Side Effects of Custard Apple: ಸೀತಾಫಲವನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದರೆ ಕೆಲವರಿಗೆ ಇದನ್ನು ತಿನ್ನುವುದು ಹಾನಿಕಾರಕವಾಗಿದೆ. ಅದೇ ಸಮಯದಲ್ಲಿ, ಅದರ ಪ್ರಮಾಣವನ್ನು ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ. ಸೀತಾಫಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಕೆಲವರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಕೂಡ ಹೇಳಲಾಗುತ್ತದೆ.
ಈ ಸಮಸ್ಯೆ ಇರುವವರು ಅಪ್ಪಿ-ತಪ್ಪಿಯೂ ಸೀತಾಫಲವನ್ನು ತಿನ್ನಲೇಬಾರದು:
ಹಲವರಿಗೆ ಸೀತಾಫಲ ಸೇವಿಸುವುದರಿಂದ ಅಲರ್ಜಿ (Side Effects of Custard Apple) ಉಂಟಾಗಬಹುದು. ಈ ಕಾರಣದಿಂದಾಗಿ, ತುರಿಕೆ ಮತ್ತು ಚರ್ಮದ ದದ್ದುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸೀತಾಫಲ ಸೇವನೆಯಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದರೆ ಅಂತಹವರು ಈ ಹಣ್ಣನ್ನು ತಿನ್ನಬಾರದು. ಇಲ್ಲವೇ ನಿಮಗೆ ತೊಂದರೆ ಆಗುತ್ತದೆ.
ಇದಲ್ಲದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಹೊಂದಿರುವುವವರು ಕೂಡ ಸೀತಾಫಲವನ್ನು (Custard Apple) ತಿನ್ನುವುದನ್ನು ತಪ್ಪಿಸಿ. ಸೀತಾಫಲದಲ್ಲಿ ಸಾಕಷ್ಟು ಫೈಬರ್ ಇದೆ. ಹಲವು ಬಾರಿ ಇದನ್ನು ಅತಿಯಾಗಿ ತಿನ್ನುವುದರಿಂದ ಹೊಟ್ಟೆ ನೋವು, ಭೇದಿ ಮತ್ತು ಗ್ಯಾಸ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ- Beauty Tips: ಗುಲಾಬಿ ದಳದ ಪುಡಿ ಬಳಸುವುದರಿಂದ ಸಿಗುತ್ತೆ ಈ 4 ಅದ್ಭುತ ಸೌಂದರ್ಯ ಪ್ರಯೋಜನ
ಸೀತಾಫಲವನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ:
ಸೀತಾಫಲದಲ್ಲಿ ಬಹಳಷ್ಟು ಕಬ್ಬಿಣದ ಅಂಶವಿದೆ, ಆದ್ದರಿಂದ ಸೀತಾಫಲವನ್ನು ಅಧಿಕ ಪ್ರಮಾಣದಲ್ಲಿ ತಿನ್ನಬೇಡಿ. ಇದನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ವಾಂತಿ ಮತ್ತು ವಾಕರಿಕೆಯಂತಹ ಸಮಸ್ಯೆಗಳು ಉಂಟಾಗಬಹುದು.
ನಿಮಗೆ ಕಡಿಮೆ ರಕ್ತದೊತ್ತಡದ ಸಮಸ್ಯೆ (Low Blood Pressure) ಇದ್ದರೆ, ಸೀತಾಫಲವನ್ನು (Custard Apple) ತಿನ್ನಬೇಡಿ ಅಥವಾ ತಿಂದರೂ ಸೀಮಿತ ಪ್ರಮಾಣದಲ್ಲಿ ತಿನ್ನುವುದು ಒಳ್ಳೆಯದು. ಇದು ರಕ್ತದೊತ್ತಡವನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡುವ ಮೂಲಕ ತಲೆತಿರುಗುವಿಕೆ, ಮೂರ್ಛೆ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ತೂಕ ಹೆಚ್ಚಾಗಬಹುದು:
ಸೀತಾಫಲ ಕ್ಯಾಲೋರಿಗಳಿಂದ ತುಂಬಿರುತ್ತದೆ, ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು (Weight Loss) ಬಯಸಿದರೆ, ಸೀತಾಫಲವನ್ನು ಹೆಚ್ಚು ತಿನ್ನಬೇಡಿ. ಇದನ್ನು ತಿನ್ನುವುದರಿಂದ ನೀವು ತೂಕ ಹೆಚ್ಚಿಸಿಕೊಳ್ಳಬಹುದು. ಇದು ಉತ್ತಮ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ, ಇದು ನಿಮ್ಮ ತೂಕವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
ಇದನ್ನೂ ಓದಿ- Benefits and Harms of Pani Puri: ನೀವೂ ಕೂಡ ಗೋಲ್ಗಪ್ಪ ಪ್ರಿಯರೇ! ಅದರ ಅನುಕೂಲ- ಅನಾನುಕೂಲಗಳ ಬಗ್ಗೆಯೂ ಗೊತ್ತಿರಲಿ
ಬೀಜಗಳು ವಿಷಕಾರಿ:
ಸೀತಾಫಲದ ಬೀಜಗಳು ವಿಷಕಾರಿ, ಆದ್ದರಿಂದ ಸೀತಾಫಲವನ್ನು ತಿನ್ನುವಾಗ ಬೀಜಗಳನ್ನೂ ತಿನ್ನಬಾರದು ಎಂಬುದನ್ನು ನೆನಪಿನಲ್ಲಿಡಿ. ಸೀತಾಫಲ ಬೀಜಗಳು ಚರ್ಮದ ಮೇಲೆ, ವಿಶೇಷವಾಗಿ ಕಣ್ಣುಗಳ ಮೇಲೆ ವಿಷಕಾರಿ ಪರಿಣಾಮವನ್ನು ಬೀರುತ್ತವೆ. ಅಧ್ಯಯನದ ಪ್ರಕಾರ, ನೀವು ಸೀತಾಫಲದ ಪುಡಿಯನ್ನು ಬಳಸಿದರೆ, ಅದು ತೀವ್ರವಾದ ನೋವು ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡಬಹುದು ಎಂದು ತಿಳಿದುಬಂದಿದೆ.
ಸೀತಾಫಲ ತಿನ್ನುವುದರಿಂದಾಗುವ ಲಾಭಗಳು (Benefits Of Custard Apple) :
ಪೌಷ್ಟಿಕಾಂಶ ಹೆಚ್ಚಿರುವ ಸೀತಾಫಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ಗಳು ಇವೆ. ತಜ್ಞರ ಪ್ರಕಾರ, ಇದು ಕ್ಯಾನ್ಸರ್ ನಂತಹ ಗಂಭೀರ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೀತಾಫಲದಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ನಂತಹ ಪೋಷಕಾಂಶಗಳ ಕಾರಣ, ಇದನ್ನು ತಿನ್ನುವುದು ಗರ್ಭಿಣಿ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಜೀ ಹಿಂದೂಸ್ಥಾನ್ ಕನ್ನಡ ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