Garuda Purana: ಕುಟುಂಬ ಎಂದರೆ ಪರಿವಾರ. ಪರಿವಾರದಲ್ಲಿ ಅನೇಕ ಜನರಿರುತ್ತಾರೆ ಮತ್ತು ಪ್ರತಿಯೊಬ್ಬರ ಸ್ವಭಾವವು ವಿಭಿನ್ನವಾಗಿರುತ್ತದೆ. ಕೆಲವು ಕುಟುಂಬದ ಸದಸ್ಯರ ಪರಸ್ಪರ ನಿಕಟ ಪ್ರೀತಿ-ವಿಶ್ವಾಸ ಇರುವುದನ್ನು ಗಮನಿಸಿರಬೇಕು, ಆದರೆ ಕೆಲವು ಕುಟುಂಬದಲ್ಲಿ ನಿರಂತರವಾಗಿ ಭಿನ್ನಾಭಿಪ್ರಾಯಗಳು ಮೂಡುವುದನ್ನು ಕೂಡ ನೋಡಿರಬಹುದು. ಅಂತಹ ಮನೆಗಳಲ್ಲಿ, ಜನರ ಸ್ವಭಾವದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ದಿನನಿತ್ಯ ಜಗಳವಾಡುವುದರಿಂದ ಶಾಂತವಾಗಿರುವ ಕುಟುಂಬದ ಸದಸ್ಯರ ಸ್ವಭಾವವೂ ಬದಲಾಗುವುದು ಸಹಜವೇ.
ಇಂತಹ ಸನ್ನಿವೇಶಗಳಿಗೆ ನಮ್ಮ ಕೆಟ್ಟ ಅಭ್ಯಾಸಗಳೇ (Bad Habits) ಕಾರಣ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ವಾಸ್ತವವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳು ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತವೆ, ಇದರಿಂದಾಗಿ ಅದು ಕುಟುಂಬದ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮನೆಯಲ್ಲಿ ಶಾಂತಿ-ನೆಮ್ಮದಿಯನ್ನು ಹಾಳುಮಾಡುವಂತಹ ನಮ್ಮ ಕೆಟ್ಟ ಅಭ್ಯಾಸಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- Astrology: ಈ 4 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ ನವೆಂಬರ್ 2021
ರಾತ್ರಿಯಲ್ಲಿ ಸಿಂಕ್ನಲ್ಲಿ ಕೊಳಕು ಭಕ್ಷ್ಯಗಳನ್ನು ಬಿಡುವುದು:
ಹಿಂದಿನ ಕಾಲದಲ್ಲಿ ಜನರು ಅಡಿಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ (Clean) ನಂತರವೇ ರಾತ್ರಿ ಮಲಗುತ್ತಿದ್ದರು. ಆದರೆ ಇಂದಿನ ಓಡಾಟದ ಜೀವನದಲ್ಲಿ ಜನರಿಗೆ ವಿಶ್ರಾಂತಿ ಪಡೆಯುವುದು ಪ್ರಮುಖ ಎಂದೆನಿಸುತ್ತದೆ. ಜೊತೆಗೆ ಮನೆಯ ಕೆಲಸನ್ನು ಯಾವಾಗ ಬೇಕಾದರೂ ಮಾಡಬಹುದು ಎಂಬ ಅಸಡ್ಡೆಯ ಮನೋಭಾವ ಕೂಡ ಬೆಳೆದಿದೆ. ಇನ್ನೂ ಕೆಲವರು ಕೆಲಸದವರು ಬಂದು ಮಾಡುತ್ತಾರೆ ಎಂದು ಕಾಯುತ್ತಾ ಒಂದು ಚಮಚವನ್ನೂ ಕೂಡ ತೊಳೆಯುವ ಗೋಜಿಗೇ ಹೋಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಅಡುಗೆ ಮಾಡಿದ, ಊಟ ಮಾಡಿದ ಎಲ್ಲಾ ಪಾತ್ರೆಗಳನ್ನು ಅಡುಗೆಮನೆಯಲ್ಲಿಯೇ ಅಥವಾ ಸಿಂಕ್ ನಲ್ಲಿಯೇ ಸಂಗ್ರಹಿಸಲಾಗುತ್ತದೆ. ಗರುಡ ಪುರಾಣದಲ್ಲಿ ರಾತ್ರಿ ಅಡುಗೆ ಮಾಡಿದ ಬಳಿಕ ಪಾತ್ರೆಗಳನ್ನು ತೊಳೆಯದೇ ಬಿಡುವ ಅಭ್ಯಾಸವು ಮನೆಯಲ್ಲಿ ಬಡತನಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ, ಮನೆಯಲ್ಲಿ ತೊಂದರೆಗಳು ಉಂಟಾಗಬಹುದು. ಜೊತೆಗೆ ಸದಾ ಕಾದಾಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆ ಕೊಳಕಾಗಿರುವುದು :
ಮನೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಬಹಳ ಮುಖ್ಯ, ಇಲ್ಲದಿದ್ದರೆ ರೋಗಗಳು ಬೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಗರುಡ ಪುರಾಣದ (Garuda Purana) ಪ್ರಕಾರ, ಲಕ್ಷ್ಮಿ ದೇವಿಯು ಎಂದಿಗೂ ಕೊಳಕು ಮತ್ತು ಅಸ್ತವ್ಯಸ್ತವಾಗಿರುವ ಮನೆಯಲ್ಲಿ ವಾಸಿಸುವುದಿಲ್ಲ. ಜೊತೆಗೆ ಅಂತಹ ಮನೆಯಲ್ಲಿ ಅನಗತ್ಯ ವೆಚ್ಚಗಳು ಕೂಡ ಹೆಚ್ಚಾಗುತ್ತವೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಪರಸ್ಪರರ ನಡುವೆ ಜಗಳ ಉಂಟಾಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ- Kartik Month 2021: ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಗೆ ಸಂಬಂಧಿಸಿದ ಈ ಕೆಲಸಗಳನ್ನು ಮಾಡಿದರೆ ಆಗಲಿದೆ ಅಭಿವೃದ್ದಿ
ಜಂಕ್ ಸಂಗ್ರಹಿಸುವುದು:
ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಕುಟುಂಬಗಳೇ ಹೆಚ್ಚು. ಆದರೂ ಮನೆ ಚಿಕ್ಕದು ಎನ್ನುವ ಕಾರಣಕ್ಕೆ ಹೆಚ್ಚಿನ ಜನರು ಮನೆಯ ಜಂಕ್ ಅನ್ನು ಅಂದರೆ ಬಳಸದ ಹಳೆಯ ವಸ್ತುಗಳನ್ನು ಛಾವಣಿಯ ಮೇಲೆ ಇರಿಸುತ್ತಾರೆ, ನಂತರ ಈ ಜಂಕ್ ಅನ್ನು ಸಹ ನೋಡಿಕೊಳ್ಳುವುದಿಲ್ಲ. ಆದರೆ ಗರುಡ ಪುರಾಣದಲ್ಲಿ ಜಂಕ್ ಅನ್ನು ಮನೆಯ ಯಾವುದೇ ಭಾಗದಲ್ಲಿ ಇಡಬಾರದು ಎಂದು ಹೇಳಲಾಗಿದೆ. ಜಂಕ್ ಅನ್ನು ಸಂಗ್ರಹಿಸುವುದರಿಂದ, ಮನೆಯಲ್ಲಿ ನಕಾರಾತ್ಮಕತೆಯು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟು ಮತ್ತು ಸಂಕಟದ ಸನ್ನಿವೇಶಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ.
ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