ಈ ಗಿಡಗಳು ನಿಮ್ಮ ಮನೆಯಲ್ಲಿದ್ದರೆ ಹಾವುಗಳು ಅತ್ತ ಕಡೆ ತಲೆನೂ ಹಾಕಲ್ಲ!

Plants To Keep Snakes Away: ಇಂತಹ ಗಿಡಗಳನ್ನು ನಿಮ್ಮ ಮನೆಯ ಆವರಣದಲ್ಲಿ ಅಥವಾ ಹಿತ್ತಲಲ್ಲಿ ಬೆಳೆಸಿದರೆ ಹಾವುಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ ಎನ್ನುತ್ತಾರೆ ಉರಗ ವಿಜ್ಞಾನ ತಜ್ಞರು.   

Written by - Chetana Devarmani | Last Updated : Oct 13, 2023, 11:07 AM IST
  • ಈ ಗಿಡಗಳು ಹಾವುಗಳ ಬಾಧೆಯನ್ನು ನಿವಾರಿಸುತ್ತವೆ
  • ನಿಮ್ಮ ಮನೆಯ ಬಳಿ ಇಂತಹ ಗಿಡಗಳನ್ನು ಬೆಳೆಸಿ
  • ಚೆಂಡು ಹೂವುಗಳು ನಂಬರ್ 1 ಹಾವು ನಿವಾರಕ
ಈ ಗಿಡಗಳು ನಿಮ್ಮ ಮನೆಯಲ್ಲಿದ್ದರೆ ಹಾವುಗಳು ಅತ್ತ ಕಡೆ ತಲೆನೂ ಹಾಕಲ್ಲ! title=

Plants To Keep Snakes Away : ಹಾವುಗಳು ಮನೆಯೊಳಗೆ ಪ್ರವೇಶಿಸಿದರೆ, ಅದನ್ನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಇಲ್ಲದಿದ್ದರೆ ಹಾವು ಯಾವಾಗ, ಎಲ್ಲಿಂದ ಬಂದು ಕಚ್ಚುತ್ತದೆ ಎಂಬ ಭಯ ನಮ್ಮನ್ನು ಕಾಡುತ್ತದೆ. ಆದರೆ ನಿಮ್ಮ ಮನೆಯ ಆವರಣದಲ್ಲಿ ಅಥವಾ ಹಿತ್ತಲಲ್ಲಿ ಇಂತಹ ಗಿಡಗಳನ್ನು ಬೆಳೆಸಿದರೆ ಹಾವುಗಳು ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ ಎನ್ನುತ್ತಾರೆ ಉರಗ ವಿಜ್ಞಾನದ ತಜ್ಞರು. ಹಾವುಗಳಿಗೆ ಹಾನಿಯಾಗದಂತೆ ಮನೆ ಬಳಿ ಬರುವುದನ್ನು ತಡೆಯಲು ಗಿಡಗಳನ್ನು ನೆಡುವ ಆಲೋಚನೆ ಇದಾಗಿದೆ.  

ತುಳಸಿ ಗಿಡ : ತುಳಸಿ ಸಸ್ಯವು ಅತ್ಯಂತ ಪವಿತ್ರವಾದ ಸಸ್ಯ. ತುಳಸಿ ಗಿಡವನ್ನು ಪೂಜಿಸುವುದರಿಂದ ಸಕಲ ಸೌಭಾಗ್ಯ ಲಭಿಸುತ್ತದೆ ಎಂಬ ಪ್ರಾಚೀನ ನಂಬಿಕೆಯೂ ಇದೆ. ತುಂಬಾ ಜನರಿಗೆ ಗೊತ್ತಿರದ ಇನ್ನೊಂದು ವಿಷಯವೆಂದರೆ ನಿಮ್ಮ ಹೊಲದಲ್ಲಿ ಅಥವಾ ನಿಮ್ಮ ಮನೆಯ ಆವರಣದಲ್ಲಿ ತುಳಸಿ ಗಿಡಗಳಿದ್ದರೆ ಅವುಗಳಿಂದ ಬರುವ ಕಟುವಾದ ವಾಸನೆಯಿಂದ ಹಾವುಗಳು ನಿಮ್ಮ ಮನೆಯ ಸಮೀಪವೂ ಬರುವುದಿಲ್ಲ.

