Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ

ವಾಸ್ತು ಪ್ರಕಾರ, ಕೆಲವು ಚಿತ್ರಗಳನ್ನು ಇಡುವ ಮೂಲಕ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಕೆಲವು ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. 

Written by - Yashaswini V | Last Updated : May 27, 2021, 01:25 PM IST
  • ಮನೆಯಲ್ಲಿರುವ ಹಲವು ಚಿತ್ರಗಳು ವ್ಯಕ್ತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತವೆ
  • ವಾಸ್ತು ಪ್ರಕಾರ, ಕೆಲವು ಚಿತ್ರಗಳನ್ನು ಇಡುವ ಮೂಲಕ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ
  • ಕೆಲವು ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ
Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ title=
Vastu Tips for Good Luck

Vastu Tips:  ಪ್ರತಿಯೊಬ್ಬರೂ ತಮ್ಮ ಮನೆಯನ್ನು ಅಲಂಕರಿಸಲು ಇಷ್ಟಪಡುತ್ತಾರೆ. ಮನೆಯಲ್ಲಿರುವ ಹಲವು ಚಿತ್ರಗಳು ವ್ಯಕ್ತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳುತ್ತವೆ. ಮತ್ತೊಂದೆಡೆ, ವಾಸ್ತು ಪ್ರಕಾರ, ಕೆಲವು ಚಿತ್ರಗಳನ್ನು ಇಡುವ ಮೂಲಕ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಕೆಲವು ಚಿತ್ರಗಳು ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಛಾಯಾಚಿತ್ರಗಳಿಗೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ಹೇಳಲಿದ್ದೇವೆ. 

ಮಕ್ಕಳನ್ನು ಪಡೆಯಲು ಈ ಚಿತ್ರವನ್ನು ಹಾಕಿ - ಮಕ್ಕಳಿಲ್ಲದವರು (Children) ಸಂತಾನ ಪ್ರಾಪ್ತಿಗಾಗಿ ಮನೆಯಲ್ಲಿ ಕಮಲದ ಹೂವಿನ ಚಿತ್ರವನ್ನು ಹಾಕಬೇಕು. ಇದಲ್ಲದೆ, ಹಸು ಮತ್ತು ಕರು ಜೊತೆಗಿರುವ ಫೋಟೋವನ್ನು ಮಲಗುವ ಕೋಣೆಯಲ್ಲಿ ಇಡಬೇಕು.

ಇದನ್ನೂ ಓದಿ - Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದ ದ್ವಾದಶ ರಾಶಿಗಳ ಫಲಾಫಲ

ಅದೃಷ್ಟಕ್ಕಾಗಿ ಈ ಚಿತ್ರವನ್ನು ಇರಿಸಿ- ಕಷ್ಟಪಟ್ಟು ಕೆಲಸ ಮಾಡಿದರೂ ನೀವು ಬಯಸಿದ ಫಲ ಪಡೆಯದಿದ್ದರೆ, ನೀವು ಹೂಗಳು ಅಥವಾ ನೀರಿನ ಚಿತ್ರವನ್ನು ಮುಖ್ಯ ಗೇಟ್ ಅಥವಾ ಡ್ರಾಯಿಂಗ್ ರೂಂನಲ್ಲಿ ಹಾಕಬೇಕು. ಅದು ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ.

ಆರ್ಥಿಕ ಸಮಸ್ಯೆ ನಿವಾರಣೆಗೆ ಈ ಚಿತ್ರವನ್ನು ಹಾಕಿ- ನೀವು ಆರ್ಥಿಕ ಸಮಸ್ಯೆಯೊಂದಿಗೆ (Financial Problem) ಹೋರಾಡುತ್ತಿದ್ದರೆ, ನೀವು ಮನೆಯ ದೇವಾಲಯದಲ್ಲಿ ಲಕ್ಷ್ಮಿ ದೇವಿಯು ಕುಳಿತುಕೊಳ್ಳುವ ಭಂಗಿಯಲ್ಲಿರುವ ಫೋಟೋವನ್ನು ಹಾಕಬೇಕು. ಇದು ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ - Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ

ಉತ್ತಮ ಆರೋಗ್ಯ ಮತ್ತು ವ್ಯವಹಾರಕ್ಕಾಗಿ - ನಿಮ್ಮ ಮನೆಯಲ್ಲಿ ಯಾರಾದರೂ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂತಹವರು ತಮ್ಮ ಮನೆಯಲ್ಲಿ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಹಾಕಬೇಕು. ಇದು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಈ ಪರಿಸ್ಥಿತಿಯಲ್ಲಿ ಆರೋಗ್ಯವು ಸುಧಾರಿಸುತ್ತದೆ.  ಅಲ್ಲದೆ, ವ್ಯವಹಾರದಲ್ಲಿ ಪ್ರಗತಿ  ಕಾಣಲಿದೆ ಎಂದು ಹೇಳಲಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News