ಸೂರ್ಯಗ್ರಹಣಕ್ಕೆ ಇನ್ನು ತುಂಬಾ ಸಮಯವಿದೆ: ಮರೆತು ಕೂಡ ಈ ಕೆಲಸ ಮಾಡಬೇಡಿ, ದೊಡ್ಡ ನಷ್ಟವಾಗುತ್ತದೆ

ಸೂರ್ಯಗ್ರಹಣವಾಗಲಿ ಅಥವಾ ಚಂದ್ರಗ್ರಹಣವಾಗಲಿ ಇವೆರಡನ್ನೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ.

Last Updated : Nov 29, 2021, 09:53 AM IST
  • ವರ್ಷದ ಕೊನೆಯ ಮತ್ತು 2ನೇ ಸೂರ್ಯಗ್ರಹಣವು ಡಿಸೆಂಬರ್ 4ರಂದು ಸಂಭವಿಸಲಿದೆ
  • ಧರ್ಮ-ಜ್ಯೋತಿಷ್ಯದಲ್ಲಿ ಸೂರ್ಯಗ್ರಹಣ & ಚಂದ್ರಗ್ರಹಣ ಅಶುಭವೆಂದು ಪರಿಗಣಿಸಲಾಗಿದೆ
  • ಗ್ರಹಣದ ಅಶುಭ ಪರಿಣಾಮ ತಪ್ಪಿಸಲು ಗ್ರಹಣದ ನಂತರ ಇಷ್ಟ ದೇವರನ್ನು ಪೂಜಿಸಿ, ದಾನ ಮಾಡಬೇಕು
ಸೂರ್ಯಗ್ರಹಣಕ್ಕೆ ಇನ್ನು ತುಂಬಾ ಸಮಯವಿದೆ: ಮರೆತು ಕೂಡ ಈ ಕೆಲಸ ಮಾಡಬೇಡಿ, ದೊಡ್ಡ ನಷ್ಟವಾಗುತ್ತದೆ title=
ಸೂರ್ಯಗ್ರಹಣವು ಡಿಸೆಂಬರ್ 4ರಂದು ಸಂಭವಿಸಲಿದೆ

ನವದೆಹಲಿ: ವರ್ಷದ ಕೊನೆಯ ಸೂರ್ಯಗ್ರಹಣ(Surya Grahan 2021)ಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಉಳಿದಿವೆ. ವರ್ಷದ ಕೊನೆಯ ಮತ್ತು 2ನೇ ಸೂರ್ಯಗ್ರಹಣವು ಡಿಸೆಂಬರ್ 4ರಂದು ಸಂಭವಿಸಲಿದೆ. 2021ರ ಕೊನೆಯ ಸೂರ್ಯಗ್ರಹಣ(Year 2021 Last Surya Grahan)ವು ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತಿದೆ. ಆದ್ದರಿಂದ ಈ ರಾಶಿಚಕ್ರದ ಜನರ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ. ಉಳಿದ ಜನರ ಮೇಲೂ ಈ ಗ್ರಹಣವು ಪರಿಣಾಮ ಬೀರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಮತ್ತು ಅದರ ಸೂತಕ ಅವಧಿಯು ಮಾನ್ಯವಾಗಿಲ್ಲವಾದರೂ ಸೂರ್ಯಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ.

ಗ್ರಹಣಗಳು ಅಶುಭ

ಅದು ಸೂರ್ಯಗ್ರಹಣವಾಗಲಿ ಅಥವಾ ಚಂದ್ರಗ್ರಹಣವಾಗಲಿ ಇವೆರಡನ್ನೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಬಹಳ ಅಶುಭ(Surya Grahan Effects)ವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯನ್ನು ನೀಡುತ್ತವೆ. ಆದುದರಿಂದ ಗ್ರಹಣದ ಸಮಯದಲ್ಲಿ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇದರೊಂದಿಗೆ ಗ್ರಹಣದ ಅಶುಭ ಪರಿಣಾಮಗಳನ್ನು ತಪ್ಪಿಸಲು ಗ್ರಹಣದ ನಂತರ ಇಷ್ಟ ದೇವರನ್ನು ಪೂಜಿಸಿ, ಸ್ನಾನ ಮಾಡಿ ಮತ್ತು ದಾನ ಮಾಡಿ ಎಂದು ಹೇಳಲಾಗುತ್ತದೆ. ಇದಲ್ಲದೇ ಗ್ರಹಣದ ನಂತರ ಮನೆಯನ್ನು ಶುದ್ಧೀಕರಿಸಲು ಗಂಗಾಜಲವನ್ನು ಸಹ ಮನೆಯಲ್ಲಿ ಸಿಂಪಡಿಸಬೇಕು ಇದರಿಂದ ಮನೆಯ ನಕಾರಾತ್ಮಕ ಶಕ್ತಿಯೂ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Weekly Horoscope : ನಾಳೆಯಿಂದ ಈ 3 ರಾಶಿಯವರ ಅದೃಷ್ಟ ಬಾಗಿಲು ತೆರೆಯಲಿದೆ : ನಿಮ್ಮ ರಾಶಿ ಹೇಗಿದೆ?

ಗ್ರಹಣ ಕಾಲದಲ್ಲಿ ಈ ಕೆಲಸ ಮಾಡಬೇಡಿ

  • ಗ್ರಹಣದ ಸಮಯದಲ್ಲಿ ನಕಾರಾತ್ಮಕ ವಾತಾವರಣವಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಏನನ್ನೂ ತಿನ್ನಬಾರದು(Surya Grahan Sutak Kaal) ಎಂಬುದು ಪಾಲಿಸಿಕೊಂಡು ಬಂದ ನಿಯಮವಾಗಿದೆ.
  • ಗ್ರಹಣವು ಆಹಾರ ಮತ್ತು ನೀರಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಆದ್ದರಿಂದ ಈ ಸಮಯದಲ್ಲಿ ಬೇಯಿಸಿದ ಆಹಾರ ಮತ್ತು ನೀರಿನಲ್ಲಿ ತುಳಸಿಯನ್ನು ಹಾಕಬೇಕು ಇದರಿಂದ ಈ ವಸ್ತುಗಳು ಶುದ್ಧವಾಗಿರುತ್ತವೆ. 
  • ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಈ ಅವಧಿಯಲ್ಲಿ ಮಾಡುವ ಯಾವುದೇ ಕೆಲಸವು ಅಶುಭ ಫಲಿತಾಂಶವನ್ನು ನೀಡುತ್ತದೆ.
  • ಗ್ರಹಣದ ಸಮಯ(Grahan Dosh)ದಲ್ಲಿ ದೇವರ ಪೂಜೆ ಮಾಡಬೇಡಿ. ಬದಲಿಗೆ ಈ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಮನೆಯಲ್ಲಿ ಮಾಡಿದ ಪೂಜಾ ಮನೆಯಲ್ಲಿ ದೇವರ ವಿಗ್ರಹವನ್ನು ಮುಚ್ಚಬೇಕು.
  • ಗ್ರಹಣದ ಸಮಯದಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಿ.

ಇದನ್ನೂ ಓದಿ: ಈ ಉಪವಾಸ ಆಚರಿಸುವುದರಿಂದ ಅನೇಕ ಪ್ರಯೋಜನಗಳಿವೆ: ಮೋಕ್ಷ ಪ್ರಾಪ್ತಿಗಾಗಿ ಪೂಜೆಯ ವಿಧಾನ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News