Todays Horoscope 29 January 2023: ಮೇಷ ರಾಶಿಯವರಿಗೆ ಚಂದ್ರ ಬಲ, ಇತರ ರಾಶಿಗಳ ಜನರ ಪಾಲಿಗೆ ಹೇಗಿದೆ ದಿನ?

Todays Horoscope: ಇಂದು ಚಂದ್ರ ಮೇಷ ರಾಶಿಯಲ್ಲಿ ಅತ್ಯಂತ ಮಂಗಳಕರ ಮತ್ತು ಶುಭ ಸ್ಥಿತಿಯಲ್ಲಿದ್ದಾನೆ. ಕರ್ಕ ಮತ್ತು ಮಕರ ರಾಶಿಯ ಜನರು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಕುಂಭ ರಾಶಿಯಲ್ಲಿ ಶನಿಯ ಸಂಕ್ರಮಣದಿಂದಾಗಿ, ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಇಂದು ವಿದ್ಯಾರ್ಥಿಗಳ ಪಾಲಿಗೆ ತುಂಬಾ ಒಳ್ಳೆಯ ದಿನವಾಗಿದೆ.  

Written by - Nitin Tabib | Last Updated : Jan 29, 2023, 06:53 AM IST
  • ಇಂದು, ಮೇಷ ರಾಶಿಯಲ್ಲಿ ಚಂದ್ರ ಅತ್ಯಂತ ಶುಭ ಸ್ಥಾನದಲ್ಲಿದ್ದಾನೆ.
  • ಕರ್ಕ ರಾಶಿ ಮತ್ತು ಮಕರ ರಾಶಿಯ ಜನರು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
  • ಮೇಷ ಮತ್ತು ಮೀನ ರಾಶಿಯ ತಾಂತ್ರಿಕ ಮತ್ತು ನಿರ್ವಹಣಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ.
Todays Horoscope 29 January 2023: ಮೇಷ ರಾಶಿಯವರಿಗೆ ಚಂದ್ರ ಬಲ, ಇತರ ರಾಶಿಗಳ ಜನರ ಪಾಲಿಗೆ ಹೇಗಿದೆ ದಿನ? title=
ಇಂದಿನ ರಾಶಿ ಭವಿಷ್ಯ

Todays Astrology: ಇಂದು ಅಶ್ವನಿ ನಕ್ಷತ್ರ. ಚಂದ್ರ ಮೇಷ ರಾಶಿಯಲ್ಲಿದ್ದಾನೆ. ಸೂರ್ಯ ಮಕರ ರಾಶಿಯಲ್ಲಿದ್ದು, ಶನಿಯು ಕುಂಭ ರಾಶಿಯಲ್ಲಿದ್ದಾನೆ. ದೇವಗುರು ಬೃಹಸ್ಪತಿ ಮೀನ ರಾಶಿಯಲ್ಲಿ ವಿರಾಜಮಾನರಾಗಿದ್ದಾರೆ. ಉಳಿದ ಗ್ರಹಗಳ ಸ್ಥಾನಗಳು ಒಂದೇ ಆಗಿರುತ್ತವೆ. ಇಂದು, ಮೇಷ ರಾಶಿಯಲ್ಲಿ ಚಂದ್ರ ಅತ್ಯಂತ ಶುಭ ಸ್ಥಾನದಲ್ಲಿದ್ದಾನೆ. ಕರ್ಕ ರಾಶಿ ಮತ್ತು ಮಕರ ರಾಶಿಯ ಜನರು ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮೇಷ ಮತ್ತು ಮೀನ ರಾಶಿಯ ತಾಂತ್ರಿಕ ಮತ್ತು ನಿರ್ವಹಣಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ವೃಷಭ ರಾಶಿಯವರು ವಾಹನ ಚಲಿಸುವಾಗ  ನಿರ್ಲಕ್ಷ್ಯ ವಹಿಸದಿದ್ದರೆ ದಿನ ಉತ್ತಮವಾಗಿದೆ. ವಿವಿಧ ರಾಶಿಗಳ ಇಂದಿನ ಜಾತಕ ಇಂತಿದೆ,

