ಮನೆ ಸುತ್ತಮುತ್ತ ಹಾವುಗಳು ಬರ್ತಿದ್ಯಾ? ತಲೆಕೆಡಿಸಿಕೊಳ್ಳಬೇಡಿ... ಈ ಗಿಡ ನೆಟ್ಟರೆ ಸಾಕು; ಅದರ ವಾಸನೆಗೆ ಅತ್ತಕಡೆ ತಲೆನೂ ಹಾಕಲ್ಲ

Snake Repel plant: ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು. ಅಂತಹ ಗಿಡಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.

Written by - Bhavishya Shetty | Last Updated : Aug 23, 2024, 03:44 PM IST
    • ಹಾವುಗಳನ್ನು ಓಡಿಸಲು ಕೆಮಿಕಲ್‌ ಸ್ಪ್ರೇಗಳನ್ನು ಬಳಕೆ ಮಾಡುತ್ತೇವೆ.
    • ಆದರೆ ಅವುಗಳು ಹಾವುಗಳಿಗೆ ಹಾನಿಯನ್ನುಂಟು ಮಾಡಬಹುದು.
    • ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು
ಮನೆ ಸುತ್ತಮುತ್ತ ಹಾವುಗಳು ಬರ್ತಿದ್ಯಾ? ತಲೆಕೆಡಿಸಿಕೊಳ್ಳಬೇಡಿ... ಈ ಗಿಡ ನೆಟ್ಟರೆ ಸಾಕು; ಅದರ ವಾಸನೆಗೆ ಅತ್ತಕಡೆ ತಲೆನೂ ಹಾಕಲ್ಲ title=
Snake Repel plant

Snake Repel plant: ಸಾಮಾನ್ಯವಾಗಿ ಹಾವುಗಳನ್ನು ಓಡಿಸಲು ಕೆಮಿಕಲ್‌ ಸ್ಪ್ರೇಗಳನ್ನು ಬಳಕೆ ಮಾಡುತ್ತೇವೆ. ಆದರೆ ಅವುಗಳು ಹಾವುಗಳಿಗೆ ಹಾನಿಯನ್ನುಂಟು ಮಾಡಬಹುದು. ಅಷ್ಟೇ ಅಲ್ಲದೆ, ಜನರಿಗೂ ಅದರಿಂದ ಅಡ್ಡಪರಿಣಾಮಗಳು ಬೀರಬಹುದು. ಹೀಗಿರುವಾಗ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕೆಲವೊಂದು ಗಿಡಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿಯನ್ನು ಪಡೆಯಬಹುದು. ಅಂತಹ ಗಿಡಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ.

ಇದನ್ನೂ ಓದಿ: ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!

ಈರುಳ್ಳಿ ಸಸ್ಯ: ಈರುಳ್ಳಿಯ ಕಟುವಾದ ವಾಸನೆಯು ಹಾವುಗಳನ್ನು ದೂರವಿಡುತ್ತದೆ. ಇದು ನೈಸರ್ಗಿಕ ನಿವಾರಕವಾಗಿ ಕೆಲಸ ಮಾಡುತ್ತದೆ. ಹಾವುಗಳನ್ನು ದೂರವಿಡಲು, ತೋಟದಲ್ಲಿ ಕತ್ತರಿಸಿದ ಈರುಳ್ಳಿಯನ್ನು ಹರಡಿ ಅಥವಾ ಈರುಳ್ಳಿಯನ್ನು ಬೆಳೆಸಿ.

ನ್ಯಾಫ್ತಲೀನ್ ಬಾಲ್ಸ್:‌ ಇದು ಹಳೆಯ ಶೈಲಿಯ ಹಾವು ನಿವಾರಕ ಟಿಪ್ಸ್‌ ಎನ್ನಬಹುದು. ಇದು ನೋಡಲು ಕರ್ಪೂರದಂತೆ ಇರುತ್ತದೆ. ಈ ವಸ್ತುವನ್ನು ಗಾರ್ಡನ್‌ ಬಳಿ ಇಟ್ಟರೆ, ಅಥವಾ ಮನೆಯ ಸುತ್ತಮುತ್ತ ಚೆಲ್ಲಿದರೆ ಹಾವುಗಳು ಅದರ ವಾಸನೆಗೆ ಓಡಿ ಹೋಗುತ್ತವೆ.

ರೋಸ್ಮರಿ: ಈ ಆರೊಮ್ಯಾಟಿಕ್ ಮೂಲಿಕೆ ಭಕ್ಷ್ಯಗಳಿಗೆ ಪರಿಮಳವನ್ನು ಸೇರಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇನ್ನು ಇದರ ಬಲವಾದ ಪರಿಮಳ ಮಾನವರಿಗೆ ಸಂತಸ ತಂದರೆ, ಹಾವುಗಳಿಗೆ ಭಯವನ್ನು ಹುಟ್ಟಿಸುತ್ತದೆ. ಈ ಕಾರಣದಿಂದ ರೋಸ್ಮರಿ ಸಸ್ಯಗಳನ್ನು ಮನೆ ಮುಂದೆ ಬೆಳೆಸಿದರೆ ನೈಸರ್ಗಿಕ ಹಾವು-ನಿವಾರಕವಾಗಿ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿ ಗಿಡ: ಬೆಳ್ಳುಳ್ಳಿಯ ಎಲೆಗಳ ಪರಿಮಳವು ಹಾವುಗಳನ್ನು ಓಡಿಸುವ ಪ್ರಬಲ ಸಾಧನವಾಗಿದೆ. ಮನೆ ಬಳಿ ಬೆಳ್ಳುಳ್ಳಿಯನ್ನು ಬೆಳೆಸಿದರೆ ಯಾವತ್ತೂ ಹಾವುಗಳು ಬರಲ್ಲ.

ತುಳಸಿ: ಹಿಂದೂ ಸಂಸ್ಕೃತಿಗಳಲ್ಲಿ ತುಳಸಿ ಎಂಬುದು ಪವಿತ್ರ. ಇನ್ನು ಹಾವುಗಳಿಗೆ ತುಳಸಿಯ ವಾಸನೆಯು ಅಹಿತಕರವೆನಿಸುತ್ತದೆ. ಹಾವುಗಳನ್ನು ಓಡಿಸಲು ಇದು ಬಲು ಸಹಾಯಕಾರಿ ಉಪಾಯ. ಮನೆ ಸುತ್ತ ಬೆಳೆಸಿದರೆ ಉತ್ತಮ.

ಇದನ್ನೂ ಓದಿ: ರಾತ್ರಿಯಾದ್ರೆ ಬೆತ್ತಲೆಯಾಗಿ ಓಡಾಡ್ತಾಳೆ... ಕಂಡಕಂಡ ಮನೆಬಾಗಿಲು ತಟ್ಟುತ್ತಾಳೆ; ವಿಡಿಯೋ ನೋಡಿ

ಸೂಚನೆ:  ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News