Rahu Gochar 2022: ರಾಹು ಸಂಕ್ರಮಣದಿಂದ ಈ 3 ರಾಶಿಗಳ ‘ಅದೃಷ್ಟ’ ಹೊಳೆಯಲಿದೆ

ವೈದಿಕ ಜ್ಯೋತಿಷ್ಯದ ಪ್ರಕಾರ ನೆರಳು ಗ್ರಹ ರಾಹು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 18 ತಿಂಗಳ ನಂತರ ರಾಹು ಮಾರ್ಚ್ 17 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದೆ.

Written by - Puttaraj K Alur | Last Updated : Mar 13, 2022, 07:17 AM IST
  • ಮಾರ್ಚ್ 17ರಂದು ರಾಹು ರಾಶಿಯನ್ನು ಬದಲಾಯಿಸಲಿದೆ
  • 18 ತಿಂಗಳ ಬಳಿಕ ಮೇಷ ರಾಶಿಯನ್ನು ಪ್ರವೇಶಿಸಲಿರುವ ರಾಹು
  • 3 ರಾಶಿಯವರಿಗೆ ರಾಹು ಸಂಕ್ರಮಣ ಬಹಳ ಶುಭಕರವಾಗಿದೆ
Rahu Gochar 2022: ರಾಹು ಸಂಕ್ರಮಣದಿಂದ ಈ 3 ರಾಶಿಗಳ ‘ಅದೃಷ್ಟ’ ಹೊಳೆಯಲಿದೆ title=
ಮಾರ್ಚ್ 17ರಂದು ರಾಹು ರಾಶಿ ಬದಲಾಯಿಸಲಿದೆ

ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ನೆರಳು ಗ್ರಹ ರಾಹು ರಾಶಿಚಕ್ರ(Rahu Gochar 2022)ವನ್ನು ಬದಲಾಯಿಸಲಿದ್ದಾನೆ. 18 ತಿಂಗಳ ನಂತರ ರಾಹು ಮಾರ್ಚ್ 17 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದೆ. ರಾಹುವು ವಿದೇಶಿ ಪ್ರಯಾಣ, ಸಾಂಕ್ರಾಮಿಕ, ರಾಜಕೀಯ, ಪ್ರಯಾಣ ಇತ್ಯಾದಿಗಳಿಗೆ ಕಾರಣ ಗ್ರಹವಾಗಿದೆ. ರಾಹುವಿನ ಸಂಚಾರ(Rahu Zodiac Change 2022)ವು ಎಲ್ಲಾ 12 ರಾಶಿಚಕ್ರಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಜನರಿಗೆ ಈ ಬದಲಾವಣೆಯು ಜೀವನದಲ್ಲಿ ದೊಡ್ಡ ಪ್ರಕ್ಷುಬ್ಧತೆಯನ್ನು ಸಾಬೀತುಪಡಿಸುತ್ತದೆ. ಅದೇ ರೀತಿ ಈ ರಾಹು ಸಂಕ್ರಮ(Rahu Zodiac Change 2022)ವು 3 ರಾಶಿಯ ಜನರಿಗೆ ಪ್ರಚಂಡ ಪ್ರಯೋಜನಗಳನ್ನು ನೀಡುತ್ತದೆ.

ರಾಹು ಈ ರಾಶಿಗಳ ಅದೃಷ್ಟ ಬೆಳಗಿಸುತ್ತದೆ

ಮಿಥುನ ರಾಶಿ (Gemini): ರಾಹುವಿನ ಸಂಚಾರವು ಮಿಥುನ ರಾಶಿಯ 11ನೇ ಮನೆಯಲ್ಲಿ ಅಂದರೆ ಆದಾಯದ ಮನೆಯಲ್ಲಿ ಇರುತ್ತದೆ. ಆದ್ದರಿಂದ ಈ ಸಂಕ್ರಮವು ಮಿಥುನ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ತರುತ್ತದೆ. ಇವರು ಒಂದಕ್ಕಿಂತ ಹೆಚ್ಚು ಆದಾಯ ಮಾರ್ಗಗಳ ಮೂಲಕ ಹಣ ಪಡೆಯುತ್ತಾರೆ. ಬಡ್ತಿ-ಹೆಚ್ಚಳವನ್ನೂ ಪಡೆಯುವ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಗಳಿಸುವರು. ಹೂಡಿಕೆಯೂ ಸಾಕಷ್ಟು ಲಾಭ ತರಲಿದೆ.

