Vastu Tips: ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ!

ವಾಸ್ತುಶಾಸ್ತ್ರದಲ್ಲಿ ಅನೇಕ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸಿದ್ರೆ ವ್ಯಕ್ತಿ ಅದೃಷ್ಟವು ಬೆಳಗಲಿದ್ದು, ಕೋಟ್ಯಾಧಿಪತಿಯಾಗಿ ಐಷಾರಾಮಿ ಜೀವನ ನಡೆಸಬಹುದು. ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ವ್ಯಕ್ತಿಯ ಪ್ರಗತಿಯ ದಾರಿ ತೆರೆಯುತ್ತದೆ.

Written by - Puttaraj K Alur | Last Updated : Nov 28, 2022, 05:10 PM IST
  • ವಾಸ್ತು ತಜ್ಞರ ಪ್ರಕಾರ ಮನೆ ಮುಂದೆ ತುಳಸಿ ಮತ್ತು ಬಾಳೆ ಗಿಡಗಳನ್ನು ನೆಟ್ಟರೆ ಮಂಗಳಕರ
  • ತುಳಸಿ ಗಿಡದಲ್ಲಿ ಲಕ್ಷ್ಮಿದೇವಿ & ಬಾಳೆ ಗಿಡದಲ್ಲಿ ವಿಷ್ಣು ನೆಲೆಸಿದ್ದಾರೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ
  • ಮನೆಯಲ್ಲಿ ಗುಲಾಬಿ, ಚೆಂಡು ಹೂ, ಮಲ್ಲಿಗೆ ಮತ್ತು ಚಂಪಾ ಹೂ ಗಿಡ ನೆಡುವುದು ಮಂಗಳಕರ
Vastu Tips: ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ! title=
ಮನೆಯ ವಾಸ್ತು ಶಾಸ್ತ್ರ

ನವದೆಹಲಿ: ಯಾವುದೇ ಒಬ್ಬ ವ್ಯಕ್ತಿ ಹಣ ಗಳಿಸಲು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾನೆ. ಕಷ್ಟಪಟ್ಟು ದುಡಿದರೆ ನಾವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಪಡೆಯಬಹುದು. ವಾಸ್ತು ಶಾಸ್ತ್ರದಲ್ಲಿ ಇಂತಹ ಕೆಲವು ಸುಲಭವಾದ ಕ್ರಮಗಳನ ಬಗ್ಗೆ ಹೇಳಲಾಗಿದೆ. ಇವುಗಳನ್ನು ಪಾಲಿಸಿದ್ರೆ ಯಾವುದೇ ವ್ಯಕ್ತಿ ಶ್ರೀಮಂತನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ವಾಸ್ತು ಪ್ರಕಾರ ಕೆಲವು ವಿಷಯಗಳನ್ನು ನಾವು ಸರಿಯಾಗಿ ನೋಡಿಕೊಂಡರೆ ಮಾತ್ರ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಇಂತಹ ಕೆಲವು ವಾಸ್ತು ಸಲಹೆಗಳ ಬಗ್ಗೆ ತಿಳಿದುಕೊಳ್ಳಿರಿ.

ವಾಸ್ತುವಿನ ಈ ಕ್ರಮಗಳಿಂದ ಅದೃಷ್ಟ ಹೊಳೆಯುತ್ತದೆ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆ ಸುಂದರವಾಗಿ ಕಾಣಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಮನೆಯನ್ನು ಹಲವು ವಸ್ತುಗಳಿಂದ ಅಲಂಕರಿಸುತ್ತಾರೆ. ಮನೆಯಲ್ಲಿ ಸುಂದರವಾದ ಹೂವುಗಳನ್ನು ನೆಟ್ಟರೆ ಧನಾತ್ಮಕ ಶಕ್ತಿಯು ಸಂಚರಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ನೆಟ್ಟ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ನಾಶಮಾಡುತ್ತವೆ. ಮನೆಯ ಮುಖ್ಯ ಬಾಗಿಲು ಮತ್ತು ಕಿಟಕಿಯ ಬಳಿ ಸುಂದರವಾದ ಮತ್ತು ಪರಿಮಳಯುಕ್ತ ಸಸ್ಯಗಳನ್ನು ನೆಡುವುದರಿಂದ ಧನಾತ್ಮಕ ಶಕ್ತಿಯು ಹರಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Weekly Horoscope 28 Nov- 4 Dec 2022 ; ಹೇಗಿದೆ ಈ ವಾರ ನಿಮ್ಮ ರಾಶಿ ಭವಿಷ್ಯ, ಇಲ್ಲಿದೆ ನೋಡಿ