1. ಮೇಷ ರಾಶಿ - ಚಂದ್ರ ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಲಾಭ ನೀಡುತ್ತಾನೆ. ಇಂದು ನಿಮ್ಮ ಮನಸ್ಸು ಆಧ್ಯಾತ್ಮಿಕದತ್ತ ವಾಲುತ್ತದೆ. ಕೆಲಸ ಕಾರ್ಯಗಳು ಆಹ್ಲಾದಕರವಾಗಿರುತ್ತದೆ. ರಾಜಕಾರಣಿಗಳಿಗೆ ಲಾಭವಾಗಲಿದೆ. ಹಳದಿ ಮತ್ತು ಕೆಂಪು ಬಣ್ಣಗಳು ಶುಭ. ಶುಕ್ರ ಸಂಚಾರ ವಾಹನ ಖರೀದಿಗೆ ಶುಭ. ತಂದೆಯ ಆಶೀರ್ವಾದ ಪಡೆಯಿರಿ.

2. ವೃಷಭ ರಾಶಿ - ಚಂದ್ರ ಮತ್ತು ಗುರುವಿನ ದೆಸೆಯಿಂದ ದಿನವು ಇಂದು ಶುಭಕರವಾಗಿರುತ್ತದೆ. ಗುರು ಮೀನರಾಶಿಗೆ ಪ್ರವೇಶಿಸಿದೆ. ಮನಸ್ಸು ವ್ಯಾಪಾರದಲ್ಲಿ ನಿರತವಾಗಿರಬಹುದು. ಈ ರಾಶಿಯ ನವಮ ಭಾವದಲ್ಲಿರುವ ಶುಕ್ರ ಶುಭಕರವಾಗಿದ್ದು, ಧನ ಪ್ರಪ್ತಿಯಾಗಲಿದೆ ಇಂದು ನಿಮ್ಮ ಮಾತು ನಿಮಗೆ ಲಾಭವನ್ನು ನೀಡುತ್ತದೆ. ನೀಲಿ ಮತ್ತು ಹಸಿರು ಬಣ್ಣವು ಮಂಗಳಕರವಾಗಿದೆ. ಹಸುವಿಗೆ ಬಾಳೆಹಣ್ಣು ತಿನ್ನಿಸಿ.

3. ಮಿಥುನ ರಾಶಿ- ಶುಕ್ರ ನಿಮಗೆ  ಆರ್ಥಿಕ ಮತ್ತು ಆರೋಗ್ಯ ಲಾಭವನ್ನು ನೀಡಬಹುದು. ಕುಂಭ ರಾಶಿಯಲ್ಲಿ ಶನಿಯ ಸಂಚಾರದಿಂದಾಗಿ ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಬಿಳಿ ಮತ್ತು ನೀಲಿ ಬಣ್ಣಗಳು ಶುಭ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಳ್ಳನ್ನು ದಾನ ಮಾಡಿ.

4. ಕರ್ಕ ರಾಶಿ- ಇಂದಿನ ದಿನ, ಈ ರಾಶಿಯ ದಶಮ ಭಾವದಲ್ಲಿ ಚಂದ್ರನಿದ್ದಾನೆ. ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನವಾಗಿದೆ. ದಿನ ಉತ್ಸಾಹದಿಂದ ಕೂಡಿರಲಿದೆ ಮತ್ತು ವ್ಯಾಪಾರ, ವ್ಯವಹಾರದಲ್ಲಿ ಸ್ಥಿತಿ ಸಕಾರಾತ್ಮಕವಾಗಿರಲಿದೆ .ಕೆಂಪು ಮತ್ತು ಕಿತ್ತಳೆ ಬಣ್ಣಗಳು ಮಂಗಳಕರವಾಗಿವೆ. ಹನುಮನನ್ನು ಆರಾಧಿಸಿ. ಕುಂಠಿತಗೊಂಡ ಯಾವುದೇ ಕೆಲಸವು ಪೂರ್ಣಗೊಳ್ಳುತ್ತದೆ. ಅನ್ನದಾನ ಮಾಡಿ. ತಂದೆಯ ಆಶೀರ್ವಾದ ಪಡೆಯಿರಿ.

