Solar Eclipse 2023: ಈ ರಾಶಿಗಳ ಜನರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ವಿಶೇಷ ಪ್ರಭಾವ, ಉನ್ನತಿ-ಧನಪ್ರಾಪ್ತಿಯ ಯೋಗ!

Solar Eclipse 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಏಪ್ರಿಲ್ 20, 2023 ರಂದು ಈ ವರ್ಷದ ಸೂರ್ಯ ಮೊದಲ ಗ್ರಹಣ ಸಂಭವಿಸಲಿದೆ. ಆದರೆ, ಈ ಬಾರಿಯ ಸೂರ್ಯ ಗ್ರಹಣದ ಕಾರಣ 3 ರಾಶಿಯ ಜಾತಕದವರಿಗೆ ಸಾಕಷ್ಟು ಧನಲಾಭ ಹಾಗೂ ಉನ್ನತಿಯ ಯೋಗಗಳು ಗೋಚರಿಸುತ್ತಿವೆ.  

Written by - Nitin Tabib | Last Updated : Feb 7, 2023, 06:12 PM IST
  • ಆದರೆ ಈ ಗ್ರಹಣದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಮೇಲೆ ಖಂಡಿತವಾಗಿಯೂ ಗೋಚರಿಸಲಿದೆ.
  • ಈ ಗ್ರಹಣದ ಸಮಯದಲ್ಲಿ ಮೂರು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಮತ್ತು
  • ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Solar Eclipse 2023: ಈ ರಾಶಿಗಳ ಜನರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ವಿಶೇಷ ಪ್ರಭಾವ, ಉನ್ನತಿ-ಧನಪ್ರಾಪ್ತಿಯ ಯೋಗ! title=
ವರ್ಷ 2023ರ ಮೊದಲ ಸೂರ್ಯ ಗ್ರಹಣ

Surya Grahan 2023 Date And Time: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಕಾಲಕ್ಕೆ ಸಂಭವಿಸುವ ಸೂರ್ಯ ಹಾಗೂ ಚಂದ್ರ ಗ್ರಹಣಗಳು ಮಾನವ ಜೀವನ ಮತ್ತು ಭೂಮಿಯ ಮೇಲೆ ಅಪಾರ ಪ್ರಭಾವ ಬೀರುತ್ತವೆ.  ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20, 2023 ರಂದು ಸಂಭವಿಸಲಿದೆ. ಈ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 07:03 ರಿಂದ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 12:28 ರವರೆಗೆ ಇರಲಿದೆ. ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಸೇರಿದಂತೆ ಹಲವು ದೇಶಗಳಲ್ಲಿ ಈ ಗ್ರಹಣ ಗೋಚರಿಸಲಿದೆ. ಇನ್ನೊಂದೆಡೆ, ಈ ಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಹೀಗಾಗಿ ಗ್ರಹಣದ ಸೂತಕ ಭಾರತದಲ್ಲಿ ಮಾನ್ಯವಾಗುವುದಿಲ್ಲ. ಆದರೆ ಈ ಗ್ರಹಣದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಮೇಲೆ ಖಂಡಿತವಾಗಿಯೂ ಗೋಚರಿಸಲಿದೆ. ಈ ಗ್ರಹಣದ ಸಮಯದಲ್ಲಿ ಮೂರು ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಮತ್ತು ಪ್ರಗತಿಯ ಸಾಧ್ಯತೆಗಳು ಕಂಡುಬರುತ್ತಿವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ವೃಷಭ ರಾಶಿ
ವರ್ಷ 2023 ರ ಸೂರ್ಯಗ್ರಹಣವು ನಿಮಗೆ ನಿಮಗೆ ಸಾಕಷ್ಟು ಪ್ರಯೋಜನಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ, ಉದ್ಯೋಗಿಗಳ ಇನ್ಕ್ರಿಮೆಂಟ್ ಮತ್ತು ಬಡ್ತಿ ಸಾಧ್ಯತೆಗಳಿವೆ. ಬಾಸ್ ಜೊತೆಗಿನ ನಿಮ್ಮ ಸಂಬಂಧ ಆಹ್ಲಾದಕರವಾಗಿರಲಿದೆ. ಅಲ್ಲದೆ, ಹಣಕಾಸಿನ ವಿಷಯಗಳಲ್ಲಿ ಈ ಬ್ರಹಣ ನಿಮಗೆ ತುಂಬಾ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಬಲವಾಗಿರುತ್ತದೆ. ಇದರ ಜೊತೆಗೆ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಅಲ್ಲದೆ, ಈ ಸಮಯದಲ್ಲಿ ನೀವು ಎಲ್ಲಾ ದೈಹಿಕ ಸಂತೋಷಗಳನ್ನು ಪಡೆಯಬಹುದು.

