Ekadashi Fasting: ಏಕಾದಶಿ ಉಪವಾಸಕ್ಕೆ ಇದು ಅತ್ಯುತ್ತಮ ದಿನ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಭಗವಾನ್ ವಿಷ್ಣುವಿಗೆ ಸಮರ್ಪಿತವಾದ ಏಕಾದಶಿ ಉಪವಾಸವನ್ನು ಪ್ರತಿ ತಿಂಗಳು ಎರಡೂ ಕಡೆಯ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಪ್ರತಿ ಏಕಾದಶಿಗೂ ತನ್ನದೇ ಆದ ಮಹತ್ವವಿದೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ.

Written by - Puttaraj K Alur | Last Updated : Nov 16, 2022, 05:46 PM IST
  • ಪುರಾಣಗಳ ಪ್ರಕಾರ ಏಕಾದಶಿ ಒಂದು ದೇವಿಯಾಗಿದ್ದು, ಈಕೆ ಭಗವಾನ್‌ ವಿಷ್ಣುವಿನಿಂದ ಜನಿಸಿದಳು
  • ಪುರಾಣದ ಪ್ರಕಾರ ಈ ಏಕಾದಶಿಯಂದು ಉಪವಾಸ ಆಚರಿಸುವ ಮೂಲಕ ಫಲ ಮತ್ತು ಮೋಕ್ಷ ಪಡೆಯಬಹುದು
  • ಏಕಾದಶಿ ಉಪವಾಸ ಆಚರಿಸುವುದರಿಂದ ಎಲ್ಲಾ ರೀತಿಯ ದುಃಖಗಳು ಸಹ ನಾಶವಾಗುತ್ತವೆ ಎಂದು ನಂಬಲಾಗಿದೆ
Ekadashi Fasting: ಏಕಾದಶಿ ಉಪವಾಸಕ್ಕೆ ಇದು ಅತ್ಯುತ್ತಮ ದಿನ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ title=
ಉತ್ಪನ್ನ ಏಕಾದಶಿ 2022

ನವದೆಹಲಿ: ಹಿಂದೂ ಧರ್ಮದಲ್ಲಿ ಎಲ್ಲಾ ಉಪವಾಸಗಳ ಪೈಕಿ ಏಕಾದಶಿ ಉಪವಾಸವನ್ನು ಅತ್ಯಂತ ಕಷ್ಟಕರವೆಂದು ಪರಿಗಣಿಸಲಾಗಿದೆ. ಏಕಾದಶಿಯ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಏಕಾದಶಿಯ ಉಪವಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಈ ದಿನ ಉಪವಾಸವಿದ್ದು, ನಿಯಮಾವಳಿಗಳ ಪ್ರಕಾರ ಪೂಜೆ ಮಾಡುವುದರಿಂದ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಜೊತೆಗೆ ಲಕ್ಷ್ಮಿದೇವಿಯ ಆಶೀರ್ವಾದವೂ ಸಿಗುತ್ತದೆ. ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ.