  • ಈ ಸಸ್ಯಗಳು ವ್ಯಕ್ತಿಯ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ. ಗುಲಾಬಿ, ಚೆಂಡು ಹೂ, ಮಲ್ಲಿಗೆ ಮತ್ತು ಚಂಪಾ ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಹೂವುಗಳನ್ನು ನೆಡುವುದರಿಂದ ವ್ಯಕ್ತಿಯ ಮನಸ್ಸಿಗೆ ಸಂತೋಷವಾಗುತ್ತದೆ ಮತ್ತು ಅದೃಷ್ಟವೂ ಬೆಂಬಲಿಸಲು ಪ್ರಾರಂಭಿಸುತ್ತದೆ.
  • ತುಳಸಿ, ಬಾಳೆ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಅದು ಕೂಡ ಮಂಗಳಕರ ಎನ್ನುತ್ತಾರೆ ವಾಸ್ತು ತಜ್ಞರು. ಹಿಂದೂ ಧರ್ಮದಲ್ಲಿ ಲಕ್ಷ್ಮಿದೇವಿಯು ತುಳಸಿ ಗಿಡದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಬಾಳೆ ಗಿಡದಲ್ಲಿ ವಿಷ್ಣು ದೇವರು ನೆಲೆಸಿದ್ದಾನೆ ಎಂದು ಹೇಳಲಾಗಿದೆ. ಇದಕ್ಕಾಗಿಯೇ ಮನೆಯಲ್ಲಿ ಬಾಳೆ ಗಿಡ ಮತ್ತು ತುಳಸಿ ಗಿಡಗಳನ್ನು ನೆಡುವುದರಿಂದ ಲಕ್ಷ್ಮಿ ಮತ್ತು ವಿಷ್ಣು ದೇವರ ಆಶೀರ್ವಾದವು ಸಿಗುತ್ತದೆ. ಮನೆಯಲ್ಲಿ ಈ ಗಿಡಗಳನ್ನು ನೆಟ್ಟು ಆರೈಕೆ ಮಾಡುವುದರಿಂದ ದೇವರ ಅನುಗ್ರಹ ನಿಮ್ಮ ಮೇಲಿರುತ್ತದೆ ಮತ್ತು ಅದೃಷ್ಟವು ಹೊಳೆಯುತ್ತದೆ.
  • ಸ್ಫಟಿಕ ಚೆಂಡನ್ನು ಸಹ ವಾಸ್ತುದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೃಷ್ಟವನ್ನು ತರಲು ನೈಸರ್ಗಿಕ ಬೆಳಕು ಮತ್ತು ಗಾಳಿಯು ಮಿಶ್ರಣವಾಗುವ ಸ್ಥಳದಲ್ಲಿ ಸ್ಫಟಿಕ ಚೆಂಡನ್ನು ಇರಿಸಬೇಕು. ಹೀಗೆ ಮಾಡುವುದರಿಂದ ಸುತ್ತಮುತ್ತಲಿನ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಈ ಕಾರಣದಿಂದ ಮನೆಯಲ್ಲಿ ಉತ್ತಮ ಮತ್ತು ಸಕಾರಾತ್ಮಕ ವಾತಾವರಣವನ್ನು ನಿರ್ವಹಿಸಲಾಗುತ್ತದೆ. ಇದರಿಂದ ವ್ಯಕ್ತಿಯ ವೃತ್ತಿಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡಲು ಪ್ರೇರೇಪಿಸುತ್ತದೆ.

ಇದನ್ನೂ ಓದಿ: Palmistry: ಕೈಯಲ್ಲಿ ಪರ್ವತ ಯೋಗ ಇದ್ರೆ ಅಪಾರ ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ!

  • ವಾಸ್ತು ಶಾಸ್ತ್ರದಲ್ಲಿ ಮನೆಯ ಈಶಾನ್ಯ ಮೂಲೆಯನ್ನು ಶಿವನ ಸ್ಥಾನವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸ್ಥಳದಲ್ಲಿ ನೀರನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ತಜ್ಞರ ಪ್ರಕಾರ ಈಶಾನ್ಯ ಮೂಲೆಯಲ್ಲಿರುವ ಮನೆಯ ಛಾವಣಿಯ ಮೇಲೆ ಮಣ್ಣಿನ ಪಾತ್ರೆಯಲ್ಲಿ ತುಂಬಿದ ನೀರನ್ನು ಇಡುವುದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಈ ಪಾತ್ರೆಯು ಪಕ್ಷಿಗಳ ನೀರಿಗಾಗಿರಬೇಕು. ನೀವು ಈ ಪರಿಹಾರವನ್ನು ಮಾಡಿದ ದಿನ ನಿಮ್ಮ ಅದೃಷ್ಟವು ಅದೇ ದಿನದಿಂದ ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ಮನೆಯಲ್ಲಿ ಹಣದ ಆಗಮನ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News