ಇದನ್ನೂ ಓದಿ: Holi 2022 : ಮನೆಯಲ್ಲಿ ಹಿಟ್ಟಿನ ದೀಪದ ಬೆಳಗಿಸಿ ಶ್ರೀಮಂತರಾಗಿ, ನಿಮ್ಮ ಹಳೆಯ ಸಾಲಗಳು ತಿರುತ್ತವೆ!

ಕರ್ಕಾಟಕ ರಾಶಿ (Cancer): ಕರ್ಕಾಟಕದ 9ನೇ ಮನೆಯಲ್ಲಿ ರಾಹು ಸಾಗಲಿದ್ದಾನೆ. ಈ ಮನೆ ಅದೃಷ್ಟ ಮತ್ತು ವಿದೇಶ ಪ್ರವಾಸದ ಮನೆಯಾಗಿದೆ. ಆದ್ದರಿಂದ ಮಾರ್ಚ್ 17ರ ನಂತರ ಈ ರಾಶಿಚಕ್ರದ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಜೊತೆಗೆ ಅವರು ವಿದೇಶಕ್ಕೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸಗಳು ರಾಹು ಸಂಕ್ರಮಣದ ನಂತರ ಶೀಘ್ರವೇ ಪೂರ್ಣಗೊಳ್ಳುತ್ತವೆ. ಉದ್ಯಮಿಗಳಿಗೂ ಸಾಕಷ್ಟು ಲಾಭವಾಗಲಿದೆ.

ಮೀನ ರಾಶಿ (Pisces): ಮಾತು ಮತ್ತು ಹಣದ ಮನೆಯಾದ ಮೀನದ 2ನೇ ಮನೆಯಲ್ಲಿ ರಾಹು ಸಂಕ್ರಮಿಸುತ್ತಾನೆ. ಅಂದರೆ ರಾಹು ರಾಶಿ ಬದಲಾದ ತಕ್ಷಣ ಮೀನ ರಾಶಿಯವರಿಗೆ ಅಧಿಕ ಧನಲಾಭವಾಗುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ, ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯುತ್ತೀರಿ. ನಿಮ್ಮ ಯಾರ ಬಳಿಯಾದರೂ ಸಿಕ್ಕಿ ಹಾಕಿಕೊಂಡಿದ್ದರೆ ವಾಪಸ್ ಸಿಗುತ್ತದೆ. ಇದಲ್ಲದೇ ಮಾತಿನ ಆಧಾರದಲ್ಲಿ ದೊಡ್ಡ ಕೆಲಸಗಳೂ ಸುಲಭವಾಗಿ ನಡೆಯುತ್ತವೆ. ಈ ಸಮಯವು ವೃತ್ತಿಜೀವನಕ್ಕೂ ಅನುಕೂಲಕರವಾಗಿರುತ್ತದೆ. ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ ಮತ್ತು ಗೌರವಿಸುತ್ತಾರೆ.

ಇದನ್ನೂ ಓದಿ: Maharashtra: ಇಲ್ಲಿ ಹೋಳಿ ಹಬ್ಬದ ಪ್ರಯುಕ್ತ ಅಳಿಯನಿಗೆ ಕತ್ತೆಯ ಸವಾರಿ ಮಾಡಿಸಲಾಗುತ್ತದೆ, 80 ವರ್ಷಗಳಷ್ಟು ಹಳೆ ಸಂಪ್ರದಾಯ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News