ನವದೆಹಲಿ: ಹೊಸ ವರ್ಷ ಆರಂಭವಾಗಿದ್ದು ಇದರೊಂದಿಗೆ ಈ ವರ್ಷದ ವ್ರತ-ಹಬ್ಬಗಳು, ವಿಶೇಷ ಸಂದರ್ಭಗಳು, ಶುಭ ಮತ್ತು ಅಶುಭ ಮುಹೂರ್ತಗಳ ಸರಣಿಯೂ ಆರಂಭವಾಗಿದೆ. ಮಾಸಿಕ ಶಿವರಾತ್ರಿ(Maha Shivratri)ಯಿಂದ ವರ್ಷವು ಪ್ರಾರಂಭವಾಯಿತು ಮತ್ತು ಈಗ ಪಂಚಕವು ಮೊದಲ ವಾರದಲ್ಲಿಯೇ ಪ್ರಾರಂಭವಾಗಲಿದೆ. ಪಂಚಕಗಳನ್ನು ಧರ್ಮಗ್ರಂಥಗಳಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಕಾರಣದಿಂದ ಈ ಅವಧಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲದಿದ್ದರೆ ಅವು ಜೀವನಕ್ಕೆ ತೊಂದರೆ ತರಬಹುದು.
ಪಂಚಕ ಕಾಲ ಎಂದರೇನು..?
2022ರ ಮೊದಲ ಪಂಚಕ(Panchak) ನಾಳೆಯಿಂದ ಅಂದರೆ ಜನವರಿ 5ರಂದು ಬುಧವಾರ ಸಂಜೆ 7 ಗಂಟೆಗೆ ಪ್ರಾರಂಭ(Panchak January 2022)ವಾಗುತ್ತದೆ ಮತ್ತು ಜನವರಿ 10ರಂದು ಬೆಳಿಗ್ಗೆ 8 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಕುಂಭ ಮತ್ತು ಮೀನ ರಾಶಿಯಲ್ಲಿ ಇರುವಾಗ ಆ ಸಮಯವನ್ನು ಪಂಚಕ ಕಾಲ ಎನ್ನುತ್ತಾರೆ. ಈ 5 ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಇದಲ್ಲದೇ ಕೆಲವು ವಿಶೇಷ ಕೆಲಸಗಳೂ ಆಗುವುದಿಲ್ಲ. ಪಂಚಕ ಕಾಲದಲ್ಲಿ ಲಂಕಾಧಿಪತಿಯಾಗಿದ್ದ ರಾವಣನೂ ಸತ್ತ. ಒಬ್ಬ ವ್ಯಕ್ತಿಯು ಪಂಚಕದಲ್ಲಿ ಸತ್ತರ ಆತನ ಕುಟುಂಬದ 5 ಸದಸ್ಯರು ಸಾಯುತ್ತಾರೆ ಅಥವಾ ಅವರು ಮರಣವನ್ನು ಅನುಭವಿಸುತ್ತಾರೆಂದು ನಂಬಲಾಗಿದೆ.
ಇದನ್ನೂ ಓದಿ: Money Plant Tips : ಮನೆಯಲ್ಲಿ ಮರೆತು ಕೂಡ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಬೇಡಿ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ
5 ದಿನಗಳವರೆಗೆ ಈ ಕೆಲಸವನ್ನು ಮಾಡಬೇಡಿ
- ಪಂಚಕ ಸಮಯದಲ್ಲಿ ಕುಟುಂಬದ ಸದಸ್ಯರು ಮರಣಹೊಂದಿದರೆ ಅವರ ಅಂತಿಮ ವಿಧಿಗಳನ್ನು ವಿಶೇಷ ರೀತಿಯಲ್ಲಿ ನಡೆಸಬೇಕು. 4 ಮೋತಿಚೂರು ಲಡ್ಡು ಅಥವಾ ತೆಂಗಿನಕಾಯಿಯನ್ನು ಸಾವನ್ನಪ್ಪಿದ ವ್ಯಕ್ತಿಯೊಂದಿಗೆ ಇಡಬೇಕು. ಇದರಿಂದ ಕೌಟುಂಬಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
- ಪಂಚಕದಲ್ಲಿ ಬಂಕ್ ಬೆಡ್(Bunk Beds)ಗಳನ್ನು ತಯಾರಿಸಬೇಡಿ ಅಥವಾ ಖರೀದಿಸಬೇಡಿ.
- ನೀವು ಮನೆಯನ್ನು ನಿರ್ಮಿಸುತ್ತಿದ್ದರೆ ಮೇಲ್ಛಾವಣಿಯನ್ನು ಹಾಕಬೇಡಿ ಅಥವಾ ಬಾಗಿಲು ಚೌಕಟ್ಟನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
- ಪಂಚಕ ಕಾಲ(Panchak Time)ದಲ್ಲಿ ದಕ್ಷಿಣ ದಿಕ್ಕಿಗೆ ಪ್ರಯಾಣಿಸಬಾರದು. ಹೀಗೆ ಮಾಡುವುದು ಅಶುಭ. ವಾಸ್ತವವಾಗಿ ದಕ್ಷಿಣವನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
- ಪಂಚಕ ಕಾಲದಲ್ಲಿ ಹುಲ್ಲು, ಕಟ್ಟಿಗೆ ಇತ್ಯಾದಿಗಳನ್ನು ಕೂಡ ಸಂಗ್ರಹಿಸಬಾರದು.
ಇದನ್ನೂ ಓದಿ: Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.