5. ಸಿಂಹ ರಾಶಿ - ಸೂರ್ಯನ ಸ್ಥಿತಿ ನಿಮಗೆ ಮನೆಯ ಆರೋಗ್ಯ ಮತ್ತು ಸಂತೋಷದಲ್ಲಿ ಯಶಸ್ಸನ್ನು ನೀಡುತ್ತಾನೆ. ಆರ್ಥಿಕ ಸುಖ ವೃದ್ಧಿಯಾಗಲಿದೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಹಳದಿ ಕಿತ್ತಳೆ ಬಣ್ಣ ಶುಭಕರವಾಗಿದೆ. ಶ್ರೀ ಆದಿತ್ಯ ಹೃದಯಸ್ತೋತ್ರವನ್ನು 03 ಬಾರಿ ಪಠಿಸಿ ಬೆಲ್ಲ ಮತ್ತು ಗೋಧಿಯನ್ನು ದಾನ ಮಾಡಿ.

6. ಕನ್ಯಾರಾಶಿ- ಎಂಟನೇ ಭಾವದಲ್ಲಿನ ಚಂದ್ರ ಮತ್ತು ಏಳನೇ ಭಾವದಲ್ಲಿನ ಗುರು  ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸ್ಥಾನದಲ್ಲಿದ್ದಾರೆ. ವ್ಯವಹಾರದಲ್ಲಿನ ಪ್ರಗತಿ ಸಂತೋಷವನ್ನು ನೀಡಲಿದೆ. ನಿಮಗೆ ಬರಬೇಕಾದ ಹಣ ಕೈಸೇರಲಿದೆ.ತಂದೆಯ ಆಶೀರ್ವಾದ ಪಡೆಯಿರಿ. ಆರ್ಥಿಕ ಲಾಭ ಸಾಧ್ಯ. ಶಿವನನ್ನು ಪೂಜಿಸಿ. ಕಿತ್ತಳೆ,ಹಸಿರು ಬಣ್ಣಗಳು ಮಂಗಳಕರ. ಏಳು ಬಗೆಯ ಅನ್ನದಾನ ಮಾಡಿ.

7.ತುಲಾ ರಾಶಿ - ವ್ಯಾಪಾರದಲ್ಲಿನ ಪ್ರಗತಿ ಸಂತೋಷ ನೀಡಲಿದೆ.ಉದ್ಯೋಗದಲ್ಲಿ ಕಾರ್ಯಕ್ಷಮತೆಯಿಂದ ತೃಪ್ತರಾಗುವಿರಿ. ಆರೋಗ್ಯ ಸಂತೋಷಕ್ಕಾಗಿ ಹನುಮಾನ್ ಚಾಲಿಸಾ ಪಠಿಸಿ. ಇಂದು ಕರ್ಕ ರಾಶಿಯ ಸ್ನೇಹಿತರ ಸಹಕಾರ ನಿಮ್ಮನ್ನು ಆಶಾವಾದಿಯನ್ನಾಗಿ ಮಾಡುತ್ತದೆ. ಕೆಂಪು ಮತ್ತು ಹಳದಿ ಬಣ್ಣಗಳು ಶುಭ.

8.ವೃಶ್ಚಿಕ ರಾಶಿ - ಚಂದ್ರ ಈ ರಾಶಿಯ ಅಂತಿಮ ಮತ್ತು ಶನಿ ಚತುರ್ಥ ಭಾವದಲ್ಲಿ ಸಂಚರಿಸುತ್ತಿದ್ದಾರೆ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಕೆಂಪು ಮತ್ತು ಆಕಾಶ ಬಣ್ಣಗಳು ಶುಭ. ಕಂಬಳಿಗಳನ್ನು ದಾನ ಮಾಡಿ. ವಾಹನವನ್ನು ಖರೀದಿಸುವ ಲಕ್ಷಣಗಳಿವೆ. ವಿಷ್ಣುವನ್ನು ಆರಾಧಿಸಿ. ತುಳಸಿಯ ಸಸಿಯನ್ನು ನೆಡಿ.

9.ಧನು ರಾಶಿ- ಇಂದು ಚಂದ್ರನು ಈ ರಾಶಿಯಿಂದ ಪಂಚಮ ಭಾವದಲ್ಲಿದ್ದು, ಸೂರ್ಯನ ಕುಂಭ ಸಂಕ್ರಮಣ ಈ ರಾಶಿಯಲ್ಲಿದೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಶುಭ ವಾರ್ತೆ ಸಿಗಲಿದೆ. ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಎದುರಾಗಲಿವೆ ಹಳದಿ ಕಿತ್ತಳೆ ಬಣ್ಣಗಳು ಶುಭ.ಉದ್ಯೋಗದಲ್ಲಿ ಸಂತಸದ ವಾತಾವರಣ. ಬೇಳೆ ಕಾಳು ದಾನ ಮಾಡಿ.