ಇದನ್ನೂ ಓದಿ-Valentine's Day 2023: ಸಂಗಾತಿ ಜೊತೆಗಿನ ಸಂಬಂಧ ಸುಮಧುರತೆಗೆ ಇಲ್ಲಿವೆ 8 ಉಪಾಯಗಳು, ಶೀಘ್ರವೇ ಪ್ರೇಮ ವಿವಾಹ ಯೋಗ ಪ್ರಾಪ್ತಿ!

ಮಿಥುನ ರಾಶಿ
ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸನ್ನು ಪಡೆಯಬಹುದು. ಇದರೊಂದಿಗೆ ರಾಜಕೀಯಕ್ಕೆ ಸಂಬಂಧಿಸಿದವರಿಗೆ ಒಂದಷ್ಟು ಸ್ಥಾನಮಾನ ಪ್ರಾಪ್ತಿಯಾಗಲಿದೆ. ಅಲ್ಲಿ ನೀವು ಸಾಮಾಜಿಕವಾಗಿ ಹೆಚ್ಚು ಸಕ್ರಿಯರಾಗಿರುವಿರಿ.  ಈ ಸಮಯದಲ್ಲಿ ನೀವು ಕೆಲ ಹೊಸ ಜನರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಅಲ್ಲದೆ, ಈ ಅವಧಿಯಲ್ಲಿ ನೀವು ಸಾಲದ ಹಣವನ್ನು ಮರಳಿ ಪಡೆಯಬಹುದು. ಅಲ್ಲದೆ, ಸಂತಾನ ಸುಖ ಪ್ರಾಪ್ತಿ ಮಾಡಿಕೊಳ್ಳಲು ಬಯಸುವವರಿಗೆ ಸಂತಾನ ಪ್ರಾಪ್ತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಇದನ್ನೂ ಓದಿ-ಹಂಸ-ಮಾಲವ್ಯ ರಾಜಯೋಗಗಳ ನಿರ್ಮಾಣದಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭ-ಬಡ್ತಿ ಭಾಗ್ಯ!

ಧನು ರಾಶಿ
ಸೂರ್ಯ ಗ್ರಹಣವು ಧನು ರಾಶಿಯ ಜನರಿಗೆ ತುಂಬಾ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸದಲ್ಲಿನ ಹೆಚ್ಚಳವನ್ನು ನೀವು ಗಮನಿಸಬಹುದು. ಇದಲ್ಲದೆ ಉದ್ಯೋಗಿಗಳಿಗೆ ಹೆಚ್ಚಿನ ಅಧಿಕಾರ ಪ್ರಾಪ್ತಿಯಾಗಲಿದೆ. ವ್ಯಾಪಾರಸ್ಥರು, ತಮ್ಮ ಹೊಸ ಆರ್ಡರ್‌ಗಳಿಂದ ಉತ್ತಮ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದರೊಂದಿಗೆ, ಮಗುವಿನ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ವೈವಾಹಿಕ ಜೀವನವನ್ನು ಸುಖಮಯವಾಗಿ ಕಳೆಯುವಿರಿ. ಈಗಾಗಲೇ ನಿಮಗೆ ಶನಿಯ ಸಾಡೇಸಾತಿಯಿಂದ ಮುಕ್ತಿ ಕೂಡ ಲಭಿಸಿದೆ. ಹೀಗಾಗಿ ನೀವು ನಿಮ್ಮ ಕೆಲಸಗಳಲ್ಲಿ ಭಾರಿ ಯಶಸ್ಸನ್ನು ಪಡೆಯುತ್ತೀರಿ.

ಇದನ್ನೂ ಓದಿ-ಕೇತು-ಚಂದಿರನ ಮೈತ್ರಿಯಿಂದ 'ಅಶುಭ ಗ್ರಹಣ ಯೋಗ' ಈ ಜನರು ಭಾರಿ ಎಚ್ಚರಿಕೆಯಿಂದಿರಬೇಕು.. ಇಲ್ದಿದ್ರೆ...!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News