ಉತ್ಪನ್ನ ಏಕಾದಶಿಯ ದಿನದಂದು ವಿಷ್ಣುವನ್ನು ಭಕ್ತಿಯಿಂದ ಪೂಜಿಸಿ, ಉಪವಾಸ ಮಾಡುವುದರಿಂದ ಭಕ್ತರು ತಮ್ಮ ಹಿಂದಿನ ಜನ್ಮದ ಪಾಪಗಳಿಂದ ಮುಕ್ತಿ ಪಡೆಯುತ್ತಾರೆಂದು ನಂಬಲಾಗಿದೆ. ಧರ್ಮಗ್ರಂಥಗಳ ಪ್ರಕಾರ ಏಕಾದಶಿಯ ಉಪವಾಸವು ಎಲ್ಲಾ ಉಪವಾಸಗಳಲ್ಲಿಯೇ ಅತ್ಯಂತ ಪ್ರಮುಖವಾದುದು. ಪುರಾಣಗಳ ಪ್ರಕಾರ ಏಕಾದಶಿ ಒಂದು ದೇವಿಯಾಗಿದ್ದು, ಈಕೆ ಭಗವಾನ್‌ ವಿಷ್ಣುವಿನಿಂದ ಜನಿಸಿದಳು. ಆದ್ದರಿಂದ ಈ ಏಕಾದಶಿಯನ್ನು ಉತ್ಪನ್ನ ಏಕಾದಶಿಯೆಂದು ಕರೆಯಲಾಗುತ್ತದೆ. ನವೆಂಬರ್ 19ರಂದು ಉತ್ಪನ್ನ ಏಕಾದಶಿಯ ಉಪವಾಸ ಆಚರಿಸಲಾಗುವುದು. ಈ ಬಾರಿಯ ಉತ್ಪನ್ನ ಏಕಾದಶಿಯನ್ನು ಅತ್ಯಂತ ವಿಶೇಷವಾದ ಕಾಕತಾಳೀಯವಾಗಿ ಆಚರಿಸಲಾಗುತ್ತದೆ. ಪದ್ಮಪುರಾಣದ ಪ್ರಕಾರ ಈ ಏಕಾದಶಿಯಂದು ಉಪವಾಸ ಆಚರಿಸುವ ಮೂಲಕ ಎಲ್ಲಾ ಏಕಾದಶಿ ಉಪವಾಸಗಳ ಫಲ ಮತ್ತು ಮೋಕ್ಷ ಪಡೆಯಬಹುದು. ಇದು ಎಲ್ಲಾ ರೀತಿಯ ದುಃಖಗಳನ್ನು ಸಹ ನಾಶಪಡಿಸುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: Utpanna Ekadashi: ಉತ್ಪನ್ನ ಏಕಾದಶಿ ಉಪವಾಸ ಆಚರಣೆಯಿಂದ ಹಲವು ಪ್ರಯೋಜನಗಳು

ಉತ್ಪನ್ನ ಏಕಾದಶಿ 2022 ದಿನಾಂಕ

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಉತ್ಪನ್ನ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ಏಕಾದಶಿ ತಿಥಿಯು ನ.19ರ ಬೆಳಗ್ಗೆ 10.29ಕ್ಕೆ ಆರಂಭವಾಗಿ ನ.20ರ ಬೆಳಗ್ಗೆ 10.41ಕ್ಕೆ ಮುಕ್ತಾಯವಾಗಲಿದೆ. ಉದಯತಿಥಿಯ ಪ್ರಕಾರ ನವೆಂಬರ್ 20ರ ಭಾನುವಾರದಂದು ಏಕಾದಶಿ ಉಪವಾಸ ಆಚರಿಸಲಾಗುತ್ತದೆ.

ಉತ್ಪನ್ನ ಏಕಾದಶಿಯಂದು 5 ಶುಭ ಯೋಗ

ಈ ಬಾರಿಯ ಉತ್ಪನ್ನ ಏಕಾದಶಿಯ ಉಪವಾಸವನ್ನು 5 ಮಂಗಳಕರ ಯೋಗಗಳಲ್ಲಿ ಆಚರಿಸಲಾಗುತ್ತದೆ. ಇದರಲ್ಲಿ ಪ್ರೀತಿ ಯೋಗ, ಆಯುಷ್ಮಾನ್ ಯೋಗ, ದ್ವಿಪುಷ್ಕರ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗಗಳು ಸೇರಿವೆ. ಈ ಯೋಗಗಳ ನಿಖರ ಸಮಯದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