10.ಮಕರ ರಾಶಿ- ಈ ರಾಶಿಯಲ್ಲಿ ಚಂದ್ರ ಚತುರ್ಥ ಭಾವದಲ್ಲಿದ್ದು,  ವ್ಯಾಪಾರ ವ್ಯವಹಾರದಲ್ಲಿ ಲಾಭವನ್ನು ನೀಡಲಿದ್ದಾನೆ. ತಂದೆಯ ಆಶೀರ್ವಾದದಿಂದ ಲಾಭವನ್ನು ಪಡೆಯುವಿರಿ. ಹಸಿರು ಮತ್ತು ನೇರಳೆ ಬಣ್ಣವು ಮಂಗಳಕರವಾಗಿದೆ. ನೀವು ಧಾರ್ಮಿಕ ಪ್ರಯಾಣಕ್ಕೆ ಹೋಗಬಹುದು. ಉಣ್ಣೆಯ ಬಟ್ಟೆಗಳನ್ನು ದಾನ ಮಾಡಿ. ಹನುಮಂತನನ್ನು ಆರಾಧಿಸಿ.

11. ಕುಂಭ ರಾಶಿ - ರಾಜಕಾರಣಿಗಳು ಯಶಸ್ವಿಯಾಗುತ್ತಾರೆ. ಉದ್ಯೋಗದಲ್ಲಿ ಯಶಸ್ಸು ಮತ್ತು ಕೆಲಸದಲ್ಲಿನ ಅಡೆತಡೆಗಳಿಂದ ಮುಕ್ತಿ ಸಿಗಲಿದೆ, ಸಪ್ತಶ್ಲೋಕಿ ದುರ್ಗಾ 09 ಬಾರಿ ಪಠಿಸಿ. ನೇರಳೆ ಮತ್ತು ಹಸಿರು ಬಣ್ಣ ಶುಭ. ಪಾಲಕ್ ಸೊಪ್ಪನ್ನು ಹಸುವಿಗೆ ತಿನ್ನಿಸಿ. ಉದ್ಯೋಗ ಬದಲಾವಣೆಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗಬಹುದು. ಹೆಸರು ಬೇಳೆಯನ್ನು ದಾನ ಮಾಡಿ.

ಇದನ್ನೂ ಓದಿ-ಶನಿಯ ರಾಶಿಯಲ್ಲಿ ತ್ರಿಗ್ರಹಿ ಯೋಗ, ಈ ರಾಶಿಗಳ ಜನರ ಖಾತೆಯಲ್ಲಿ ಅಪಾರ ಧನವೃಷ್ಟಿ!

12.ಮೀನ ರಾಶಿ - ಚಂದ್ರನು ನಿಮ್ಮ ದ್ವಿತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ  ಈ ರಾಶಿಯಿಂದ 12 ನೇ ಭಾವದಲ್ಲಿ ಶನಿ ಇದ್ದು,  ಗುರು ಸಂಪತ್ತನ್ನು ದಯಪಾಲಿಸಲಿದ್ದಾನೆ. ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಯಶಸ್ಸಿನ ಲಕ್ಷಣಗಳಿವೆ, ಅವರು ತಮ್ಮ ಕಾರ್ಯಕ್ಷಮತೆಯಿಂದ ತ್ರುಪ್ತರಾಗಲಿದ್ದಾರೆ. ಹಳದಿ ಮತ್ತು ಕಿತ್ತಳೆ ಬಣ್ಣಗಳು ಮಂಗಳಕರ. ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಿ.

ಇದನ್ನೂ ಓದಿ-Mercury Transit 2023: 8 ರಾಶಿಗಳ ಜನರ ಆದಾಯದಲ್ಲಿ ಭಾರಿ ವೃದ್ಧಿ, ಹೊಸ ಉದ್ಯೋಗಾವಕಾಶದ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News