ಪ್ರತಿಯೊಬ್ಬರಿಗೂ ಕೂಡ ಜೀವನ ಸಂಗಾತಿ ಬಹಳ ಮುಖ್ಯ. ಎಲ್ಲರೂ ಕೂಡ ತಮಗೂ ಸಹ ಒಳ್ಳೆಯ ಜೀವನ ಸಂಗಾತಿ ಸಿಗಬೇಕು ಎಂದು ಬಯಸುತ್ತಾರೆ. ಹುಡುಗರು ತಮ್ಮ ನೆಚ್ಚಿನ ಹುಡುಗಿಯನ್ನು ತಮ್ಮತ್ತ ಆಕರ್ಷಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಸಹ ಮಾಡುತ್ತಾರೆ. ಕೆಲವು ಅಧ್ಯಯನಗಳ ಪ್ರಕಾರ, ಪುರುಷರ ಕೆಲವು ಗುಣಗಳು ಮಹಿಳೆಯರನ್ನು ತುಂಬಾ ಬೇಗ ಅವರತ್ತ ಆಕರ್ಷಿಸುತ್ತಂತೆ. ಪುರುಷರ ಅಂತಹ ಗುಣಗಳು ಯಾವುವು ಎಂದು ನೋಡುವುದಾದರೆ...
ಕೇರಿಂಗ್ ಸ್ವಭಾವ:
ಹುಡುಗಿಯರು ಕಾಳಜಿ ವಹಿಸುವ ಹುಡುಗರನ್ನು ಇಷ್ಟಪಡುತ್ತಾರೆ. ಕೇರಿಂಗ್ ಸ್ವಭಾವವನ್ನು ಹೊಂದಿರುವ ಹುಡುಗರಿಗೆ ಹುಡುಗಿಯರು ತುಂಬಾ ಬೇಗ ಮನಸೋಲುತ್ತಾರೆ. ಹುಡುಗರ ಕಾಳಜಿಯುಳ್ಳ ಸ್ವಭಾವವು ಹುಡುಗಿಯರನ್ನು ಅವರ ಕಡೆಗೆ ಆಕರ್ಷಿಸುತ್ತದೆ.
ಉತ್ತಮ ವ್ಯಕ್ತಿತ್ವ:
ಅದು ಪುರುಷರಾಗಲಿ, ಇಲ್ಲ ಸ್ತ್ರೀಯರೇ ಆಗಲಿ ತಮ್ಮ ಸಂಗಾತಿ ಸುಂದರವಾಗಿ ಕಾಣಬೇಕು ಎಂದುಕೊಳ್ಳುವುದು ಸಹಜವೇ. ಆದರೆ, ಮಹಿಳೆಯರು ಸೌಂದರ್ಯಕ್ಕಿಂತ ವ್ಯಕ್ತಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಪುರುಷರ ಉತ್ತಮ ವ್ಯಕ್ತಿತ್ವವು ಹುಡುಗಿಯರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ- ನವ ದಂಪತಿಗಳಿಗೆ ತಮಿಳುನಾಡಿನಲ್ಲಿರುವ ಟಾಪ್ 5 ಅತ್ಯುತ್ತಮ ಹನಿಮೂನ್ ತಾಣಗಳಿವು
ರೊಮ್ಯಾಂಟಿಕ್ :
ಹುಡುಗರ ರೊಮ್ಯಾಂಟಿಕ್ ಸ್ವಭಾವವೂ ಕೂಡ ಮಹಿಳೆಯರನ್ನು ಆಕರ್ಷಿಸುತ್ತದೆ. ತನ್ನನ್ನು ಮಾತ್ರ ಪ್ರೀತಿಸುವ, ವಿಶೇಷ ದಿನಗಳಲ್ಲಿ ತನಗಾಗಿ ವಿಶೇಷವಾದದ್ದನ್ನು ಮಾಡುವ, ಸಣ್ಣ-ಪುಟ್ಟದಾದರೂ ಪರವಾಗಿಲ್ಲ ಆದರೆ, ತನಗೋಸ್ಕರ ಆಗಾಗ್ಗೆ ಉಡುಗೊರೆಗಳನ್ನು ನೀಡುವ ಹುಡುಗರನ್ನು ಇಷ್ಟಪಡದ ಹುಡುಗಿಯೇ ಇರುವುದಿಲ್ಲ.