  • ಪ್ರೀತಿ ಯೋಗ - ನವೆಂಬರ್ 20ರ ಬೆಳಿಗ್ಗೆ 11:04 ರವರೆಗೆ.
  • ಆಯುಷ್ಮಾನ್ ಯೋಗ - ನವೆಂಬರ್ 20ರ ರಾತ್ರಿ 11.04ಕ್ಕೆ ಪ್ರಾರಂಭವಾಗಿ ನವೆಂಬರ್ 21ರ ರಾತ್ರಿ 9.07ಕ್ಕೆ ಮುಂದುವರಿಯುತ್ತದೆ.
  • ಸರ್ವಾರ್ಥ ಸಿದ್ಧಿ ಯೋಗ - ನವೆಂಬರ್ 20ರ ಬೆಳಿಗ್ಗೆ 06:47ಕ್ಕೆ ಪ್ರಾರಂಭವಾಗಿ ತಡರಾತ್ರಿ 12:36ರವರೆಗೆ ಇರುತ್ತದೆ.
  • ಅಮೃತ ಸಿದ್ಧಿ ಯೋಗ - ನವೆಂಬರ್ 20ರ ಬೆಳಗ್ಗೆ 6.47ರಿಂದ ಮಧ್ಯಾಹ್ನ 12.36ರವರೆಗೆ.
  • ದ್ವಿಪುಷ್ಕರ ಯೋಗವು ನವೆಂಬರ್ 20ರ ತಡರಾತ್ರಿ 12:36ರಿಂದ ನವೆಂಬರ್ 21ರ ಬೆಳಗ್ಗೆ 6:48ರವರೆಗೆ ಪ್ರಾರಂಭವಾಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ, ಏಕಾದಶಿಯಂದು ರೂಪುಗೊಂಡ ಈ ಎಲ್ಲಾ ಯೋಗಗಳು ಪೂಜೆ ಮತ್ತು ಮಂಗಳಕರ ಕಾರ್ಯಗಳ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಸರ್ವಾರ್ಥ ಸಿದ್ಧಿ ಯೋಗದಲ್ಲಿ ಮಾಡುವ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗುತ್ತದೆ. ಅದೇ ರೀತಿ ಈ ಮುಹೂರ್ತದಲ್ಲಿ ಮಾಡಿಕೊಳ್ಳುವ ನಿಮ್ಮ ಇಷ್ಟಾರ್ಥಗಳು ಶೀಘ್ರವೇ ಈಡೇರುತ್ತವೆ ಮತ್ತು ಯಶಸ್ವಿಯಾಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Palmistry: ಅಂಗೈನಲ್ಲಿ ಈ ರೀತಿ ಇದ್ದರೆ ಮಂಗಳಕರ, ಸುಖ-ಸಂಪತ್ತಿನ ಜೊತೆ ಐಷಾರಾಮಿ ಜೀವನ ನಿಮ್ಮದಾಗುತ್ತೆ!

ಈ ಏಕಾದಶಿಯಿಂದ ವರ್ಷದ ಉಪವಾಸ ಪ್ರಾರಂಭ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಏಕಾದಶಿಯ ಉಪವಾಸವನ್ನು ಉತ್ಪನ್ನ ಏಕಾದಶಿಯ ದಿನದಿಂದ ಪ್ರಾರಂಭಿಸಬಹುದು. ಶಾಸ್ತ್ರಗಳ ಪ್ರಕಾರ, ಏಕಾದಶಿ ಮಾತೆಯು ಉತ್ಪನ್ನ ಏಕಾದಶಿಯ ದಿನದಂದು ಕಾಣಿಸಿಕೊಂಡರು. ಅದಕ್ಕಾಗಿಯೇ ಈ ದಿನದಿಂದ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಏಕಾದಶಿ ಉಪವಾಸವು ಭಗವಂತನಾದ ವಿಷ್ಣುವಿನ ಆಶೀರ್ವಾದ ಪಡೆದುಕೊಳ್ಳಲು ಅತ್ಯಂತ ಮಹತ್ವದ್ದು ಎಂದು ಹೇಳಲಾಗಿದೆ. ಹೀಗಾಗಿ ಇಡೀ ವರ್ಷ ಏಕಾದಶಿ ಉಪವಾಸ ಇಟ್ಟುಕೊಳ್ಳಬಯಸುವವರು ಈ ಏಕಾದಶಿಯಿಂದಲೇ ಉಪವಾಸ ಪ್ರಾರಂಭಿಸಬಹುದು. ವರ್ಷದ ಮಧ್ಯದಲ್ಲಿ ಶುಕ್ಲ ಪಕ್ಷದ ಏಕಾದಶಿಯಿಂದ ಉಪವಾಸವನ್ನು ಪ್ರಾರಂಭಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News