Potato For Hair Care: ಪ್ರತಿ ಹುಡುಗಿಗೂ ಉದ್ದವಾದ, ದಪ್ಪವಾಗಿರುವ ಕೂದಲು ತನ್ನದಾಗಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ನಿಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ ತುಂಬಾ ಪ್ರಯೋಜನಕಾರಿ ಆಗಿದೆ. ಆಲೂಗಡ್ಡೆ ಬಳಕೆಯಿಂದ ಉದ್ದವಾದ ಬಲವಾದ ಕೂದಲನ್ನು ಪಡೆಯುವುದು ಮಾತ್ರವಲ್ಲದೆ, ಕೂದಲಿನ ಹಲವು ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.
ಹೌದು, ತಿನ್ನಲು ಬಲು ರುಚಿಕರವಾದ ಆಲೂಗಡ್ಡೆಯು ತಲೆಹೊಟ್ಟಿನ ಸಮಸ್ಯೆ (Dandruff problem), ಕೂದಲುದುರುವ ಸಮಸ್ಯೆ (Hairfall Problem) ನಿವಾರಿಸುವ ಜೊತೆಗೆ ನಿರ್ಜೀವ ಕೂದಲಿಗೆ ಹೊಳಪನ್ನು ಕೂಡ ನೀಡಬಲ್ಲದು. ಇದಕ್ಕಾಗಿ ಆಲೂಗಡ್ಡೆಯನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಇದನ್ನೂ ಓದಿ- White Hair Remedy: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಈ ಮೂರೇ ಮೂರು ವಸ್ತು ಸಾಕು!
ಡ್ಯಾಂಡ್ರಫ್ ಸಮಸ್ಯೆ ನಿವಾರಣೆಗೆ ಆಲೂಗಡ್ಡೆ:
ನೀವು ತಲೆ ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಒಂದೆರಡು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ತುರಿದು, ಅದರ ರಸವನ್ನು ತೆಗೆಯಿರಿ. ಬಳಿಕ ಆಲೂಗಡ್ಡೆ ರಸದಲ್ಲಿ ಸ್ವಲ್ಪ ಮೊಸರು, ನಿಂಬೆ ರಸವನ್ನು ಮಿಶ್ರಣ ಮಾಡಿ ಕೊದನ್ನು ಕೂದಲಿಗೆ ಹಚ್ಚಿ. 10-15 ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಒಳ್ಳೆಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಉದ್ದ ಕೂದಲಿಗಾಗಿ:
ನೀವು ಉದ್ದ ಕೂದಲನ್ನು (Long Hair) ಪಡೆಯಲು ಬಯಸಿದರೆ ಎರಡರಿಂದ ಮೂರು ಆಲೂಗಡ್ಡೆಗಳನ್ನು ತೆಗೆದುಕೊಳ್ಳಿ. ಅದನ್ನು ಚೆನ್ನಾಗಿ ತೊಳೆದು ತುರಿದು ರಸ ತೆಗೆದುಕೊಳ್ಳಿ. ಬಳಿಕ ಆಲೂಗಡ್ಡೆ ರಶದೊಂದಿಗೆ ಎರಡು ಚಮಚ ಆಲೋವೆರಾ ಜೇಲ್ ಹಾಕಿ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀರಿ ಮಾಡುವುದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.
ಇದನ್ನೂ ಓದಿ- ಟೀ - ಕಾಫಿ ಬದಲಿಗೆ ಬೆಳಿಗ್ಗೆ ನಿಂಬೆ ನೀರು ಕುಡಿಯಿರಿ, ಹಲವಾರು ಪ್ರಯೋಜನಗಳಿವೆ.!
ಬಲವಾದ ಕೂದಲು:
ನಿಮ್ಮ ಕೂದಲು ಸ್ಟ್ರಾಂಗ್ ಆಗಿ, ಮೃದುವಾಗಿರಬೇಕು ಎಂದು ನೀವು ಬಯಸಿದರೆ ಮೊದಲು ಎರಡರಿಂದ ಮೂರು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಪೇಸ್ಟ್ ತಯಾರಿಸಿ. ಇದರೊಂದಿಗೆ ಜೇನುತುಪ್ಪ, ಮೊಟ್ಟೆಯ ಹಳದಿ ಲೋಳೆಯನ್ನು ಹಾಕಿ ಮಿಕ್ಸ್ ಮಾಡಿ. ಬಳಿಕ ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚಿ ಒಣಗಿದ ಬಳಿಕ ಶಾಂಪೂ ಮಾಡಿ. ಇದರಿಂದ ನಿಮ್ಮ ಕೂದಲು ಬಲವಾಗುವುದರ ಜೊತೆಗೆ ಕಾಂತಿಯುತವಾಗಿಯೂ ಕಾಣುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.