ಸೂಕ್ಷ್ಮ ಸ್ವಭಾವದ ಪುರುಷರು:
ಪ್ರತಿ ಮಹಿಳೆಯು ತನ್ನ ಸಂಗಾತಿ ಹೆಣ್ಣನ್ನು ಗೌರವಿಸುವ ಸ್ವಭಾವದವನಾಗಿರಬೇಕು ಎಂದು ಬಯಸುತ್ತಾಳೆ. ತನ್ನ ಮನಸ್ಸನ್ನು, ಭಾವನೆಗಳನ್ನೂ ಅರ್ಥಮಾಡಿಕೊಳ್ಳಬೇಕು ಎಂದು ಭಾವಿಸುತ್ತಾಳೆ. ಇಂತಹ ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ವ್ಯಕ್ತಿಗೆ ಎಂತಹವರೇ ಆದರೂ ಬಹಳ ಬೇಗ ಮನಸೋಲುತ್ತಾರೆ.
ಇದನ್ನೂ ಓದಿ- ಪ್ರಕೃತಿ ಸೌಂದರ್ಯವನ್ನು ಸವಿಯಲು ದಕ್ಷಿಣ ಭಾರತದ ಸುಂದರ ಗಿರಿಧಾಮಗಳಿಗೆ ಬೇಟಿ ನೀಡಿ..!
ತನ್ನ ಕಾಲ ಮೇಲೆ ನಿಲ್ಲುವ ಛಲ ಹೊಂದಿರುವ ಹುಡುಗರು:
ಮಹಿಳೆಯರು ಕಷ್ಟಪಟ್ಟು ದುಡಿಯುವ ಮತ್ತು ತಮ್ಮ ಕೆಲಸದ ಬಗ್ಗೆ ಗಂಭೀರವಾಗಿರುವ ಹುಡುಗರನ್ನು ಇಷ್ಟಪಡುತ್ತಾರೆ. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ಹುಡುಗಿಯೂ ತನ್ನ ಪತಿ ತನ್ನ ಕಾಲ ಮೇಲೆ ನಿಲ್ಲಬೇಕೆಂದು ಬಯಸುತ್ತಾಳೆ, ಅವನು ಯಾರ ಮುಂದೆಯೂ ಕೈ ಚಾಚಬಾರದು ಎಂದು ಆಶಿಸುತ್ತಾರೆ. ತನ್ನ ಹಿರಿಯರು ತನಗಾಗಿ ಏನು ಮಾಡಿದ್ದಾರೆ ಎಂಬುದನ್ನೂ ಲೆಕ್ಕಿಸದೆ ಜೀವನದಲ್ಲಿ ತಾನು ಏನಾದರೂ ಸಾಧಿಸಬೇಕು ಎಂದು ಛಲ ಇರುವ ಪುರುಷರಿಗೆ ಮಹಿಳೆಯರು ತುಂಬಾ ಬೇಗ ಫಿದಾ ಆಗ್ತಾರೆ.
ಕೇಳುಗ ಸ್ವಭಾವದ ವ್ಯಕ್ತಿ:
ವಿಷಯ ಸಣ್ಣದಿರಲಿ ಅಥವಾ ದೊಡ್ಡದಿರಲಿ ತನ್ನ ಜೀವನ ಸಂಗಾತಿಯು ತನ್ನ ಮಾತಿಗೆ ಕಿವಿಗೊಡಬೇಕು ಎಂದು ಪ್ರತಿ ಹೆಣ್ಣು ಸಹ ಬಯಸುತ್ತಾಳೆ. ಆಕೆಯ ಕಷ್ಟ ಸುಖದಲ್ಲಿ ಜೊತೆಯಾಗಿ ನಿಲ್ಲುವ, ಆಕೆಯ ಮಾತನ್ನು ಆಲಿಸುವ ವ್ಯಕ್ತಿ ಹೆಣ್ಣಿಗೆ ಸದಾ ಪ್ರಿಯ ವ್ಯಕ್ತಿಯಾಗಿರುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.