Palmistry: ಅಂಗೈನಲ್ಲಿ ಈ ರೇಖೆ ಇರುವ ವ್ಯಕ್ತಿ ರಾಜನಂತೆ ಜೀವನ ನಡೆಸುತ್ತಾನೆ..!

ಅಂಗೈಯಲ್ಲಿರುವ ಕೆಲವು ಗುರುತುಗಳು ತುಂಬಾ ಮಂಗಳಕರ ಮತ್ತು ಮುಂಬರುವ ಸಮಯದಲ್ಲಿ ಆರ್ಥಿಕ ಲಾಭಗಳ ಬಗ್ಗೆಯೂ ಹೇಳುತ್ತವೆ. ಈ ಗುರುತುಗಳನ್ನು ಹೊಂದಿರುವವರ ಜೀವನದಲ್ಲಿ ಸಂಪತ್ತು, ಸುಖ-ಸಂತೋಷವಿರುತ್ತದೆ ಅಂತಾ ನಂಬಲಾಗಿದೆ. 

Written by - Puttaraj K Alur | Last Updated : Feb 12, 2022, 07:15 AM IST
  • ಹಸ್ತದ ಮುದ್ರೆಗಳು ನಿಮ್ಮ ಅದೃಷ್ಟದ ಮತ್ತು ಭವಿಷ್ಯದ ಜೀವನದ ಬಗ್ಗೆ ಹೇಳುತ್ತವೆ
  • ಕೆಲವು ವಿಶೇಷ ರೇಖೆಗಳನ್ನು ಹೊಂದಿರುವ ಜನರು ರಾಜರಂತೆ ಜೀವನ ನಡೆಸುತ್ತಾರೆ
  • ಅಂಗೈಯಲ್ಲಿ ಕಮಲದ ಚಿಹ್ನೆ ಹೊಂದಿರುವ ವ್ಯಕ್ತಿ ಶಾಶ್ವತ ಅದೃಷ್ಟವಂತನಾಗಿರುತ್ತಾನೆ
Palmistry: ಅಂಗೈನಲ್ಲಿ ಈ ರೇಖೆ ಇರುವ ವ್ಯಕ್ತಿ ರಾಜನಂತೆ ಜೀವನ ನಡೆಸುತ್ತಾನೆ..! title=
ಕಮಲದ ಚಿಹ್ನೆ ಹೊಂದಿರುವ ವ್ಯಕ್ತಿ ಶಾಶ್ವತ ಅದೃಷ್ಟವಂತ

ನವದೆಹಲಿ: ಕೈನಲ್ಲಿರುವ ರೇಖೆಗಳು(Palmistry Signs) ನಮ್ಮ ಭವಿಷ್ಯದ ಜೀವನದ ಬಗ್ಗೆ ತಿಳಿಸುತ್ತವೆ ಎಂದು ಜನರು ಹೇಳುವುದನ್ನು ನೀವು ಕೇಳಿರಬಹುದು. ಅಂಗೈನಲ್ಲಿರುವ ಕೆಲವು ರೇಖೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅಂಗೈ ಮೇಲೆ ಇರುವ ವಿಶೇಷ ಚಿಹ್ನೆಗಳು ಭವಿಷ್ಯದ ಬಗ್ಗೆ ಬಹಳಷ್ಟು ಹೇಳುತ್ತವೆ. ಅಂಗೈಯಲ್ಲಿರುವ ಕೆಲವು ಗುರುತುಗಳು ತುಂಬಾ ಮಂಗಳಕರ ಮತ್ತು ಮುಂಬರುವ ಸಮಯದಲ್ಲಿ ಆರ್ಥಿಕ ಲಾಭಗಳ ಬಗ್ಗೆಯೂ ಹೇಳುತ್ತವೆ. ಈ ಗುರುತುಗಳನ್ನು ಹೊಂದಿರುವವರ ಜೀವನದಲ್ಲಿ ಸಂಪತ್ತು, ಸುಖ-ಸಂತೋಷವಿರುತ್ತದೆ ಅಂತಾ ನಂಬಲಾಗಿದೆ. 

