ನವದೆಹಲಿ: ಪ್ರತಿ ತಿಂಗಳ ಕೃಷ್ಣಪಕ್ಷದ ಕೊನೆಯ ತಿಥಿಯಂದು ಅಮಾವಾಸ್ಯೆ ಇರುತ್ತದೆ. ಈ ಅಮಾವಾಸ್ಯೆಯನ್ನು ಮಾಸದ ಹೆಸರಿನಿಂದ ಗುರುತಿಸಲಾಗುತ್ತದೆ. ವೈಶಾಖ ಮಾಸದ ಅಮಾವಾಸ್ಯೆಯನ್ನು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ದಿನ ಶನಿವಾರ ಬಂದ ಕಾರಣ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈ ಬಾರಿಯ ವೈಶಾಖ ಅಮವಾಸ್ಯೆಯು ಏಪ್ರಿಲ್ 30, ಅಂದರೆ ಶನಿವಾರದಂದು ಇರಲಿದೆ ಶನಿವಾರವಾದ್ದರಿಂದ ಇದನ್ನು ಶನಿಶ್ಚರಿ ಅಮಾವಾಸ್ಯೆ ಎಂದು ಕೂಡ ಕರೆಯಲಾಗುತ್ತದೆ.
ಈ ದಿನದಂದು ನ್ಯಾಯದ ದೇವರು ಶನಿ ದೇವರನ್ನು ವಿಧಿವಿಧಾನಗಳಿಂದ ಪೂಜಿಸಲಾಗುತ್ತದೆ.ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಲೆಕ್ಕಾಚಾರ ಇಡುತ್ತಾನೆ ಮತ್ತು ಅವುಗಳ ಆಧಾರದ ಮೇಲೆ ಫಲಗಳನ್ನು ನೀಡುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಶ್ಚರಿ ಅಮಾವಾಸ್ಯೆಯ ದಿನದಂದು ಕೆಲವು ಉಪಾಯಗಳನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ. ಈ ಉಪಾಯಗಳನ್ನು ಅನುಸರಿಸುವ ಮೂಲಕ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ-Camphor Benefits : ಸರಪದೋಷ ಮತ್ತು ವಾಸ್ತು ದೋಷ ನಿವಾರಣೆಗೆ ಬಳಸಿ ಕರ್ಪೂರ!
ಶನಿಶ್ಚರಿ ಅಮವಾಸ್ಯೆಯ ದಿನ ಈ ಉಪಾಯಗಳನ್ನು ಅನುಸರಿಸಿ
>> ಶನಿ ಅಮಾವಾಸ್ಯೆಯ ದಿನ ಶನಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಶ್ರೀ ಆಂಜನೇಯನನ್ನು ಕೂಡ ಪೂಜಿಸುವುದು ಮಂಗಳಕರವಾಗಿದೆ. ಈ ದಿನದಂದು ಬೂಂದಿ ಲಡ್ಡುಗಳು, ಬೇಳೆಕಾಳು ಮತ್ತು ಬೆಲ್ಲದ ಪ್ರಸಾದವನ್ನು ನೀಡುವ ಮೂಲಕ ಬಜರಂಗಬಲಿ ಹನುಮನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.
>> ನೀವು ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿಪಡೆಯಲು, ಶನಿಶ್ಚರಿ ಅಮಾವಾಸ್ಯೆಯ ದಿನ ಸಪ್ತಮುಖಿ ರುದ್ರಾಕ್ಷವನ್ನು ಗಂಗಾಜಲದಿಂದ ಅಭಿಷೇಕ ಮಾಡಿ ಮತ್ತು "ಓಂ ಪ್ರಾಂ ಪ್ರೇಂ ಪ್ರೌನ್ ಸಹ ಶನೈಶ್ಚರಾಯ ನಮಃ" ಅಥವಾ "ಓಂ ಶನಿಶ್ಚರಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸಿ. ನಂತರ ಅದನ್ನು ಧರಿಸಿ.
>> ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಗಾಗಿ ಶನಿ ಅಮವಾಸ್ಯೆಯ ಒಂದು ದಿನ ಮೊದಲು, ಅಂದರೆ ಶುಕ್ರವಾರದಂದು ಕಪ್ಪು ಬಟ್ಟೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಕಪ್ಪು ಉದ್ದಿನ ಬೇಳೆಯನ್ನು ಕಟ್ಟಿ, ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಶನಿ ಅಮಾವಾಸ್ಯೆಯ ದಿನ ಅದನ್ನು ಶನಿ ದೇವಸ್ಥಾನದಲ್ಲಿ ಇರಿಸಿ. ಇದರೊಂದಿಗೆ, ಸಂಜೆ ಒಂದು ಕಾಡಿಗೆ ಡಬ್ಬಿಯನ್ನು ನಿಮ್ಮ ಇಡೀ ದೇಹದ ಮೇಲಿಂದ 9 ಬಾರಿ ನಿವಾಳಿಸಿ ಅಥವಾ ಇಳಿಸಿ ಅದನ್ನು ಜನವಿರದ ಸ್ಥಳದಲ್ಲಿ ಹುದುಗುವುದರಿಂದ ಶೀಘ್ರದಲ್ಲೇ ಪರಿಣಾಮ ಗೋಚರಿಸುತ್ತದೆ.
>> ಶನಿ ಅಮಾವಾಸ್ಯೆಯ ದಿನ ಶನಿದೇವರ ಆರಾಧನೆಯ ಜೊತೆಗೆ ಶನಿ ಚಾಲೀಸ ಮತ್ತು ದಶರಥನ ಶನಿ ಸ್ತೋತ್ರವನ್ನು ಪಠಿಸುವುದರಿಂದ ಆರ್ಥಿಕ ಲಾಭ ಪ್ರಾಪ್ತಿಯಾಗುತ್ತದೆ.
>> ಈ ವಿಶೇಷ ದಿನದಂದು ಶನಿ ದೇವರಿಗೆ ಸಾಸಿವೆ ಎಣ್ಣೆ, ಕಪ್ಪು ಎಳ್ಳು ಮತ್ತು ನೀಲಿ ಹೂವುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೋಷ, ಸಾಡೇಸಾತಿ ಮತ್ತು ಎರಡೂ ವರ್ಷಗಳ ಶನಿ ದೆಸೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ-ಗೃಹ ಪ್ರವೇಶದ ವೇಳೆ ಈ ನಿಯಮಗಳನ್ನು ನೆನಪಿನಲ್ಲಿಡಿ, ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿದೆ
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.