Raksha Bandhan: ಪ್ರೀತಿಯ ಅಣ್ಣನಿಗೆ ರಾಖಿ ಕೊಳ್ಳುವಾಗ ಈ ವಿಷಯ ಗಮನದಲ್ಲಿರಲಿ..!

ಸಹೋದರನಿಗೆ ಹತ್ತಿ ದಾರದ ರಕ್ಷಣಾ ದಾರವು ಉತ್ತಮವಾಗಿರುತ್ತದೆ. ರಕ್ಷಾ ದಾರ ಲಭ್ಯವಿಲ್ಲದಿದ್ದರೆ ಕಲವಾ ಅಂದರೆ ಕೆಂಪುದಾರ ಕಟ್ಟಬಹುದು.

Written by - Puttaraj K Alur | Last Updated : Jul 28, 2022, 01:49 PM IST
  • ಸಹೋದರಿಗೆ ಸಹೋದರ ರಕ್ಷಣೆಯ ಭರವಸೆ ನೀಡುವುದೇ ರಕ್ಷಾ ಬಂಧನ
  • ಪ್ರೀತಿಯ ಸಹೋದರನಿಗೆ ಯಾವ ರೀತಿಯ ರಾಖಿ ಕಟ್ಟಬೇಕು ಗೊತ್ತಾ..?
  • ರಕ್ಷಾ ಬಂಧನ ಹಬ್ಬದ ನಿಯಮಗಳು ಮತ್ತು ಸಂಪ್ರದಾಯಗಳ ಬಗ್ಗೆ ತಿಳಿಯಿರಿ
Raksha Bandhan: ಪ್ರೀತಿಯ ಅಣ್ಣನಿಗೆ ರಾಖಿ ಕೊಳ್ಳುವಾಗ ಈ ವಿಷಯ ಗಮನದಲ್ಲಿರಲಿ..! title=
ರಕ್ಷಾ ಬಂಧನ ಹಬ್ಬದ ನಿಯಮ

ನವದೆಹಲಿ: ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಶಿವ ಹಾಲಾಹಲವನ್ನು ಸೇವಿಸುವುದರ ಜೊತೆಗೆ ಇಡೀ ಪ್ರಕೃತಿಯನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮಾತುಗಳು, ಸ್ವಭಾವ, ವ್ಯಕ್ತಿ, ಸಂಬಂಧ, ರಾಜ್ಯ ಅಥವಾ ಕುಟುಂಬದ ರಕ್ಷಣೆಯ ಅಂಶವು ಶಿವ ಅಂಶವಾಗಿರುತ್ತದೆ. ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ಇದರ ಹಿಂದೆ ಶಿವನ ಅಂಶವೂ ಇದೆ. ನಂಬಿಕೆಯುಳ್ಳವರು, ನಾಸ್ತಿಕರು, ಹತ್ತಿರ ಮತ್ತು ದೂರವಿರುವ ಯಾವುದೇ ಜೀವಿಯನ್ನು ಶಿವ ರಕ್ಷಿಸುತ್ತಾನೆ.

ಅದೇ ರೀತಿ ಮದುವೆಯ ನಂತರ ಅತ್ತಿಗೆಯ ಮನೆಗೆ ಹೋದಾಗ ಅಥವಾ ಕಷ್ಟದಲ್ಲಿ & ಅಸಹಾಯಕತೆಯಲ್ಲಿದ್ದಾಗ ರಕ್ಷಣೆಯ ಭರವಸೆ ಪೂರೈಸಲು ಸಹೋದರನ ರೂಪದಲ್ಲಿ ಶಿವ ಯಾವಾಗಲೂ ಸಿದ್ಧನಾಗಿರುತ್ತಾನೆ. ರಕ್ಷಾ ಬಂಧನ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ರಾಖಿಗಳು ಲಗ್ಗೆ ಇಟ್ಟಿವೆ. ಈಗ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ಯಾವ ರಾಖಿ ಕಟ್ಟಬೇಕೆಂದು ಯೋಚಿಸುತ್ತಿರುತ್ತಾರೆ. ಈ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Feng Shui Shastra: ವ್ಯಾಪಾರ ವೃದ್ಧಿಗಾಗಿ ಮನೆಗೆ ಈ ಮೀನಿನ ವಿಗ್ರಹ ತನ್ನಿ