ಹಸ್ತಸಾಮುದ್ರಿಕ ಶಾಸ್ತ್ರ(Palmistry)ದ ಪ್ರಕಾರ ಜನರ ಜೀವನದ ಭವಿಷ್ಯವು ಅಂಗೈಯ ರೇಖೆಗಳಲ್ಲಿ ಅಡಗಿದೆಯಂತೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅನೇಕ ಅಂಗೈ ಗುರುತುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂಗೈಯಲ್ಲಿನ ಚಿಹ್ನೆಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ವಿವಿಧ ಪರ್ವತಗಳಲ್ಲಿ ಕಂಡುಬರುವ ಚಿಹ್ನೆಗಳು ವ್ಯಕ್ತಿಯ ಜೀವನದಲ್ಲಿ ಪ್ರಗತಿ ಮತ್ತು ಅವನತಿಯನ್ನು ಸೂಚಿಸುತ್ತವೆ. ಇವುಗಳಲ್ಲಿ ಹಲವು ಚಿಹ್ನೆಗಳು ತುಂಬಾ ಒಳ್ಳೆಯದು ಮತ್ತು ಮಂಗಳಕರವಾಗಿದ್ದರೆ ಕೆಲವು ಅಶುಭ. ಕೈಗಳಲ್ಲಿ ಕಂಡುಬರುವ ಇಂತಹ ಚಿಹ್ನೆಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿರಿ.

ಇದನ್ನೂ ಓದಿ: ಶುಕ್ರನ ಅನುಗ್ರಹದಿಂದ 16 ದಿನಗಳವರೆಗೆ, ಈ ರಾಶಿಚಕ್ರದ ಜನರು ಗಳಿಸುತ್ತಾರೆ ಅಪಾರ ಸಂಪತ್ತು

ಅಂಗೈಯಲ್ಲಿ ಸ್ವಸ್ತಿಕ ಮತ್ತು ಪದ್ಮದ ಗುರುತು

ಅಂಗೈಯಲ್ಲಿ ಸ್ವಸ್ತಿಕ್ ಗುರುತು ಹೊಂದಿರುವವರು(Palmistry Lines) ಶ್ರೀಮಂತ, ಪ್ರತಿಷ್ಠಿತ ಧಾರ್ಮಿಕ ಪ್ರಯಾಣವನ್ನು ಕೈಗೊಳ್ಳುವ ವ್ಯಕ್ತಿಯಾಗಿರುತ್ತಾರೆ. ಪದ್ಮದ ಗುರುತು ಯಾರ ಕೈಯಲ್ಲಿದೆಯೋ ಅದು ಧಾರ್ಮಿಕ ಪ್ರವೃತ್ತಿಯನ್ನು ಸೂಚಿಸುತ್ತದೆ. ಅಂತಹ ವ್ಯಕ್ತಿಯು ಎಲ್ಲದರಲ್ಲೂ ವಿಜಯಶಾಲಿಯಾಗುತ್ತಾನೆ, ರಾಜನಂತೆ ಬದುಕುತ್ತಾನೆ ಮತ್ತು ಶಕ್ತಿಶಾಲಿಯಾಗಿರುತ್ತಾನಂತೆ.

ಛತ್ರಿ ಗುರುತು

ಕೈಯಲ್ಲಿ ಛತ್ರಿಯ ಗುರುತು ಇದ್ದರೆ ಅವರು ಕೂಡ ರಾಜನಂತೆ ಜೀವನ ನಡೆಸುತ್ತಾರಂತೆ.

