Corona ಸಮಯದಲ್ಲಿ ಹೋಳಿ ಆಚರಣೆ, ಇವುಗಳ ಬಗ್ಗೆ ಇರಲಿ ಎಚ್ಚರ

Holi 2021 During Corona Period: ದಿನೇ ದಿನೇ ಕರೋನಾವೈರಸ್ ಹಾವಳಿ ಹೆಚ್ಚಾಗುತ್ತಿದೆ. ಈ ಮಧ್ಯೆ ನೀವೂ ಸಹ ಈ ವರ್ಷ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಕೂಡಿ ಹೋಳಿ ಆಚರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

Written by - Yashaswini V | Last Updated : Mar 27, 2021, 03:06 PM IST
  • ಇಡೀ ಜಗತ್ತನ್ನೇ ಕಾಡುತ್ತಿರುವ ಕರೋನಾವೈರಸ್ ನಿಂದ ಇನ್ನೂ ಸಂಪೂರ್ಣವಾಗಿ ಮುಕ್ತಿ ದೊರೆತಿಲ್ಲ
  • ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಕರೋನಾ ಉಲ್ಬಣಿಸಿದ್ದು ಕಳೆದೆ 24 ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ
  • ಈ ಹಿನ್ನಲೆಯಲ್ಲಿ ಹೋಳಿ ಆಚರಣೆ ವೇಳೆ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಬಹಳ ಮುಖ್ಯ
Corona ಸಮಯದಲ್ಲಿ ಹೋಳಿ ಆಚರಣೆ, ಇವುಗಳ ಬಗ್ಗೆ ಇರಲಿ ಎಚ್ಚರ title=
Holi 2021 During Corona Period

Holi 2021 During Corona Period: ಕಳೆದ 16 ತಿಂಗಳಿನಿಂದ ಇಡೀ ಜಗತ್ತನ್ನೇ ಕಾಡುತ್ತಿರುವ ಕರೋನಾವೈರಸ್ ನಿಂದ ಇನ್ನೂ ಸಂಪೂರ್ಣವಾಗಿ ಮುಕ್ತಿ ದೊರೆತಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಕರೋನಾ ಉಲ್ಬಣಿಸಿದ್ದು ಕಳೆದೆ 24 ಗಂಟೆಗಳಲ್ಲಿ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಎಲ್ಲರ ಮನದ ದುಗುಡವನ್ನು ಹೆಚ್ಚಿಸಿದೆ. ಈ ಮಧ್ಯೆ ಭಾರತದಲ್ಲಿ ಹೋಳಿ ಉತ್ಸವಕ್ಕೆ ತಯಾರಿ ನಡೆಯುತ್ತಿದೆ. ಆದಾಗ್ಯೂ ದೇಶದಲ್ಲಿ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹೋಳಿ ಆಚರಣೆಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವುದು ಬಹಳ ಮುಖ್ಯ.

ನೀವೂ ಸಹ ಈ ವರ್ಷ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಕೂಡಿ ಹೋಳಿ  ಆಚರಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.
ಕರೋನಾ ಅವಧಿಯಲ್ಲಿ ನೀವು ನಿಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಸುರಕ್ಷಿತವಾಗಿ ಹೋಳಿ ಆಚರಿಸಲು ಈ ಕೆಳಗೆ ಸೂಚಿಸಿರುವ ಸಲಹೆಗಳು ನಿಮಗೆ ಸಹಾಯಕವಾಗಬಹುದು. 

ಇದನ್ನೂ ಓದಿ - Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ

ಕುಟುಂಬ ಸದಸ್ಯರೊಂದಿಗೆ ಹೋಳಿ ಆಡಿ - ಕರೋನಾ ಸೋಂಕು (Coronavirus) ಮತ್ತೊಮ್ಮೆ ವೇಗವಾಗಿ ಹರಡುತ್ತಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಿಗೆ ತೆರಳದೆಯೇ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಮನೆ ಹತ್ತಿರವೇ ಹೋಳಿ ಆಡುವುದು ಒಳ್ಳೆಯದು.  

ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸದಿರಿ - ಕರೋನದ ನಡುವೆ ಹೋಳಿ ಆಡುವಾಗ, ದೇಹದ ಕೆಲವು ಭಾಗಗಳಾದ ಕಣ್ಣುಗಳು, ಬಾಯಿ, ಮೂಗಿನ ಬಳಿ ಬಣ್ಣವನ್ನು ಅನ್ವಯಿಸುವುದನ್ನು ತಪ್ಪಿಸಿ. ಜೊತೆಗೆ ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸದೆ ಇರುವುದು ಉತ್ತಮ

ರೇನ್ ಡ್ಯಾನ್ಸ್ ಅಥವಾ ಪೂಲ್ ಪಾರ್ಟಿ - ಹೋಳಿ (Holi) ಸಮಯದಲ್ಲಿ ಹಲವು ಸ್ಥಳಗಳಲ್ಲಿ ರೇನ್ ಡ್ಯಾನ್ಸ್ ಮತ್ತು ಪೂಲ್ ಪಾರ್ಟಿ ಸಹ ಆಯೋಜಿಸಲಾಗುತ್ತದೆ. ಕರೋನಾ ಸೋಂಕಿನ ನಡುವೆ ಅಂತಹ ಪಾರ್ಟಿಗಳಿಗೆ ಹೋಗುವುದನ್ನು ತಪ್ಪಿಸಿ. 

ಇದನ್ನೂ ಓದಿ - Holi 2021: ಹೋಳಿಯಲ್ಲಿ ಆಂಜನೇಯನನ್ನು ಈ ರೀತಿ ಪೂಜಿಸಿ ನಿಮ್ಮ ಸಮಸ್ಯೆ ನಿವಾರಿಸಿ

ಜನಸಂದಣಿಯಿಂದ ದೂರವಿರಿ - ಜನಸಂದಣಿಯಲ್ಲಿ ಕರೋನಾ ಹರಡುವ ಅಪಾಯ ತುಂಬಾ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಜನಸಂದಣಿ ಇಲ್ಲದ ಸ್ಥಳಗಳಲ್ಲಿ ಹೋಳಿ ಆಡಿ.

ಕೈ ಕುಲುಕುವುದನ್ನು ತಪ್ಪಿಸಿ - ಹೋಳಿ ದಿನದಂದು ಯಾರನ್ನಾದರೂ ಭೇಟಿಯಾದಾಗ ಕೈ ಕುಲುಕುವುದು ಅಥವಾ ಆಲಂಗಿಸುವುದನ್ನು ತಪ್ಪಿಸಿ. ಕೈಕುಲುಕುವುದು, ತಬ್ಬಿಕೊಳ್ಳುವುದರ ಮೂಲಕ ಕೂಡ ಕರೋನಾವೈರಸ್ (Coronavirus) ಹರಡುತ್ತದೆ.

ಸ್ಯಾನಿಟೈಜರ್ ಬಳಸಿ- ಹೊರಗಿನಿಂದ ಜನರು ನಿಮ್ಮೊಂದಿಗೆ ಹೋಳಿ ಆಡಲು ಬಂದರೆ ಮೊದಲು  ಸ್ಯಾನಿಟೈಜರ್ ಬಳಸುವಂತೆ ಅವರಿಗೆ ತಿಳಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News