Periods Issue: ಮುಟ್ಟಿನ ಸಮಯದಲ್ಲಿ ಅಪ್ಪಿ ತಪ್ಪಿ ಈ ತಪ್ಪುಗಳನ್ನು ಮಾಡಬೇಡಿ...!

Periods Hygiene Mistakes: ಪ್ರತಿ ತಿಂಗಳಲ್ಲಿ ಸರಗವಾಗಿ ಮುಟ್ಟಾದರೇ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಅದೇ ರೀತಿ ಮುಟ್ಟಿನ ಸಮಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡುವುದರಿಂದ ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಿರಿಯಡ್ಸ್ ವೇಳೆ ಕೆಲವೊಂದು ತಪ್ಪು ಮಾಡದಿರುವುದು ಬಹಳ ಮುಖ್ಯವಾಗಿದೆ. 

Written by - Zee Kannada News Desk | Last Updated : Jun 16, 2023, 02:28 PM IST
  • ಋತುಚಕ್ರ ಎಂಬುವುದು ಮಹಿಳೆ ಆರೋಗ್ಯ ಒಂದು ಅವಿಭ್ಯಾಜ್ಯ ಅಂಗ
  • ಮುಟ್ಟಿನ ಸಮಯದಲ್ಲಿ ವಹಿಸಬೇಕಾದ ಜವಾಬ್ದಾರಿಗಳು
  • ಪಿರಿಯಡ್ಸ್ ವೇಳೆ ಸ್ವಚ್ಛತೆ ಬಹಳ ಮುಖ್ಯ
Periods Issue: ಮುಟ್ಟಿನ ಸಮಯದಲ್ಲಿ ಅಪ್ಪಿ ತಪ್ಪಿ ಈ ತಪ್ಪುಗಳನ್ನು ಮಾಡಬೇಡಿ...! title=

Health Tips: ಋತುಚಕ್ರ ಎಂಬುವುದು ಮಹಿಳೆ ಆರೋಗ್ಯದ ಒಂದು ಅವಿಭ್ಯಾಜ್ಯ ಅಂಗವಾಗಿದೆ. ಪ್ರತಿ ತಿಂಗಳಲ್ಲಿ ಸರಗವಾಗಿ ಮುಟ್ಟಾದರೇ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ಅದೇ ರೀತಿ ಮುಟ್ಟಿನ ಸಮಯಲ್ಲಿ ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡುವುದರಿಂದ ಆ ಸಮಯದಲ್ಲಿ ಇನ್ನಷ್ಟು ಹೊಟ್ಟೆ ನೋವು, ಇನ್ನಿತರ ಸಮಸ್ಯೆ ಕಾಡಬಹುದು. ಆದ್ದರಿಂದ ಪಿರಿಯಡ್ಸ್ ವೇಳೆ ಜಾಗೃತೆ ವಹಿಸುವುದು ಮುಖ್ಯವಾಗಿದೆ. 

ಋತುಚಕ್ರ ನಿಭಾಯಿಸಬೇಕಾದ ಕ್ರಮಗಳು
ಪ್ಯಾಡ್ ಬದಲಾವಣೆ
ನಾವು ಕೆಲಸ ಕಾರ್ಯಗಳಲ್ಲಿ ಎಷ್ಟೇ ಬ್ಯೂಸಿಯಾಗಿದ್ದರೂ ಪ್ಯಾಡ್ ಬದಲಾಯಿಸುತ್ತಿರಬೇಕು. ಒಂದೇ  ಪ್ಯಾಡ್ ನಲ್ಲಿ ದಿನವೆಲ್ಲಾ ಕಳೆಯುವುದರಿಂದ ಇನ್ನಷ್ಟು ಹೊಟ್ಟೆ ನೋವು ಆಗಬಹುದು. 

ಸ್ವಚ್ಛತೆ ಕಾಪಾಡಿಕೊಳ್ಳಿ
ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಆಗುವುದು ಸಹಜ. ಹೀಗಾಗಿ ದೇಹವನ್ನು ಶುಚಿ ಇಟ್ಟು ಕೊಂಡರೇ ಸಾಂಕ್ರಮಿಕ ತೊಂದರೆಯಿಂದ ಪರಾಗಬಹುದು.

ಇದನ್ನೂ ಓದಿ: Weight Loss Tipes: ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕೆ ಹಾಗಿದ್ದರೆ ಇಲ್ಲಿದೆ ಸಿಂಪಲ್‌ ಟಿಪ್ಸ್..!

ಈ ಸಮಯದಲ್ಲಿ, ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ರಕ್ತಸ್ರಾವವು ಅಹಿತಕರ ವಾಸನೆ  ಉಂಟು ಮಾಡಬಹುದು. ಆದರೆ ಇದು ಸೋಂಕು ಅಲ್ಲ. ಬದಲಿಗೆ, ಶುಚಿಗೊಳಿಸುವಿಕೆಯು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಧಿಕ ಕಾಫಿ / ಪಾನೀಯ ಸೇವನೆ ಬೇಡ
 ಪಿರಿಯಡ್ಸ್ ಆದಾಗ ಅತೀ ಕಾಫಿ ಸೇವನೆಯಿಂದ ಮಾಡಿದರೇ ದೇಹವು ಉಷ್ಣಾಂಶಕ್ಕೆ ತಿರುಗಿ ಹೊಟ್ಟೆ ನೋವು ಹೆಚ್ಚಿಸುತ್ತದೆ. 

ಇದನ್ನೂ ಓದಿ: Sunflower Seeds: ಸೂರ್ಯಕಾಂತಿ ಹೂ, ಬೀಜಗಳ ಪ್ರಯೋಜನ ಅಪಾರ...!

ಲೈಂಗಿಕ ಕ್ರಿಯೆ ಬೇಡ
ಮುಟ್ಟಿನ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೇ ರಕ್ತಸ್ರಾವ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. 

ಔಷಧಿ ಸೇವನೆ ತಪ್ಪಿಸಿ

ಋತುಚಕ್ರ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಹೊಟ್ಟೆ ನೋವು ನಿಯಂತ್ರಣಕ್ಕೆಂದು ಮಾತ್ರೆ ಔಷಧಿಗಳನ್ನು ಸೇವಿಸುತ್ತಾರೆ. ಆ ರೀತಿ ಮಾಡುವುದರಿಂದ ಆ ತಕ್ಷಣಕ್ಕೆ ನೋವು ಕಡಿಮೆಯಾದರೂ ಕೆಲವು ಸಮಯ ಅಥವಾ ಮದುವೆ ಬಳಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News