Shani Totke: ಜೀವನದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುತ್ತದೆ ಶನಿಯ ಈ ತಂತ್ರಗಳು

Shani Totke: ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಎಂಬ ಮಾತಿದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಶನಿ ದೋಷವಿದ್ದರೆ ಕಷ್ಟಗಳು ಬೆಂಬಿಡದೆ ಕಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಶನಿಯ ಕೆಲವು ತಂತ್ರಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಕೆಲವು ಪರಿಹಾರಗಳ ಬಗ್ಗೆ ತಿಳಿಯಿರಿ.

Written by - Yashaswini V | Last Updated : Nov 15, 2022, 02:37 PM IST
  • ಯಾರಿಗೂ ಸಹ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಬಾರದು.
  • ಶನಿವಾರ ಕಪ್ಪು ಚರ್ಮದ ಬೂಟುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.
  • ಇಲ್ಲದಿದ್ದರೆ, ಜೀವನದಲ್ಲಿ ತೊಂದರೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.
Shani Totke: ಜೀವನದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುತ್ತದೆ ಶನಿಯ ಈ ತಂತ್ರಗಳು  title=
Shani Upay

Shani Totke: ಶನಿ ದೇವನ ಅನುಗ್ರಹವು ಕಡು ಬಡವನನ್ನೂ ಸಹ ರಾಜನನ್ನಾಗಿ ಮಾಡುತ್ತದೆ. ಮತ್ತೊಂದೆಡೆ, ವ್ಯಕ್ತಿಯ ಜಾತಕದಲ್ಲಿ ಶನಿ ದೇವನು ಅಶುಭ ಸ್ಥಾನದಲ್ಲಿದ್ದರೆ ಉತ್ತಮ ಜೀವನವೂ ಸಹ ಹಾಳಾಗುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದಲೇ ಪ್ರತಿಯೊಬ್ಬರೂ ಶನಿದೇವನನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅದರಲ್ಲೂ ವಿಶೇಷವಾಗಿ ತಮ್ಮ ಜಾತಕದಲ್ಲಿ ಶನಿ ದೋಷವನ್ನು ಹೊಂದಿರುವವರು ಅಥವಾ ಅವರ ಜಾತಕದಲ್ಲಿ ಶನಿಯು ದುರ್ಬಲ ಸ್ಥಾನದಲ್ಲಿದ್ದರೆ, ಅವರು ಖಂಡಿತವಾಗಿಯೂ ಶನಿಯ ಪರಿಹಾರಗಳು ಅಥವಾ ತಂತ್ರಗಳನ್ನು ಮಾಡುವುದರಿಂದ ಪರಿಹಾರ ಪಡೆಯಬಹುದು. ಜ್ಯೋತಿಷ್ಯದಲ್ಲಿ ಶನಿಯನ್ನು ಮೆಚ್ಚಿಸಲು ಸುಲಭವಾದ ಮಾರ್ಗಗಳನ್ನು ಹೇಳಲಾಗಿದೆ. ಅಂತಹ ಕೆಲವು ಕ್ರಮಗಳು ಪಾದರಕ್ಷೆಗಳಿಗೆ ಸಂಬಂಧಿಸಿವೆ. ಪಾದರಕ್ಷೆಗಳಿಗೆ ಸಂಬಂಧಿಸಿದ ಈ ಪರಿಹಾರದಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.

ಜೀವನದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುತ್ತದೆ ಶನಿಯ ಈ ತಂತ್ರಗಳು:
- ನಿಮ್ಮ ಜಾತಕದಲ್ಲಿ ಶನಿಯು ಅಶುಭ ಸ್ಥಾನದಲ್ಲಿದ್ದರೆ ಅಥವಾ  ಸಾಡೇ ಸಾತಿ ಶನಿ ಪ್ರಭಾವ ಹೊಂದಿರುವ ರಾಶಿಯ ಜನರು ಶನಿವಾರದಂದು ಅಪ್ಪಿತಪ್ಪಿಯೂ ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬಾರದು. 

- ಪ್ರತಿಯೊಬ್ಬ ವ್ಯಕ್ತಿಯು ಶನಿವಾರ ಕಪ್ಪು ಚರ್ಮದ ಬೂಟುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ಜೀವನದಲ್ಲಿ ತೊಂದರೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Vastu Shastra: ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಡುವುದರಿಂದ ಬಡತನವನ್ನು ಆಹ್ವಾನಿಸಿದಂತೆ, ಎಚ್ಚರ!

- ಕಿತ್ತು ಹೋಗಿರುವ ಬೂಟುಗಳು ಅಥವಾ ಚಪ್ಪಲಿಗಳನ್ನು ಎಂದಿಗೂ ಧರಿಸಬೇಡಿ. ಅದರಲ್ಲೂ ಇಂತಹ ಕೆಟ್ಟ ಸ್ಥಿತಿಯಲ್ಲಿರುವ ಶೂ ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ಧರಿಸಬೇಡಿ. ಶುಭ ಕಾರ್ಯಗಳಿಗೆ ಅಥವಾ ಸಂದರ್ಶನಕ್ಕೆ ಶುಭ್ರವಾದ ಮತ್ತು ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ಧರಿಸಿ ಹೋಗಿ, ಇಲ್ಲದಿದ್ದರೆ ನಿಮ್ಮ ದಾರಿಯಲ್ಲಿ ಬರುವ ಅವಕಾಶವೂ ಕಳೆದುಹೋಗುವ ಸಾಧ್ಯತೆ ಇರುತ್ತದೆ. 

- ಧರ್ಮಗ್ರಂಥಗಳ ಪ್ರಕಾರ, ಯಾರಿಗೂ ಸಹ ಎಂದಿಗೂ ಶೂ ಮತ್ತು ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಬಾರದು. ಆದರೆ, ಸಾಡೇ ಸಾತಿ ಶನಿ ಅಥವಾ ಶನಿ ಧೈಯಾ ಪ್ರಭಾವದಿಂದ ನೀವು ತೊಂದರೆಗೀಡಾಗಿದ್ದರೆ, ಶನಿವಾರದಂದು ನಿರ್ಗತಿಕರಿಗೆ ಕಪ್ಪು ಚಪ್ಪಲಿ ಅಥವಾ ಬೂಟುಗಳನ್ನು ದಾನ ಮಾಡಿ. ಈ ಪರಿಹಾರವು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ. 

- ಶನಿಯ ಆಶೀರ್ವಾದ ಪಡೆಯಲು ಅತ್ಯಂತ ಸುಲಭವಾದ ಮಾರ್ಗವೆಂದರೆ ಕಪ್ಪು ಪಾದರಕ್ಷೆ ಅಥವಾ ಚಪ್ಪಲಿಯನ್ನು ಧರಿಸಿ ಹನುಮಾನ್ ದೇವಸ್ಥಾನ ಅಥವಾ ಶನಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪಾದರಕ್ಷೆ ಮತ್ತು ಚಪ್ಪಲಿಯನ್ನು ಬಿಡುವುದು. ಇದರಿಂದ ಶನಿಯ ಬಾಧೆ ದೂರವಾಗುತ್ತದೆ. ಅಡೆತಡೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ-  Guru Margi Effect: ನವೆಂಬರ್ 24ರಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ

- ಇದಲ್ಲದೆ, ನೀವು ಬಳಸದ ಕಿತ್ತುಹೋಗಿರುವ ಹಳೆಯ ಬೂಟುಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ವಾಸ್ತು ದೋಷವನ್ನು ಉಂಟುಮಾಡುತ್ತದೆ ಮತ್ತು ಶನಿಯು ಸಹ ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News