ರಾಖಿ ಖರೀದಿಸುವಾಗ ಬಣ್ಣದ ಬಗ್ಗೆ ಗಮನಹರಿಸಿ

ಹತ್ತಿ ದಾರದ ರಕ್ಷಣಾ ದಾರವು ಉತ್ತಮವಾಗಿರುತ್ತದೆ. ರಕ್ಷಾ ದಾರ ಲಭ್ಯವಿಲ್ಲದಿದ್ದರೆ ಕಲವಾ ಅಂದರೆ ಕೆಂಪುದಾರ ಕಟ್ಟಬಹುದು. ರಾಖಿ ಕೊಳ್ಳುವಾಗ ಅದರಲ್ಲಿ ಕಪ್ಪು ಅಥವಾ ಕಂದು ಬಣ್ಣ ಬಳಸಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ರಾಖಿ ದುಬಾರಿಯಾಗಿರಲಿ ಅಥವಾ ಸಾಮಾನ್ಯವಾಗಿರಲಿ ಅದರಲ್ಲಿರುವ ಬಣ್ಣದ ಬಗ್ಗೆ ನೀವು ಗಮನಹರಿಸಬೇಕು. ರಕ್ಷಾ ದಾರವನ್ನು ಸರಿಯಾಗಿ ಕಟ್ಟಬೇಕು. ಸಹೋದರಿಯರಿಗೆ ತಿಲಕ ಹಚ್ಚುವಾಗ ಮತ್ತು ರಾಖಿ ಕಟ್ಟುವಾಗ ಸಹೋದರರು ಖಾಲಿ ಕೈಯಲ್ಲಿರಬಾರದು. ಸಹೋದರಿಗಾಗಿ ಉಡುಗೊರೆ ಮತ್ತು ಹಣ ನೀಡಬೇಕು. ನಿಮ್ಮ ಸಹೋದರಿಯ ಮೇಲಿನ ಪ್ರೀತಿ ತೋರಿಸಲು, ಭದ್ರತೆಯ ಬಗ್ಗೆ ಸಕಾರಾತ್ಮಕತೆ ತುಂಬಲು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ , ನಾಲ್ಕು ತಿಂಗಳು ಗುರು ನೀಡಲಿದ್ದಾನೆ ಯಶಸ್ಸು

ಸಹೋದರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಿರಿ

ಸಹೋದರರ ನಡುವಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ರಾಖಿ ಕಟ್ಟಿದ ಬಳಿಕ ಸಹೋದರನಿಗೆ ಉತ್ತಮ ಸಿಹಿತಿಂಡಿ ನೀಡಬೇಕು. ಸಿಹಿತಿಂಡಿಗಳ ಪೈಕಿ ಕಪ್ಪು ಗುಲಾಬ್ ಜಾಮೂನ್ ಮತ್ತು ಚಾಕೊಲೇಟ್ ಮುಂತಾದವುಗಳಿಗೆ ಗಾಢ ಬಣ್ಣ ಬಳಸಿರಬಾರದು. ಸಹೋದರನಿಗೆ ಹಣ್ಣುಗಳನ್ನು ತಿನ್ನಿಸುವುದು ಇನ್ನೂ ಉತ್ತಮ. ತಿಲಕ ಹಚ್ಚಿದ ಬಳಿಕ ಸಹೋದರಿ ತನ್ನ ಕೈಯಿಂದಲೇ ಸಹೋದರನಿಗೆ ಸಿಹಿ ತಿನ್ನಿಸಬೇಕು. ಆಶೀರ್ವಾದದ ವಿಷಯದಲ್ಲಿ ನಿಮ್ಮ ಕುಟುಂಬದ ಸಂಪ್ರದಾಯ ಅನುಸರಿಸಿ. ತಂಗಿಯರ ಪಾದ ಮುಟ್ಟುವ ಸಂಪ್ರದಾಯ ನಿಮ್ಮಲ್ಲಿದ್ದರೆ ಖಂಡಿತ ಪಾದ ಮುಟ್ಟಿ ರಕ್ಷಣೆಯ ಭರವಸೆ ನೀಡಿ. ತಂಗಿಯು ಸಹೋದರನ ಪಾದ ಸ್ಪರ್ಶಿಸಬೇಕೆಂಬ ನಿಯಮವಿದ್ದರೆ ಆಶೀರ್ವಾದ ನೀಡಿ ರಕ್ಷಣೆಯ ಭರವಸೆ ನೀಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News