ಬ್ರಹ್ಮಜೆಮು ಮತ್ತು ನಾಗಾಜೆಮು ಗಿಡಗಳು: ಹಾವುಗಳು ಬ್ರಹ್ಮಜೇಮು ಮತ್ತು ನಾಗಜೆಮು ಮುಂತಾದ ಸಸ್ಯಗಳನ್ನು ತಪ್ಪಿಸುತ್ತವೆ. ಬ್ರಹ್ಮಜೆಮು, ನಾಗಜೆಮು ಗಿಡಗಳ ಎಲೆ ಮತ್ತು ಕಾಂಡಗಳಲ್ಲಿ ಮುಳ್ಳು ಇರುವುದರಿಂದ ಹಾವುಗಳು ಅವುಗಳಿಗೆ ಹಾನಿಯಾಗುತ್ತವೆ ಎಂಬ ಭಯದಿಂದ ಓಡುತ್ತವೆ. 

ಇದನ್ನೂ ಓದಿ : White Hair : ದಟ್ಟ, ಉದ್ದ.. ಕಪ್ಪಾದ ಕೇಶರಾಶಿಗೆ ಈ ತರಕಾರಿಯ ಎಣ್ಣೆ ಬಳಸಿ ! 

ಹಾಲಿ ಮರ: ಹಾಲಿ ಮರದ ಎಲೆಗಳ ಅಂಚುಗಳು ಮುಳ್ಳಿನ ಆಕಾರದಲ್ಲಿರುತ್ತವೆ, ಆದ್ದರಿಂದ ಹಾವುಗಳು ಅವುಗಳ ಬಳಿ ಹೋದರೆ ಹಾನಿಯಾಗುವ ಭಯದಿಂದ ಅವುಗಳನ್ನು ತಪ್ಪಿಸುತ್ತವೆ.

ಗೋಧಿ ಹುಲ್ಲು : ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಗೋಧಿ ಹುಲ್ಲಿನ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಗೋಧಿ ಹುಲ್ಲು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗೋಧಿ ಹುಲ್ಲಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿದೆ. ಆದರೆ ಇದು ಹಾವುಗಳನ್ನು ದೂರವಿರಿಸಲು ಹಾವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಗೋಧಿ ಹುಲ್ಲಿನಿಂದ ಒಂದು ರೀತಿಯ ಆಮ್ಲೀಯ ವಾಸನೆಯು ಹಾವುಗಳನ್ನು ಪ್ರದೇಶದಿಂದ ದೂರವಿರಿಸುತ್ತದೆ.

ಇದನ್ನೂ ಓದಿ : ಹೇರ್‌ ಡೈ ಬೇಕಿಲ್ಲ.. ಒಂದೇ ವಾರದಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುತ್ತೆ ಈ ಮಸಾಲೆಯ ನೀರು! 

ಚೆಂಡು ಹೂವು : ಚೆಂಡು ಹೂವುಗಳು ನಂಬರ್ 1 ಹಾವು ನಿವಾರಕಗಳಾಗಿವೆ. ಚೆಂಡು ಹೂವು ಗಿಡಗಳಿಂದ ಒಂದು ರೀತಿಯ ಬಲವಾದ ಕಟುವಾದ ವಾಸನೆಯನ್ನು ಹೊರಸೂಸಲಾಗುತ್ತದೆ. ಆ ವಾಸನೆ ಹಾವುಗಳನ್ನು ದೂರವಿಡುತ್ತದೆ.

ಮಚ್ಚಿಪತ್ರಿ ಗಿಡಗಳು: ಮಚ್ಚಿಪತ್ರಿ ಗಿಡದ ಎಲೆಗಳಿಂದ ಹೊರಸೂಸುವ ಕಟುವಾದ ವಾಸನೆಯು ಹಾವುಗಳು ಮನೆಯೊಳಗೆ ಬರದಂತೆ ತಡೆಯುತ್ತದೆ.

ಈರುಳ್ಳಿ - ಬೆಳ್ಳುಳ್ಳಿ: ಈರುಳ್ಳಿ ಮತ್ತು ಬೆಳ್ಳುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲ, ಅವುಗಳ ಕಟುವಾದ ವಾಸನೆಯು ಹಾವುಗಳನ್ನು ಹಿಮ್ಮೆಟ್ಟಿಸುತ್ತದೆ.  

ಪಿಂಕ್ ಅಗಾಪಂಥಸ್ ಸಸ್ಯಗಳು: ಗುಲಾಬಿ ಅಗಾಪಂಥಸ್ ಸಸ್ಯಗಳು ಸಹ ಈರುಳ್ಳಿ ಕುಲದ ಸಸ್ಯಗಳಾಗಿವೆ. ಗುಲಾಬಿ ಅಗಾಪಂಥಸ್ ಸಸ್ಯಗಳು ಸಹ ಈರುಳ್ಳಿಯಂತೆಯೇ ಕಟುವಾದ ವಾಸನೆಯನ್ನು ಹೊರಸೂಸುತ್ತವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News