ಶಂಖ ಚಿಪ್ಪು

ಅಂಗೈಯಲ್ಲಿ ಶಂಖ ಚಿಪ್ಪಿನ ಗುರುತು ಇದ್ದರೆ ಅಂತಹ ವ್ಯಕ್ತಿಯ ಜೀವನದಲ್ಲಿ ಸುಖ-ಸಂತೋಷ(Fate Line)ಕ್ಕೆ ಕೊರತೆ ಇರುವುದಿಲ್ಲ. ಇಂತಹ ವ್ಯಕ್ತಿಯು ವ್ಯವಹಾರಕ್ಕೆ ಸಂಬಂಧಿಸಿದಂತೆ ವಿದೇಶ ಪ್ರವಾಸ ಮಾಡುತ್ತಾನೆ. ಅಂಗೈಯಲ್ಲಿ ಕತ್ತಿಯ ಗುರುತು ಅಪರೂಪ ಮತ್ತು ಇದು ಅದೃಷ್ಟವಂತರ ಕೈಯಲ್ಲಿ ಗೋಚರಿಸುತ್ತದೆ.

ಚಕ್ರದ ಗುರುತು

ಚಕ್ರವು ವಿಷ್ಣುವಿಗೆ ಸಂಬಂಧಿಸಿದೆ. ಹಸ್ತಸಾಮುದ್ರಿಕ ಶಾಸ್ತ್ರದ(Hand Signs) ಪ್ರಕಾರ ಈ ಗುರುತು ಅತ್ಯಂತ ಅದೃಷ್ಟವಂತರ ಅಂಗೈಯಲ್ಲಿ ಕಂಡುಬರುತ್ತದೆ. ಚಕ್ರದ ಚಿಹ್ನೆ ಇದ್ದರೆ ವ್ಯಕ್ತಿಯು ಶ್ರೀಮಂತನಾಗುತ್ತಾನೆ. ಇವರ ಜೀವನದಲ್ಲಿ ಸುಖ-ಸಂತೋಷಕ್ಕೆ ಯಾವುದೇ ಕೊರತೆ ಕಂಡುಬರುವುದಿಲ್ಲ.  

ಇದನ್ನೂ ಓದಿ: Valentine Day Horoscope - ಈ ಎರಡು ಗ್ರಹಗಳ ಪ್ರಭಾವವಿರುವ ಯುವಕರ ಮೇಲೆ ಯುವತಿಯರು ಫಿದಾ

ಕಲಶದ ಗುರುತು

ಒಬ್ಬ ವ್ಯಕ್ತಿಯ ಕೈಯಲ್ಲಿ ಕಲಶವಿದ್ದರೆ, ಆತ ದೇವಾಲಯವನ್ನು ನಿರ್ಮಿಸುವವನು, ದಾನಿ ಮತ್ತು ಯಾತ್ರಾರ್ಥಿ. ಆದರೆ ಮೀನಿನ ಚಿಹ್ನೆಯನ್ನು ಹೊಂದಿರುವ ವ್ಯಕ್ತಿ ಅದೃಷ್ಟಶಾಲಿ. ಅಂಗೈಯಲ್ಲಿ ಶಿಲುಬೆಯಂತಹ ಗುರುತು ಹೊಂದಿರುವವರು ಸಂತೋಷದಿಂದ ವಂಚಿತರಾಗುತ್ತಾರೆ.

ಅಂಗೈಯಲ್ಲಿ ಕಮಲದ ಚಿಹ್ನೆ

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ತನ್ನ ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯು ಶಾಶ್ವತ ಅದೃಷ್ಟ ಮತ್ತು ರಾಜ್ಯವನ್ನೇ ಆಳುವ ಶಕ್ತಿ ಪಡೆಯುತ್ತಾನೆ. ಅಲ್ಲದ ಅಂತಹ ವ್ಯಕ್ತಿ ದೊಡ್ಡ ಉದ್ಯಮಿಯಾಗುತ್ತಾನೆ ಜೊತೆಗೆ ಇವರು ಅಹಂಕಾರಿಗಳೂ ಆಗಿರುತ್ತಾರೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News