 11ನೇ ಮನೆಯಲ್ಲಿ ಶುಕ್ರ ಸಂಚಾರವಾಗಿದೆ.   ಆದ್ದರಿಂದ, ನಿಮ್ಮ ಆದಾಯವು ಈ ಸಮಯದಲ್ಲಿ ಉತ್ತಮವಾಗಿರುತ್ತದೆ.  ಇದರೊಂದಿಗೆ, ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಲಿವೆ (Venus Transit effects). ಈ ಸಮಯದಲ್ಲಿ,  ಈ ಸಮಯದಲ್ಲಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಇದಲ್ಲದೆ, ಪಾಲುದಾರಿಕೆಯ ಹೆಚ್ಚಿನ ಲಾಭವನ್ನು ಪಡೆಯಬಹುದು. 

ಇದನ್ನೂ ಓದಿ : Astrology: ಮೋಡಿ ಮಾಡುವ ಈ ಎರಡು ಗ್ರಹಗಳಿಂದ ಹೊಳೆಯುತ್ತದೆ ಮೂರು ರಾಶಿಗಳ ಜನರ ಭಾಗ್ಯ, ನಿಮ್ಮ ರಾಶಿ ಯಾವುದು?

ಮಕರ (Capricorn): ಶುಕ್ರನ ಸಂಕ್ರಮಣ ನಿಮ್ಮ ರಾಶಿಯವರಿಗೆ  ವರದಾನವಾಗಿರಲಿದೆ.  ಸಂಪತ್ತು, ಕುಟುಂಬ ಮತ್ತು ಮಾತಿನ ಸ್ಥಳ ಎಂದು ಕರೆಯಲ್ಪಡುವ ಎರಡನೇ ಮನೆಯಲ್ಲಿ ಶುಕ್ರ ಸಂಕ್ರಮಣವಾಗಿದೆ (Shukra Gochara).  ಆದ್ದರಿಂದ, ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಹಣವನ್ನು ಗಳಿಸಬಹುದು. ಅಲ್ಲದೆ, ಕೈ ಸೇರದೇ ಸಿಕ್ಕಿ ಹಾಕಿಕೊಂಡಿರುವ ಹಣ ಈ ಸಮಯದಲ್ಲಿ ಕೈ ಸೇರಲಿದೆ.ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಹೊಸ ಹೂಡಿಕೆಗಳನ್ನು ಮಾಡಲು ಇದು ಸೂಕ್ತ ಸಮಯ. ಮತ್ತೊಂದೆಡೆ ಶನಿಯು ಮಕರ ರಾಶಿಯ ಅಧಿಪತಿ. ಜ್ಯೋತಿಷ್ಯದ ಪ್ರಕಾರ (Astrology) ಶನಿ ಮತ್ತು ಶುಕ್ರನ ನಡುವೆ ಸ್ನೇಹದ ಭಾವನೆ ಇದೆ. ಆದ್ದರಿಂದ ಈ ಬದಲಾವಣೆಯು ನಿಮಗೆ ಮಂಗಳಕರವಾಗಿರುತ್ತದೆ.

ಕುಂಭ (Aquarius) : ಶುಕ್ರನು (Venus)ನಿಮ್ಮ ರಾಶಿಗೆ ಯೋಗ ಗ್ರಹವಾಗಿರಲಿದ್ದಾನೆ.  ಈ ಬಾರಿ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮೊಂದಿಗೆ ಸ್ನೇಹದಿಂದ ಇರುತ್ತಾರೆ. ರಿಯಲ್ ಎಸ್ಟೇಟ್ ಏಜೆಂಟ್‌ಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಟ್ರಾವೆಲ್ ಏಜೆಂಟ್‌ಗಳು ಮತ್ತು ಆಟೋಮೊಬೈಲ್ ವ್ಯವಹಾರ ಮಾಡುವವರಿಗೆ ಇದು ಉತ್ತಮ ಸಮಯ. ಕುಂಭ ರಾಶಿಯವರ ಅಧಿಪತಿ ಶನಿ (Saturn).  ಶುಕ್ರನ ಈ  ಬದಲಾವಣೆಯು ನಿಮ್ಮ ರಾಶಿಯವರಿಗೆ ಉತ್ತಮವಾಗಿರುತ್ತದೆ.

ಇದನ್ನೂ ಓದಿ : ಏಪ್ರಿಲ್ ನಲ್ಲಿ ರೂಪುಗೊಳ್ಳಲಿದೆ ದುರ್ಲಭ ಯೋಗ !ಶನಿ ಸಮೇತ ನವ ಗ್ರಹಗಳ ರಾಶಿ ಬದಲಾವಣೆ: ಹೇಗಿರಲಿದೆ ಪ್ರಭಾವ ?

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News